ಅಮೆರಿಕದ ಬೆದರಿಕೆಗೆ ಬಗ್ಗದ ಇರಾನ್! ಶಾರ್ಜಾದಲ್ಲಿ ದೂರ ಸಂಪರ್ಕ ಕೇಂದ್ರದ ಮೇಲೆ ಕ್ಷಿಪಣಿ ದಾಳಿ: ಇಬ್ಬರಿಗೆ ಗಾಯ!

ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಗಾಯಗೊಂಡಿದ್ದು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ
Iran Attack Casual Images
ಇರಾನ್ ದಾಳಿಯ ಸಾಂದರ್ಭಿಕ ಚಿತ್ರ
Updated on

ಶಾರ್ಜಾ: ಅಮೆರಿಕದ ಯಾವುದೇ ಬೆದರಿಕೆಗೆ ಬಗ್ಗದ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ತನ್ನ ದಾಳಿಯನ್ನು ಮುಂದುವರೆಸಿದೆ. ಮಂಗಳವಾರ ಶಾರ್ಜಾದ ದೂರಸಂಪರ್ಕ ಕೇಂದ್ರವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಗಾಯಗೊಂಡಿದ್ದು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಯುಎಇಯ ಅಧಿಕೃತ ಎಮಿರೇಟ್ಸ್ ನ್ಯೂಸ್ ಏಜೆನ್ಸಿ (WAM) ಉಲ್ಲೇಖಿಸಿ ಅಲ್ ಜಜೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ UAE ರಕ್ಷಣಾ ಸಚಿವಾಲಯ, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದ್ದು, ಇರಾನ್ ನಿಂದ ಉಡಾವಣೆಯಾದ ಅನೇಕ ವೈಮಾನಿಕ ಬೆದರಿಕೆಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆಹಿಡಿದಿವೆ ಎಂದು ಹೇಳಿದೆ.

12 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 2 ಕ್ರೂಸ್ ಕ್ಷಿಪಣಿಗಳು ಮತ್ತು 19 UAV ದಾಳಿಗಳನ್ನು UAE ರಕ್ಷಣಾ ವ್ಯವಸ್ಥೆ ತಡೆದಿದೆ. ಏಪ್ರಿಲ್ 6 ರಂದು ಇರಾನ್ ನಿಂದ ಬಂದ ಸ್ಪೋಟಕಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದೆ.

ಇರಾನಿನ ಅಬ್ಬರದ ದಾಳಿಗಳು ಪ್ರಾರಂಭವಾದಾಗಿನಿಂದ, ಯುಎಇ ವಾಯು ರಕ್ಷಣೆಯು ಒಟ್ಟು 519 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 26 ಕ್ರೂಸ್ ಕ್ಷಿಪಣಿಗಳು ಮತ್ತು 2,210 UAV ಹಿಮ್ಮೆಟ್ಟಿಸಿದೆ. ಇತ್ತೀಚಿಗೆ ನಡೆದ ದಾಳಿಯಲ್ಲಿ 4 ವ್ಯಕ್ತಿಗಳಿಗೆ ಗಾಯಗಳಾಗಿವೆ.

Iran Attack Casual Images
West-Asia war: ಇರಾನ್'ನಿಂದ ಡ್ರೋನ್-ಮಿಸೈಲ್ ದಾಳಿ; ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ನಗರದಲ್ಲಿ ಭಾರೀ ಅಗ್ನಿ ಅವಘಡ

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಈಜಿಪ್ಟ್‌ನಂತಹ ಹಲವಾರು ದೇಶಗಳ ಪ್ರಜೆಗಳು ಸೇರಿದಂತೆ ಒಟ್ಟಾರೇ ಗಾಯಗೊಂಡವರ ಸಂಖ್ಯೆ 221 ಜನರನ್ನು ತಲುಪಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com