ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಫಾರ್ಸ್ ನ್ಯೂಸ್ ಏಜೆನ್ಸಿ ಹೇಳುವಂತೆ, ಜಲಸಂಧಿಯ ಕುರಿತು ಅಮೆರಿಕ ಅತಿಯಾದ ಬೇಡಿಕೆಗಳನ್ನು ಮಾಡುತ್ತಿದೆ. ಇತರ ಹಲವು ವಿಷಯಗಳ ಮೇಲೂ ಅನಗತ್ಯ ಬೇಡಿಕೆಗಳನ್ನು ಮುಂದಿಟ್ಟಿದೆ.
A police officer walks past a billboard regarding the United States and Iran negotiations, outside a media facilitation center in Islamabad, Pakistan
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರುವ ಮಾಧ್ಯಮ ಸಹಾಯ ಕೇಂದ್ರದ ಹೊರಗೆ, ಅಮೆರಿಕ ಮತ್ತು ಇರಾನ್ ಮಾತುಕತೆಗಳಿಗೆ ಸಂಬಂಧಿಸಿದ ಬಿಲ್‌ಬೋರ್ಡ್ ಪಕ್ಕವಾಗಿ ಒಬ್ಬ ಪೊಲೀಸ್ ಅಧಿಕಾರಿ ನಡೆದು ಹೋಗುತ್ತಿರುವುದು
Updated on

ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ನಿನ್ನೆ ಶನಿವಾರ ಪಾಕಿಸ್ತಾನದಲ್ಲಿ ಮುಖಾಮುಖಿ ಮಾತುಕತೆ ನಡೆಸಿದರು. 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಅತ್ಯಂತ ಮಹತ್ವದ ಮಾತುಕತೆ ಇದಾಗಿದ್ದು, ಪಶ್ಚಿಮ ಏಷ್ಯಾವನ್ನು ಹಿಂಸಾಚಾರಕ್ಕೆ ತಳ್ಳಿದ ಯುದ್ಧವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿವೆ.

ಮಾತುಕತೆಗಳು ತಡರಾತ್ರಿಯವರೆಗೆ ಮುಂದುವರಿದಾಗ, ಅಮೆರಿಕದ ಸೆಂಟ್ರಲ್ ಕಮಾಂಡ್ ಎರಡು ಯುದ್ಧನೌಕೆಗಳು ಪ್ರಮುಖ ಹಾರ್ಮುಜ್ ಜಲಸಂಧಿಯನ್ನು ದಾಟಿವೆ ಎಂದು ತಿಳಿಸಿತು. ಇದೇ ವೇಳೆ ಇರಾನ್ ಮಾಧ್ಯಮಗಳು, ಟೆಹ್ರಾನ್ ತಡೆಹಿಡಿದಿರುವ ಈ ಪ್ರಮುಖ ಜಲಮಾರ್ಗದ ಕುರಿತು ಅಮೆರಿಕ ಅತಿಯಾದ ಬೇಡಿಕೆಗಳನ್ನು ಒಡ್ಡುತ್ತಿವೆ ಎಂದು ಆರೋಪಿಸಿವೆ.

ಫಾರ್ಸ್ ನ್ಯೂಸ್ ಏಜೆನ್ಸಿ ಹೇಳುವಂತೆ, ಜಲಸಂಧಿಯ ಕುರಿತು ಅಮೆರಿಕ ಅತಿಯಾದ ಬೇಡಿಕೆಗಳನ್ನು ಮಾಡುತ್ತಿದೆ. ಇತರ ಹಲವು ವಿಷಯಗಳ ಮೇಲೂ ಅನಗತ್ಯ ಬೇಡಿಕೆಗಳನ್ನು ಮುಂದಿಟ್ಟಿದೆ.

ಇರಾನ್‌ನ ತಸ್ನೀಮ್ ನ್ಯೂಸ್ ಏಜೆನ್ಸಿಯ ಪ್ರಕಾರ, ಎರಡೂ ದೇಶಗಳು, ಚರ್ಚೆಯಲ್ಲಿರುವ ವಿಷಯಗಳ ಬಗ್ಗೆ ಲಿಖಿತ ಪಠ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿವೆ. ಈ ಮಧ್ಯೆ, ಇರಾನ್‌ನ ರಾಜ್ಯ ಪ್ರಸಾರ ಸಂಸ್ಥೆ IRIB ಭಾನುವಾರ ಮೂರನೇ ಹಂತದ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ನಿನ್ನೆ ಶನಿವಾರ ಮಧ್ಯಾಹ್ನ ಇಸ್ಲಾಮಾಬಾದ್‌ನಲ್ಲಿ ಮುಖಾಮುಖಿ ಮಾತುಕತೆ ಆರಂಭಗೊಂಡಿತು. ಆತಿಥೇಯ ರಾಷ್ಟ್ರ ಪಾಕಿಸ್ತಾನ ಭಾಗಿಯಾಗಿರುವ ತ್ರಿಪಕ್ಷೀಯ ನೇರ ಮಾತುಕತೆ ಇದು ಎಂದು ವೈಟ್ ಹೌಸ್‌ನ ಹಿರಿಯ ಅಧಿಕಾರಿ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ಮಧ್ಯವರ್ತಿಗಳ ಮೂಲಕ ಬೇರೆ ಬೇರೆ ಕೊಠಡಿಗಳಲ್ಲಿ ಮಾತುಕತೆ ನಡೆಸುವ ಪದ್ಧತಿಯಿಂದ ಇದು ವಿಭಿನ್ನವಾಗಿದೆ.

