ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್‌ನಿಂದ ಒಳ್ಳೆಯ ಸುದ್ದಿ ಬಂದಿದೆ. ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ತೆರೆಯಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಘೋಷಿಸಿದ್ದಾರೆ.
hormuz Strait
ಹಾರ್ಮುಜ್ ಜಲಸಂಧಿ
Updated on

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್‌ನಿಂದ ಒಳ್ಳೆಯ ಸುದ್ದಿ ಬಂದಿದೆ. ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ತೆರೆಯಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಘೋಷಿಸಿದ್ದಾರೆ. ಯಾವುದೇ ದೇಶದ ಹಡಗುಗಳನ್ನು ಇನ್ನು ಮುಂದೆ ಹಾರ್ಮುಜ್‌ನಲ್ಲಿ ತಡೆಯುವುದಿಲ್ಲ.

ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಲ್ಲಿರುವವರೆಗೆ ಹಾರ್ಮುಜ್ ಜಲಸಂಧಿಯು ಕೊಲ್ಲಿಯಿಂದ ಪೆಟ್ರೋಲಿಯಂ ಮತ್ತು ಇತರ ಉತ್ಪನ್ನಗಳನ್ನು ಪ್ರಪಂಚದ ಇತರ ಭಾಗಗಳಿಗೆ ಸಾಗಿಸುವ ವಾಣಿಜ್ಯ ಹಡಗುಗಳಿಗೆ ಮುಕ್ತವಾಗಿರುತ್ತದೆ ಎಂದು ಅರಗ್ಚಿ ಹೇಳಿದ್ದಾರೆ. ಇದಕ್ಕಾಗಿ ಕೆಲ ಷರತ್ತುಗಳನ್ನು ಇರಾನಿನ ವಿದೇಶಾಂಗ ಸಚಿವರು ವಿವರಿಸಿದ್ದಾರೆ.

hormuz Strait
ಹಾರ್ಮುಜ್‌ ತೆರವುಗೊಳಿಸುವ ಸಾಮರ್ಥ್ಯ ಯುರೋಪಿಯನ್ ರಾಷ್ಟ್ರಗಳಿಗೆ ಇದೆ: ಫ್ರಾನ್ಸ್

ಹಾರ್ಮುಜ್ ಜಲಸಂಧಿಯು ಅಂತಿಮವಾಗಿ ತೆರೆದುಕೊಂಡಿದೆ. ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ, ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಅನುಗುಣವಾಗಿ, ಇಸ್ಲಾಮಿಕ್ ಗಣರಾಜ್ಯದ ಬಂದರುಗಳು ಮತ್ತು ಸಮುದ್ರ ಸಂಸ್ಥೆ ಈ ಹಿಂದೆ ಘೋಷಿಸಿದ ಸಂಘಟಿತ ಮಾರ್ಗಕ್ಕೆ ಅನುಗುಣವಾಗಿ, ಕದನ ವಿರಾಮದ ಅವಧಿಯ ಉಳಿದ ಅವಧಿಗೆ ಹಾರ್ಮುಜ್ ಜಲಸಂಧಿಯನ್ನು ಅದರ ಮೂಲಕ ಸಾಗಿಸುವ ಎಲ್ಲಾ ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com