"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

“ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಅವರ ಮೇಲೆ ಅತ್ಯಂತ ಕಠಿಣ ದಾಳಿ ನಡೆಸಲಿದ್ದೇವೆ. ಅವರನ್ನು ಅವರು ಈ ಹಿಂದೆ ಸೇರಿದ್ದ ಶಿಲಾಯುಗಕ್ಕೆ ಹಿಂತಿರುಗಿಸುತ್ತೇವೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದರು.
US President Donald Trump- China President Xi Jinping
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್online desk
Updated on

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ವಿರುದ್ಧ ನೀಡಿದ್ದ “ಅವರನ್ನು ಶಿಲಾಯುಗಕ್ಕೆ ಹಿಂತಿರುಗಿಸುತ್ತೇವೆ” ಎಂಬ ಇತ್ತೀಚಿನ ಹೇಳಿಕೆಗಳಿಗೆ ಚೀನಾ ಗುರುವಾರ ಪ್ರತಿಕ್ರಿಯಿಸಿದೆ.

ಉದ್ವಿಗ್ನತೆಯನ್ನು ಹೆಚ್ಚಿಸುವುದರಿಂದ ಸಂಘರ್ಷ ಪರಿಹಾರವಾಗುವುದಿಲ್ಲ ಎಂದು ಚೀನಾ ಒತ್ತಿ ಹೇಳಿದೆ ಎಂದು ಚೈನಾ ಡೇಲಿ ವರದಿ ಮಾಡಿದೆ. “ಯಾವುದೇ ಸಮಸ್ಯೆಯನ್ನು ಕೇವಲ ಸೇನಾ ಮಾರ್ಗಗಳಿಂದ ಮೂಲಭೂತವಾಗಿ ಪರಿಹರಿಸಲಾಗುವುದಿಲ್ಲ, ಸಂಘರ್ಷವನ್ನು ತೀವ್ರಗೊಳಿಸುವುದು ಯಾವುದೇ ಪಕ್ಷದ ಹಿತಾಸಕ್ತಿಗೆ ಅನುಕೂಲಕರವಲ್ಲ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಅವರ ಮಾತುಗಳನ್ನು ಚೈನಾ ಡೇಲಿ ಉಲ್ಲೇಖಿಸಿದೆ.

ಟ್ರಂಪ್ ಅವರು ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಮೆರಿಕಾ “ಇರಾನ್ ಮೇಲೆ ಅತ್ಯಂತ ಕಠಿಣ ದಾಳಿ ನಡೆಸಲಿದ್ದೇವೆ” ಎಂದು ಹೇಳಿದ ನಂತರ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚುವ ಭೀತಿಯ ನಡುವೆ ಚೀನಾದ ಈ ಪ್ರತಿಕ್ರಿಯೆ ಬಂದಿದೆ.

ಇದಕ್ಕೂ ಮುನ್ನ, ಪ್ರಾದೇಶಿಕ ಸಂಘರ್ಷದ ನಡುವೆ ಇರಾನ್ ಮುಂದಿನ ವಾರಗಳಲ್ಲಿ ಗಂಭೀರ ಸೇನಾ ಕ್ರಮವನ್ನು ಎದುರಿಸಬೇಕಾಗಬಹುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ವಾಷಿಂಗ್ಟನ್ ಕೈಗೊಳ್ಳುತ್ತಿರುವ ಕ್ರಮಗಳು ಇರಾನ್‌ನ “ದುಷ್ಟ ಬೆದರಿಕೆ”ಯನ್ನು ಅಮೆರಿಕಾ ಮತ್ತು ಜಗತ್ತಿಗೆ ಅಂತ್ಯಗೊಳಿಸುವ ಹಂತಕ್ಕೆ ಬಂದಿವೆ ಎಂದು ಅವರು ಹೇಳಿದ್ದರು.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಭಾಷಣದಲ್ಲಿ, ಒಂದು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರಿದಿರುವ ಸಂಘರ್ಷಕ್ಕೆ ತೆರೆ ಎಳೆಯುವ ಒಪ್ಪಂದದ ಬಗ್ಗೆ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಇರಾನ್ ಮೇಲೆ “ಅತ್ಯಂತ ಕಠಿಣ” ಹೊಡೆತ ಬೀಳಲಿದೆ ಎಂದು ಟ್ರಂಪ್ ಹೇಳಿದ್ದರು.

“ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಅವರ ಮೇಲೆ ಅತ್ಯಂತ ಕಠಿಣ ದಾಳಿ ನಡೆಸಲಿದ್ದೇವೆ. ಅವರನ್ನು ಅವರು ಈ ಹಿಂದೆ ಸೇರಿದ್ದ ಶಿಲಾಯುಗಕ್ಕೆ ಹಿಂತಿರುಗಿಸುತ್ತೇವೆ. ಈ ನಡುವೆ ಚರ್ಚೆಗಳು ಮುಂದುವರಿದಿವೆ” ಎಂದು ಅಮೆರಿಕಾ ಅಧ್ಯಕ್ಷರು ಹೇಳಿದ್ದರು.

US President Donald Trump- China President Xi Jinping
Watch | ಪಶ್ಚಿಮ ಏಷ್ಯಾ ಯುದ್ಧ: ಚೀನಾ ಮೌನವಾಗಿದೆ ಏಕೆ ಗೊತ್ತಾ?

ಟೆಹ್ರಾನ್‌ನಲ್ಲಿ ನಡೆಯುತ್ತಿರುವ ಅಮೆರಿಕಾ ಮತ್ತು ಇಸ್ರೇಲ್ ಸೈನಿಕ ಕ್ರಮಗಳ ಪರಿಣಾಮವಾಗಿ “ಆಡಳಿತ ಬದಲಾವಣೆ” ಸಂಭವಿಸಿದೆ ಎಂದು ಅವರು ಮತ್ತಷ್ಟು ದೂರಿದರು. ಆದರೆ ಇದು ವಾಷಿಂಗ್ಟನ್‌ನ ಅಧಿಕೃತ ಗುರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸೇನಾ ಕ್ರಮಗಳಿಂದ ಇರಾನ್ ಇಸ್ಲಾಮಿಕ್ ಗಣರಾಜ್ಯದ ಪ್ರಮುಖ ನಾಯಕತ್ವದಲ್ಲಿ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು. “ಆಡಳಿತ ಬದಲಾವಣೆ ನಮ್ಮ ಗುರಿಯಲ್ಲ. ನಾವು ಎಂದಿಗೂ ಆಡಳಿತ ಬದಲಾವಣೆ ನಮ್ಮ ಗುರಿ ಎಂದು ಹೇಳಿಲ್ಲ. ಆದರೆ ಅವರ ಮೂಲ ನಾಯಕರ ಮರಣದಿಂದ ಆಡಳಿತ ಬದಲಾವಣೆ ಸಂಭವಿಸಿದೆ. ಅವರ ಮೂಲ ನಾಯಕರೆಲ್ಲ ಸತ್ತಿದ್ದಾರೆ” ಎಂದು ಟ್ರಂಪ್ ಹೇಳಿದರು. ವಾಷಿಂಗ್ಟನ್‌ನ ಗುರಿಗಳು ಈಡೇರುವವರೆಗೆ ಸೈನಿಕ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಅಮೆರಿಕಾ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com