ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆ ಗಾಯದ ಮೇಲೆ ಬರೆಯಂತಾಗಿದೆ.
Pakistan Govt cuts petrol price
ಪಾಕಿಸ್ತಾನದಲ್ಲಿ ತೈಲೋತ್ಪನ್ನಗಳ ದರ ಇಳಿಕೆ
Updated on

ಇಸ್ಲಾಮಾಬಾದ್: ಇರಾನ್ ಯುದ್ಧದ ನಡುವೆಯೇ ಜಗತ್ತಿನಾದ್ಯಂತ ಇಂಧನ ಕೊರತೆ ಗಂಭೀರವಾಗಿದ್ದು, ಇದರ ಬೆನ್ನಲ್ಲೇ ತೈಲೋತ್ಪನ್ನಗಳ ದರ ಏರಿಕೆಯಾಗಿ ಜನರಿಗೆ ಗಾಯದ ಮೇಲೆ ಬರೆ ಎಳೆದಿತ್ತು.

ಅಂತೆಯೇ ನೆರೆಯ ಪಾಕಿಸ್ತಾನದಲ್ಲೂ ಕೂಡ ಇಂಧನ ದರ ಏರಿಕೆ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದ್ದು, ಒಂದೆಡೆ ಇಂಧನ ಕೊರತೆ ಮತ್ತು ಮತ್ತೊಂದೆ ಇಂಧನ ದರ ಏರಿಕೆ ಪಾಕಿಸ್ತಾನಿ ನಾಗರೀಕರಿಗೆ ದುಬಾರಿಯಾಗಿ ಪರಿಣಮಿಸಿದೆ.

ಈಗಾಗಲೇ ಪಾಕಿಸ್ತಾನದಲ್ಲಿ ಇಂಧನ ದರ ದುಬಾರಿಯಾಗಿದ್ದು, ಇದೀಗ ಇರಾನ್ ಯುದ್ಧದ ನಡುವೆ ಮತ್ತೆ ದರ ದುಬಾರಿಯಾಗಿದೆ. ಮೂಲಗಳ ಪ್ರಕಾರ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ ಶೇ.42.7 ರಷ್ಟು ಅಂದರೆ 137.24 ರೂ ಏರಿಕೆಯಾಗಿ 458.40 ರೂಗೆ ಹೆಚ್ಚಳವಾಗಿದೆ. ಅಂತೆಯೇ ಡೀಸೆಲ್ ದರದಲ್ಲಿ ಕೂಡ ಶೇ.54.9ರಷ್ಟು ಅಂದರೆ 184.49ರೂ ಏರಿಕೆಯಾಗಿ 520.35 pkrಗೆ ಹೆಚ್ಚಳವಾಗಿದೆ.

ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆ ಗಾಯದ ಮೇಲೆ ಬರೆಯಂತಾಗಿದೆ. ಇದು ಮತ್ತೆ ದಿನಬಳಕೆ ವಸ್ತುಗಳ ದರ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ.

Pakistan Govt cuts petrol price
ಪೆಟ್ರೋಲ್ ದರ ಮತ್ತೆ ಗಗನಕ್ಕೆ; ಲೀಟರ್ ಗೆ 458 ರೂ, ಡೀಸೆಲ್ 520 ರೂ ಗೆ ಏರಿಕೆ; ಸಂಯಮ ವಹಿಸಿ ಎಂದ ಮಾಜಿ ಕ್ರಿಕೆಟಿಗ!

ದಿಢೀರ್ ಬೆಲೆ ಏರಿಕೆ

ಗುರುವಾರ ಸರ್ಕಾರ ಪೆಟ್ರೋಲ್ ಮತ್ತು ಹೈ-ಸ್ಪೀಡ್ ಡೀಸೆಲ್ (HSD) ಬೆಲೆಗಳಲ್ಲಿ ಕ್ರಮವಾಗಿ ಶೇ. 43 ಮತ್ತು ಶೇ. 55 ರಷ್ಟು ಅಭೂತಪೂರ್ವ ಹೆಚ್ಚಳವನ್ನು ಘೋಷಿಸಿತು. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ PKR 321.17 ರಿಂದ PKR 458.41 ಕ್ಕೆ ಏರಿಸಲಾಗಿದ್ದು, ಸರ್ಕಾರದ ಲೆವಿ ಪ್ರತಿ ಲೀಟರ್‌ಗೆ PKR 105 ರಿಂದ PKR 160 ಕ್ಕೆ ಏರಿತ್ತು. ಸರ್ಕಾರವು HSD ಬೆಲೆಯನ್ನು ಲೀಟರ್‌ಗೆ PKR 184.49 ರಷ್ಟು ಹೆಚ್ಚಿಸಿತ್ತು.

