
ವಾಷಿಂಗ್ಟನ್: ಭಾರತ ಮತ್ತು ಚೀನಾ ದೇಶಗಳು ರಷ್ಯಾ-ಉಕ್ರೇನ್ ಯುದ್ಧದ ಪ್ರಾಥಮಿಕ ನಿರ್ಮಾಪಕರಾಗಿದ್ದು, ಕೂಡಲೇ ರಷ್ಯಾದಿಂದ ಇಂಧನ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಂದು ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಉಕ್ರೇನ್ ಯುದ್ಧಕ್ಕೆ ಭಾರತ ಮತ್ತು ಚೀನಾ 'ಪ್ರಾಥಮಿಕ ಹಣಕಾಸು ಒದಗಿಸುವವರು' ಎಂದು ಕರೆದಿದ್ದು, ಯುರೋಪ್ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ರಷ್ಯಾದ ತೈಲ ಖರೀದಿಯನ್ನು ಮುಂದುವರಿಸುವ ಮೂಲಕ ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಯುದ್ಧಕ್ಕೆ ಚೀನಾ ಮತ್ತು ಭಾರತ ದೇಶಗಳು "ಪ್ರಾಥಮಿಕ ಹಣಕಾಸು ಒದಗಿಸುತ್ತಿದ್ದಾರೆ. ಚೀನಾ ಮತ್ತು ಭಾರತ ತಮ್ಮ ಖರೀದಿಗಳ ಮೂಲಕ ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸುತ್ತಿವೆ. ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಟ್ರಂಪ್ ಒತ್ತಾಯಿಸಿದರು.
"ಅವರು ರಷ್ಯಾದಿಂದ ಎಲ್ಲಾ ಇಂಧನ ಖರೀದಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾವೆಲ್ಲರೂ ಬಹಳಷ್ಟು ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ" ಎಂದು ಟ್ರಂಪ್ ಕಿಡಿಕಾರಿದರು.
ವಲಸಿಗರಿಂದ ಯೂರೋಪ್ ನರಕವಾಗುತ್ತಿದೆ
ಇದೇ ವೇಳೆ ಯೂರೋಪ್ ನ ವಲಸಿಗರ ವಿರುದ್ಧ ಕೆಂಡ ಕಾರಿದ ಟ್ರಂಪ್, ವಲಸೆಯಿಂದಾಗಿ ಯುರೋಪಿಯನ್ ಮಿತ್ರರಾಷ್ಟ್ರಗಳು "ನರಕ"ಕ್ಕೆ ಹೋಗುತ್ತಿವೆ. ಮುಕ್ತ ಗಡಿಗಳ ವಿಫಲ ಪ್ರಯೋಗವನ್ನು ಕೊನೆಗೊಳಿಸುವ ಸಮಯ ಇದಾಗಿದೆ ಟ್ರಂಪ್ ಸಾಮಾನ್ಯ ಸಭೆಯಲ್ಲಿ ಹೇಳಿದರು.
ಕೊನೆಯಲ್ಲಿ ವಿಶ್ವಸಂಸ್ಥೆ ವಿರುದ್ಧವೂ ಕಿಡಿಕಾರಿದ ಟ್ರಂಪ್, 'ವಿಶ್ವಸಂಸ್ಥೆಯು ಅಂತಹ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಈ ಮಾತನ್ನು ನಾನು ಯಾವಾಗಲೂ ಹೇಳಿದ್ದೇನೆ. ಆದರೆ ಅದು ತನ್ನ ಸಾಮರ್ಥ್ಯದ ಹತ್ತಿರವೂ ಬರುತ್ತಿಲ್ಲ. ವಿಶ್ವಸಂಸ್ಥೆ ಶಾಂತಿಗೆ ಸಹಾಯ ಮಾಡುವುದಿಲ್ಲ" ಎಂದು ಟ್ರಂಪ್ ವ್ಯಂಗ್ಯ ಮಾಡಿದರು.
ಈ ನಡುವೆ ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕವನ್ನು ಭಾರತ "ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ" ಎಂದು ಕರೆದಿದೆ. ಅಂತೆಯೇ 'ಯಾವುದೇ ಪ್ರಮುಖ ಆರ್ಥಿಕತೆಯಂತೆ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾರತ ಪುನರುಚ್ಚರಿಸಿದೆ.
Advertisement