US-Iran war:: ಅಮೆರಿಕಾ ನೌಕಾ ದಿಗ್ಭಂಧನ ಮುಂದುವರಿದರೆ ಹಾರ್ಮುಜ್ ಜಲಸಂಧಿ ತೆರೆಯಲ್ಲ; ಇರಾನ್ ಕಠಿಣ ನಿಲುವು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

ನೌಕಾ ದಿಗ್ಭಂಧನ ಕದನ ವಿರಾಮದ ಉಲ್ಲಂಘನೆಯಾಗಿದ್ದು, ಈ ಪರಿಸ್ಥಿತಿಯಲ್ಲಿ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಾಧ್ಯವಿಲ್ಲ.
European allies can clear mines in Hormuz: France
ಹಾರ್ಮುಜ್ ಜಲಸಂಧಿ
Updated on

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆ ಅಮೆರಿಕದ ನೌಕಾ ದಿಗ್ಭಂಧನ ಮುಂದುವರೆದರೆ ಹಾರ್ಮುಜ್ ಜಲಸಂಧಿ ಮರು ತೆರೆಯುವುದಿಲ್ಲ ಎಂದು ಕಟ್ಟುನಿಟ್ಟಿನ ಸಂದೇಶ ನೀಡಿದೆ. ಈ ಹೇಳಿಕೆ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇತ್ತೀಚೆಗೆ ಕದನ ವಿರಾಮ ವಿಸ್ತರಣೆ ಘೋಷಿಸಿದ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಗಳಿಗೆ ಅವಕಾಶ ನೀಡಲು ಪ್ರಯತ್ನಿಸುತ್ತಿರುವಾಗ, ಇರಾನ್ ಅದನ್ನು ಭಾಗಶಃ ಸ್ವಾಗತಿಸಿದರೂ ನೌಕಾ ತಡೆ ಮುಂದುವರಿದಿರುವುದು ಒಪ್ಪಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದೆ.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಮಾತನಾಡಿ, “ನೌಕಾ ದಿಗ್ಭಂಧನ ಕದನ ವಿರಾಮದ ಉಲ್ಲಂಘನೆ. ಈ ಪರಿಸ್ಥಿತಿಯಲ್ಲಿ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ಸಾಗರ ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಸರಬರಾಜಿನ ಸುಮಾರು ಐದನೇ ಭಾಗ ಈ ಮಾರ್ಗದ ಮೂಲಕ ಸಾಗುತ್ತದೆ. ಈ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾದರೆ, ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ತೈಲ ಬೆಲೆಗಳು ಏರಿಕೆಯಾಗಿವೆ.

ಈ ಉದ್ವಿಗ್ನ ಪರಿಸ್ಥಿತಿಯಲ್ಲಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಎರಡು ಹಡಗುಗಳನ್ನು ವಶಕ್ಕೆ ಪಡೆದಿದೆ. ಪನಾಮಾ ಧ್ವಜದ MSC ಫ್ರಾನ್ಸೆಸ್ಕಾ ಮತ್ತು ಲೈಬೀರಿಯಾ ಧ್ವಜದ ಎಪಾಮಿನೊಂಡಾಸ್ ಹಡಗುಗಳನ್ನು ನಿಯಮ ಉಲ್ಲಂಘನೆ ಆರೋಪದಡಿ ತಡೆದು ಕರಾವಳಿಗೆ ಕರೆದೊಯ್ಯಲಾಗಿದೆ.

European allies can clear mines in Hormuz: France
ಮುಂದಿನ ಮೂರು ದಿನಗಳಲ್ಲಿ ಮಾತುಕತೆ: ಡೊನಾಲ್ಡ್ ಟ್ರಂಪ್; ಅಮೆರಿಕವನ್ನು ತುದಿಗಾಲಲ್ಲಿ ನಿಲ್ಲಿಸಿದ ಇರಾನ್!

ಕೆಲವು ವರದಿಗಳ ಪ್ರಕಾರ, ಇನ್ನೂ ಕೆಲವು ಹಡಗುಗಳ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ, ಆದರೆ ಪ್ರಾಣಹಾನಿ ಸಂಭವಿಸಿಲ್ಲ.

ಅಮೆರಿಕಾದ ನೌಕಾಪಡೆ ಇರಾನ್ ಬಂದರುಗಳಿಗೆ ಸಾಗುವ ಹಡಗುಗಳನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದ್ದು, ಇದರಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕದ ರಕ್ಷಣಾ ಇಲಾಖೆ ಸಹ ಕೆಲವು ಹಡಗುಗಳನ್ನು ತಡೆದು ಪರಿಶೀಲಿಸಿರುವುದಾಗಿ ತಿಳಿಸಿದೆ.

ಇದರ ನಡುವೆ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಇರಾನ್ ಈ ಮಾತುಕತೆಗಳಲ್ಲಿ ಭಾಗವಹಿಸುವುದಾಗಿ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಅಮೆರಿಕದ ಉಪಾಧ್ಯಕ್ಷರ ಪಾಕಿಸ್ತಾನ ಭೇಟಿ ಸಹ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಒಟ್ಟಾರೆ, ಹಾರ್ಮುಜ್ ಜಲಸಂಧಿ ವಿವಾದ ಕೇವಲ ಪ್ರಾದೇಶಿಕ ಸಮಸ್ಯೆಯಾಗದೇ, ಜಾಗತಿಕ ಇಂಧನ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವ ಪ್ರಮುಖ ವಿಷಯವಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com