ವ್ಯಾಪಕ ಪ್ರತಿಭಟನೆ

ಇತ್ತ ಇಂಧನ ದರ ಏರಿಕೆಯನ್ನು ಖಂಡಿಸಿ ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಈಗಾಗಲೇ ತೈಲೋತ್ಪನ್ನಗಳಿಗೆ ನಾವು ದುಬಾರಿ ಹಣ ನೀಡುತ್ತಿದ್ದು, ಇದೀಗ ಮತ್ತೆ ಬೆಲೆ ಏರಿಕೆಯಿಂದಾಗಿ ತೈಲೋತ್ಪನ್ನಗಳು ಇನ್ನೂ ದುಬಾರಿಯಾಗಿದೆ ಎಂದು ಪಾಕಿಸ್ತಾನಿಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ದೇಶಾದ್ಯಂತ ಈ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸರ್ಕಾರ ತೈಲೋತ್ಪನ್ನಗಳ ಬೆಲೆ ಇಳಿಕೆ ಮಾಡಿದೆ. ಇಂಧನ ಬೆಲೆಗಳಲ್ಲಿ ಅಭೂತಪೂರ್ವ ಏರಿಕೆ ತೀವ್ರ ವಿರೋಧಕ್ಕೆ ಕಾರಣವಾದ ಒಂದು ದಿನದ ನಂತರ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪೆಟ್ರೋಲ್ ಬೆಲೆಯನ್ನು 80 PKR ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.

ರಾತ್ರೋ ರಾತ್ರಿ ದರ ಇಳಿಕೆ

ಶುಕ್ರವಾರ ಮಧ್ಯರಾತ್ರಿ ಮಾಡಿದ ಭಾಷಣದಲ್ಲಿ ಶಹಬಾಜ್ ಷರೀಫ್ ಸರ್ಕಾರ ಪೆಟ್ರೋಲ್ ಲೆವಿಯನ್ನು ಲೀಟರ್‌ಗೆ 80 PKR ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಿದರು. ತೈಲೋತ್ಪನ್ನಗಳ ಮೇಲಿನ ಲೆವಿಯನ್ನು ಪಾಕ್ ಸರ್ಕಾರ ರದ್ದು ಮಾಡಿದ್ದು, ಲೆವಿಯನ್ನು PKR 335.86 ರಿಂದ PKR 520.35 ಕ್ಕೆ ಇಳಿಸಿದೆ. ಇದರಿಂದಾಗಿ ಅಂತಿಮ ಗ್ರಾಹಕರಿಗೆ 378 PKR ಗಳಿಗೆ ಸರಕು ಲಭ್ಯವಾಗಲಿದೆ.

"ನಾನು ಪೆಟ್ರೋಲ್ ಲೆವಿಯಲ್ಲಿ ಲೀಟರ್‌ಗೆ PKR 80 ರ ತಕ್ಷಣದ ಕಡಿತವನ್ನು ಘೋಷಿಸುತ್ತಿದ್ದೇನೆ" ಎಂದು ಪಾಕ್ ಪ್ರಧಾನಿ ಷರೀಫ್ ಅವರು ಹೇಳಿದರು. ಪ್ರತಿ ಲೀಟರ್‌ಗೆ PKR 378 ರ ಹೊಸ ಬೆಲೆ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಪರಿಷ್ಕೃತ ದರದಲ್ಲಿ ಪೆಟ್ರೋಲ್ ಲಭ್ಯವಿದೆ ಎಂದು ಹೇಳಿದರು. ಅಂತೆಯೇ ಕನಿಷ್ಠ ಒಂದು ತಿಂಗಳ ಕಾಲ ಪೆಟ್ರೋಲ್ ಬೆಲೆ ಬದಲಾಗದೆ ಉಳಿಯುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಷರೀಫ್ ಪಾಕಿಸ್ತಾನಿಯರಿಗೆ ಭರವಸೆ ನೀಡಿದ್ದಾರೆ.

ಅಂತೆಯೇ ಗಲ್ಫ್ ಪ್ರದೇಶದ ಪರಿಸ್ಥಿತಿಯು ಪೆಟ್ರೋಲಿಯಂ ಬೆಲೆಗಳ ಏರಿಕೆಗೆ ಕಾರಣವಾಗಿದೆ, ಆದರೆ ಸರ್ಕಾರವು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಎಚ್ಚರಿಕೆಯಿಂದ ಉಳಿತಾಯ ಮತ್ತು ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆಯ ಮೂಲಕ, ಹಣದುಬ್ಬರದ ಬಿರುಗಾಳಿಯಿಂದ ನಿಮ್ಮನ್ನು ರಕ್ಷಿಸಲು ನಾವು ಪ್ರಯತ್ನಿಸಿದ್ದೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com