ಪಾಕಿಸ್ತಾನ ನೆಲದಲ್ಲೂ ಅಮೆರಿಕಕ್ಕೆ ಮುಖಭಂಗ: Trump ಪ್ರತಿನಿಧಿಗಳ ಭೇಟಿಯಾಗದೇ ಹೊರಟ Iran ನಿಯೋಗ!

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಶನಿವಾರ ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತು.
Iranian delegation leaves Pakistan without meeting US envoys
Trump ಪ್ರತಿನಿಧಿಗಳ ಭೇಟಿಯಾಗದೇ ಹೊರಟ Iran ನಿಯೋಗ!
Updated on

ಇಸ್ಲಾಮಾಬಾದ್: ಮಧ್ಯ ಪ್ರಾಚ್ಯ ಸಂಘರ್ಷ ಮುಂದುವರೆದಿರುವಂತೆಯೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಆಯೋಜನೆಯಾಗಿದ್ದ ಇರಾನ್ ಅಮೆರಿಕ ಸಂಧಾನ ಸಭೆ ಮತ್ತೆ ಮುರಿದುಬಿದ್ದಿದ್ದು, ಸಂಧಾನಕ್ಕಾಗಿ ಆಗಮಿಸಿದ್ದ ಅಮೆರಿಕ ಸರ್ಕಾರದ ನಿಯೋಗವನ್ನು ಭೇಟಿಯಾಗದೇ ಇರಾನ್ ಸರ್ಕಾರದ ನಿಯೋಗ ನಿರ್ಗಮಿಸಿದೆ.

ಹೌದು.. ಪಾಕಿಸ್ತಾನದಲ್ಲಿ ಅಮೆರಿಕಕ್ಕೆ ಜಾಗತಿಕ ಮುಜುಗರವಾಗಿದ್ದು, ಅಮೆರಿಕದ ಪ್ರತಿನಿಧಿಯನ್ನು ಭೇಟಿಯಾಗದೆಯೇ ಇರಾನ್ ನಿಯೋಗವು ಪಾಕಿಸ್ತಾನದಿಂದ ನಿರ್ಗಮಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಶನಿವಾರ ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತು.

ಹೀಗಾಗಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನಕ್ಕೆ ಎರಡೂ ದೇಶಗಳನ್ನು ಮಾತುಕತೆಗೆ ಒಪ್ಪಿಸಲು ಸಾಧ್ಯವಾಗಲಿಲ್ಲ. ಈ ಮಾತುಕತೆಗಾಗಿ ಇಸ್ಲಾಮಾಬಾದ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆ ಹೇರಲಾಗಿತ್ತು. ಅದಾಗ್ಯೂ ಸಂಧಾನ ಮಾತುಕತೆ ವಿಫಲವಾಗಿದ್ದು ಅತ್ತ ಅಮೆರಿಕ ಮತ್ತು ಇತ್ತ ಪಾಕಿಸ್ತಾನಕ್ಕೆ ತೀವ್ರ ಮುಜುಗರವಾಗುವಂತೆ ಮಾಡಿದೆ.

Iranian delegation leaves Pakistan without meeting US envoys
ರಹಸ್ಯ 'ಮಾನವ ಸರಪಳಿ' ಮೂಲಕ ಇರಾನ್ ಆಡಳಿತ ನಡೆಸುತ್ತಿದ್ದಾರೆ ಮೊಜ್ತಬಾ ಖಮೇನಿ!

ನೇರ ಮಾತುಕತೆ ನಿರಾಕರಿಸಿದ್ದ ಇರಾನ್

ಇನ್ನು ಈ ಸಭೆಗೂ ಮೊದಲೇ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ನೇತೃತ್ವದ ಅಮೆರಿಕದ ತಂಡವು ಇಸ್ಲಾಮಾಬಾದ್‌ ತಲುಪುವ ಮೊದಲೇ ಇರಾನ್ ನಿಯೋಗವು ಅಲ್ಲಿಂದ ಹೊರಟು ಹೋಗಿದೆ.

ಇರಾನ್ ಮುನಿಸಿಗೆ ಕಾರಣ?

ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ. ವರದಿಗಳ ಪ್ರಕಾರ, ಇರಾನ್ ಕೆಳಹಂತದ ಪ್ರತಿನಿಧಿಗಳ ಬದಲಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಮಾತುಕತೆ ನಡೆಸಲು ಆಸಕ್ತಿ ಹೊಂದಿದೆ.

ಈಗಿನ ನಿಯೋಗವನ್ನು ಭೇಟಿಯಾಗುವುದು ತನಗೆ ಮಾಡಿದ "ಅಪಮಾನ" ಎಂದು ಅದು ಭಾವಿಸಿದೆ. ಇದೇ ಕಾರಣಕ್ಕೆ ಮಾತುಕತೆಗೆ ನಿಲ್ಲದೇ ಇರಾನ್ ನಿಯೋಗ ಹೊರಟು ಹೋಗಿದೆ ಎನ್ನಲಾಗಿದೆ.

ಅಂತೆಯೇ ಪಾಕಿಸ್ತಾನದಿಂದ ನಿರ್ಗಮಿಸಿದ ನಂತರ, ಇರಾನ್ ನಿಯೋಗವು ತನ್ನ ರಾಜತಾಂತ್ರಿಕ ಪ್ರವಾಸವನ್ನು ಮಸ್ಕತ್ ಮತ್ತು ಮಾಸ್ಕೋದಲ್ಲಿ ಮುಂದುವರಿಸಲಿದೆ.

Iranian delegation leaves Pakistan without meeting US envoys
ಬೆಂಜಮಿನ್ ನೆತನ್ಯಾಹುಗೆ prostate cancer: ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ; ಆರೋಗ್ಯವಾಗಿದ್ದೇನೆಂದ ಇಸ್ರೇಲ್ ಪ್ರಧಾನಿ

ಪಾಕ್ ಪ್ರಧಾನಿ ಷರೀಫ್ ಇರಾನ್‌ ವಿದೇಶಾಂಗ ಸಚಿವ ಅರಾಘಿ ಭೇಟಿ

ಇದಕ್ಕೂ ಮೊದಲು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕದನ ವಿರಾಮದ ಕುರಿತು ಇರಾನ್‌ನ ಬೇಡಿಕೆಗಳನ್ನು ಮುಂದಿಟ್ಟ ಅರಗ್ಚಿ ಚರ್ಚೆ ಬಳಿಕ ಇರಾನ್ ಗೆ ಮರಳಿದರು ಎನ್ನಲಾಗಿದೆ.

ಈ ಬಗ್ಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, "ಪ್ರದೇಶದ ಪರಿಸ್ಥಿತಿ"ಯ ಮೇಲೆ ಕೇಂದ್ರೀಕರಿಸಿದ ಚರ್ಚೆಗಳಿಗಾಗಿ ಅರಗ್ಚಿ ಪ್ರಧಾನ ಮಂತ್ರಿಗಳ ಮನೆಗೆ ಬಂದರು. ಗಮನಾರ್ಹವಾಗಿ, ನಾಗರಿಕ ನಾಯಕತ್ವವು ಮಿಲಿಟರಿ ಸ್ಥಾಪನೆಯಿಂದ ನಿಕಟವಾಗಿ ಸುತ್ತುವರೆದಿತ್ತು, ಪಾಕಿಸ್ತಾನ ಸೇನಾ ಮುಖ್ಯಸ್ಥ ಮಾರ್ಷಲ್ ಅಸಿಮ್ ಮುನೀರ್ ಮತ್ತು ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಸಹ ಮಾತುಕತೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com