ಅಮೆರಿಕದ ಪ್ರತಿನಿಧಿ ಮಂಡಳಿಯನ್ನು ಉಪಾಧ್ಯಕ್ಷ ಜೆಡಿ ವೆನ್ಸ್, ವಿಶೇಷ ದೂತ ಸ್ಟೀವ್ ವಿಟ್‌ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ನೇತೃತ್ವವಹಿಸಿದ್ದರು. ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಯಾದ ನಂತರದ ಅತ್ಯುನ್ನತ ಮಟ್ಟದ ಅಮೆರಿಕ ಸಂಪರ್ಕ ಇದಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

70 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಇರಾನ್ ಪ್ರತಿನಿಧಿ ಮಂಡಳಿಯನ್ನು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ನೇತೃತ್ವವಹಿಸಿದ್ದರು. ಅವರೊಂದಿಗೆ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಕೂಡ ಇದ್ದರು.

ಇದಕ್ಕೂ ಮೊದಲು, ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರನ್ನು ಭೇಟಿಯಾದ ನಂತರ, ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ಆರಂಭಿಸಲು ಅವರು ನಿರ್ಧರಿಸಿದ್ದರು ಎಂದು ಇರಾನ್ ಮಾಧ್ಯಮ ವರದಿ ಮಾಡಿತ್ತು.

ಎರಡೂ ಪ್ರತಿನಿಧಿ ಮಂಡಳಿಗಳು ರಚನಾತ್ಮಕವಾಗಿ ಭಾಗವಹಿಸುತ್ತಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿಗಳು, ಈ ಮಾತುಕತೆಗಳು ಪ್ರದೇಶದಲ್ಲಿ ದೀರ್ಘಕಾಲಿಕ ಶಾಂತಿಯತ್ತ ಒಂದು ಹೆಜ್ಜೆಯಾಗಲಿ ಎಂದು ಆಶಿಸಿದ್ದಾರೆ ಎಂದು ಶರೀಫ್ ಕಚೇರಿ ಹೇಳಿದೆ.

ಇದೇ ವೇಳೆ, ಟ್ರಂಪ್ ಅಮೆರಿಕವು ಹಾರ್ಮುಜ್ ಜಲಸಂಧಿಯನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದೆ ಎಂದು ಹೇಳಿದ್ದಾರೆ. ಶಾಂತಿಯ ಸಮಯದಲ್ಲಿ ಜಗತ್ತಿನ ಐದನೇ ಭಾಗದ ಕಚ್ಚಾ ತೈಲ ಸಾಗುವ ಈ ಜಲಸಂಧಿಯನ್ನು ಇರಾನ್ ಬಹುತೇಕ ತಡೆಹಿಡಿದಿದೆ.

ಮೇಕ್ ಅರ್ ಬ್ರೇಕ್ ಹಂತ

ಅಮೆರಿಕದಿಂದ ಹೊರಡುವ ಮೊದಲು ವೆನ್ಸ್, ಎದುರಿಗಿರುವವರು ಸತ್ಯಸಂಧವಾಗಿ ಮಾತುಕತೆ ಮಾಡಲು ಸಿದ್ಧವಿದ್ದರೆ, ನಾವು ಸಹ ಸಹಕಾರದ ಕೈ ಚಾಚಲು ಸಿದ್ಧವಿದ್ದೇವೆ ಎಂದು ಹೇಳಿದ್ದರು. ಆದರೆ ಅವರು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಿದರೆ ನಾವು ಸಹಕರಿಸುವುದಿಲ್ಲ ಎಂದೂ ಹೇಳಿದರು.

ತಜ್ಞರ ಪ್ರಕಾರ, ಇರಾನ್ ಪ್ರತಿನಿಧಿ ಮಂಡಳಿಯ ಗಾತ್ರ ಮತ್ತು ಮಟ್ಟವು ಒಪ್ಪಂದಕ್ಕೆ ಬರುವ ಗಂಭೀರತೆಯನ್ನು ತೋರಿಸುತ್ತದೆ.

ಕ್ವಿನ್ಸಿ ಇನ್ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ತ್ರಿತಾ ಪಾರ್ಸಿ, ಇರಾನ್ ಪ್ರತಿನಿಧಿ ಮಂಡಳಿಯ ಗಾತ್ರ ಮತ್ತು ಹಿರಿಯತೆ ಈ ಮಾತುಕತೆಗಳ ಬಗ್ಗೆ ಟೆಹ್ರಾನ್ ನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಂದ ಯುದ್ಧ ವಿರಾಮದ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 200ಕ್ಕೂ ಹೆಚ್ಚು ಹೆಜ್ಬೊಲ್ಲಾ ಗುರಿಗಳನ್ನು ಹೊಡೆದಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ.


‘ಅಣ್ವಸ್ತ್ರ ಬೇಡ’

ಅಮೆರಿಕದ ಪರವಾಗಿ, ಟ್ರಂಪ್ ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಒತ್ತಾಯಿಸಿದ್ದಾರೆ. ಜಗತ್ತಿನ ಐದನೇ ಭಾಗದ ತೈಲ ಸಾಗುವ ಈ ಜಲಸಂಧಿ ಇನ್ನೂ ಸಾಮಾನ್ಯ ಸಂಚಾರಕ್ಕೆ ತೆರೆಯಲ್ಪಟ್ಟಿಲ್ಲ. ಆದರೆ “ಇರಾನ್ ಸಹಕಾರವಿದ್ದರೂ ಇಲ್ಲದಿದ್ದರೂ” ಶೀಘ್ರದಲ್ಲೇ ತೆರೆಯುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

ಇಸ್ಲಾಮಿಕ್ ಗಣರಾಜ್ಯವು ಅಣ್ವಸ್ತ್ರ ಹೊಂದಬಾರದು — ಇದು 99 ಶೇಕಡಾ ಮುಖ್ಯ ವಿಷಯ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com