

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಯುದ್ಧ ಮುಂದುವರೆಸಿರುವಂತೆಯೇ OpenAI ನ B2B ಆ್ಯಪ್ ಮುಖ್ಯ ತಂತ್ರಜ್ಞಾನ ಅಧಿಕಾರಿ( CTO) ಶ್ರೀನಿವಾಸ್ ನಾರಾಯಣನ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಮೂರು ವರ್ಷಗಳ ನಂತರ ಮುಂದಿನ ವಾರದ ಕೊನೆಯಲ್ಲಿ ಕಂಪನಿಯನ್ನು ತೊರೆಯುವುದಾಗಿ ಶನಿವಾರ ಅವರು ಘೋಷಿಸಿದ್ದಾರೆ.
ಕೆಲವೊಂದು ಉತ್ಪನ್ನ ಬಿಡುಗಡೆ ನಂತರ ಇದೇ ಸರಿಯಾದ ಸಮಯ ಅನಿಸಿತು. ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವ ಮೊದಲು ಕುಟುಂಬದೊಂದಿಗೆ ಇರಲು ಭಾರತಕ್ಕೆ ತೆರಳಲು ಯೋಜಿಸಿರುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಲಿಂಕ್ಡ್‌ಇನ್‌ನಲ್ಲಿನ ಪೋಸ್ಟ್‌ಗಳಲ್ಲಿ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ OpenAI ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದೇನೆ. ಮೂರು ವರ್ಷ ಕಳೆದದ್ದು "ಹತ್ತು ವರ್ಷ ಕಳೆದಂತೆ ಭಾಸವಾಯಿತು. ಮುಂದಿನದನ್ನು ನಿರ್ಧರಿಸುವ ಮುನ್ನಾ ಭಾರತದಲ್ಲಿರುವ ನನ್ನ ವಯಸ್ಸಾದ ಪೋಷಕರೊಂದಿಗೆ ಸ್ವಲ್ಪ ಸಮಯ ಕಳೆಯಲು ಎದುರು ನೋಡುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
OpenAI ಸಿಇಒ ಸ್ಯಾಮ್ ಆಲ್ಟ್‌ಮನ್ ಮತ್ತು ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಇಂಜಿನಿಯರಿಂಗ್ ನ ಉಪಾಧ್ಯಕ್ಷರಾಗಿ OpenAI ಕಂಪನಿಗೆ ಸೇರಿದ್ದ ಶ್ರೀನಿವಾಸ್ ನಾರಾಯಣ್ ಅವರನ್ನು B2B ಅಪ್ಲಿಕೇಶನ್‌ಗಳ CTO ಆಗಿ ಬಡ್ತಿ ನೀಡಲಾಗಿತ್ತು. ChatGPT, API ಪ್ಲಾಟ್‌ಫಾರ್ಮ್ ಮತ್ತು OpenAI ನ ಎಂಟರ್‌ಪ್ರೈಸ್ ಪರಿಕರಗಳ ಹಿಂದಿನ ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸಿದರು.
ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿರುವ ಅವರು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ಐಬಿಎಂನ ಅಲ್ಮಾಡೆನ್ ಸಂಶೋಧನಾ ಕೇಂದ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. OpenAI ಗೂ ಮುನ್ನಾ ಮೆಟಾದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು.
Advertisement