
ವಾಷಿಂಗ್ಟನ್: ಗಾಜಾ ಸಂಘರ್ಷದಲ್ಲಿ ಶಾಂತಿ ಸ್ಥಾಪಿಸಲು ತುಂಬಾ ಹತ್ತಿರದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದ ನಂತರ ಬಿಡುಗಡೆ ಮಾಡಿದ 20 ಅಂಶಗಳ ಯೋಜನೆಯಡಿಯಲ್ಲಿ ಇಸ್ರೇಲ್ ಮುತ್ತಿಗೆ ಹಾಕಿದ ಪಟ್ಟಿಯಿಂದ ಹಂತಗಳಲ್ಲಿ ಹಿಂದೆ ಸರಿಯುತ್ತದೆ ಎಂದು ಹೇಳಿದರು.
ಬೆಂಜಮಿನ್ ನೆತನ್ಯಾಹು ಜೊತೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಶಾಂತಿ ಯೋಜನೆಗೆ ಒಪ್ಪಿಕೊಂಡಿದ್ದಕ್ಕಾಗಿ ಇಸ್ರೇಲ್ ಗೆ ಧನ್ಯವಾದ ಹೇಳಿದರು ಮತ್ತು ಹಮಾಸ್ ಸಹ ಅದನ್ನು ಸ್ವೀಕರಿಸುತ್ತದೆ ಎಂದು ತಾವು ಆಶಿಸುವುದಾಗಿ ಹೇಳಿದರು.
ಈ ಯೋಜನೆಗೆ ಒಪ್ಪಿಕೊಂಡಿದ್ದಕ್ಕಾಗಿ ಮತ್ತು ನಾವು ಒಟ್ಟಾಗಿ ಕೆಲಸ ಮಾಡಿದರೆ, ಹಲವು ವರ್ಷಗಳಿಂದ ನೋಡುತ್ತಿರುವ ಸಾವು ಮತ್ತು ವಿನಾಶವನ್ನು ಕೊನೆಗೊಳಿಸಬಹುದು ಎಂದು ಪ್ರಧಾನಿ ನೆತನ್ಯಾಹು ಅವರು ಮನದಟ್ಟು ಮಾಡಿಕೊಂಡಿದ್ದಾರೆ ಎಂದರು.
ಗಾಜಾದಲ್ಲಿ ಸಾವಿನ ಸಂಖ್ಯೆ 66,000 ಮೀರಿದೆ, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು, ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಗುಂಪುಗಳು ಇಸ್ರೇಲ್‌ನ ಕ್ರಮಗಳು ನರಮೇಧಕ್ಕೆ ಸಮನಾಗಿದೆ ಎಂದು ತೀರ್ಮಾನಿಸಿವೆ.
ಶಾಂತಿ ಯೋಜನೆಯ ಕುರಿತು ಮಾತನಾಡಿದ ಟ್ರಂಪ್, ಇಸ್ರೇಲ್ ಪಡೆಗಳು ಪ್ಯಾಲೆಸ್ತೀನ್ ಪ್ರದೇಶದಿಂದ ಹಂತಗಳಲ್ಲಿ ಹಿಂದೆ ಸರಿಯಲು ಸಮಯಸೂಚಿಯನ್ನು ರೂಪಿಸಲಾಗುವುದು ಎಂದು ಹೇಳಿದರು. ಗಾಜಾದಲ್ಲಿ ಹೊಸ ಪರಿವರ್ತನಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತಾ, ಇಸ್ರೇಲ್ ಪಡೆಗಳು ಹಂತ ಹಂತವಾಗಿ ಹಿಂತೆಗೆದುಕೊಳ್ಳುವ ಸಮಯವನ್ನು ಸಂಬಂಧಪಟ್ಟವರೆಲ್ಲಾ ಒಪ್ಪಿಕೊಳ್ಳುತ್ತಾರೆ ಎಂದರು.
ಹಮಾಸ್ ಇನ್ನೂ ಅನುಮೋದನೆ ನೀಡಿಲ್ಲ ಆದರೆ ಉಗ್ರಗಾಮಿ ಗುಂಪು ಪರವಾಗಿರುವುದಾಗಿ ಅವರು ಆಶಿಸಿದ್ದಾರೆ ಎಂದು ಟ್ರಂಪ್ ಹೇಳಿದರು. ಆದಾಗ್ಯೂ, ಸಶಸ್ತ್ರ ಪ್ಯಾಲೆಸ್ತೀನಿಯನ್ ಗುಂಪು ವಾಷಿಂಗ್ಟನ್‌ನ ಶಾಂತಿ ಪ್ರಸ್ತಾಪವನ್ನು ತಿರಸ್ಕರಿಸಿದರೆ ಹಮಾಸ್ ನ್ನು ನಾಶಮಾಡಲು ಇಸ್ರೇಲ್ ತನ್ನ ಸಂಪೂರ್ಣ ಬೆಂಬಲವನ್ನು ಹೊಂದಿರುತ್ತದೆ ಎಂದು ಅಮೆರಿಕ ಅಧ್ಯಕ್ಷರು ಎಚ್ಚರಿಸಿದ್ದಾರೆ.
ಹಮಾಸ್‌ನ ಬೆದರಿಕೆಯನ್ನು ನಾಶಮಾಡುವ ಕೆಲಸವನ್ನು ಪೂರ್ಣಗೊಳಿಸಲು ಇಸ್ರೇಲ್‌ಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ ಆದರೆ ನಾವು ಶಾಂತಿಗಾಗಿ ಒಪ್ಪಂದವನ್ನು ಮಾಡಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ ಉಳಿದವರೆಲ್ಲರೂ ಅದನ್ನು ಒಪ್ಪಿಕೊಂಡಿದ್ದಾರೆ ಆದರೆ ನಮಗೆ ಸಕಾರಾತ್ಮಕ ಉತ್ತರ ಸಿಗುತ್ತದೆ ಎಂಬ ಭಾವನೆ ನನಗಿದೆ ಎಂದರು.
Advertisement