ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ಪಡೆಯಬಾರದು ಎಂಬ ದೃಢ ನಿಲುವನ್ನು ಉಳಿಸಿಕೊಂಡು ಇರಾನ್ ಮಾತುಕತೆ ನಡೆಸಲು ವಾಷಿಂಗ್ಟನ್‌ಗೆ "ಕರೆ" ಮಾಡಬಹುದು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು.
Mojtaba Hosseini Khamenei , Donald Trump
ಮೊಜ್ತಬಾ ಖಮೇನಿ,ಡೊನಾಲ್ಡ್ ಟ್ರಂಪ್ ಸಾಂದರ್ಭಿ ಚಿತ್ರ
Updated on

ಟೆಹರಾನ್: ಪ್ರಾದೇಶಿಕ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮಧ್ಯವರ್ತಿ ಮೂಲಕ ಅಮೆರಿಕಕ್ಕೆ "ಹೊಸ ಪ್ರಸ್ತಾವನೆ"ಯನ್ನು ಇರಾನ್ ಸಲ್ಲಿಸಿದೆ ಎಂದು ವರದಿಯಾಗಿದೆ.

ಆಕ್ಸಿಯೋಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, "ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಮತ್ತು ಯುದ್ಧವನ್ನು ಕೊನೆಗೊಳಿಸಲು ನಿರ್ದಿಷ್ಟವಾದ ಯೋಜನೆಯೊಂದನ್ನು ರೂಪಿಸಲು ಇರಾನ್ ಆಫರ್ ನೀಡಲಾಗಿದೆ ಎನ್ನಲಾಗಿದೆ. ಶಾಂತಿ ಪ್ರಯತ್ನಗಳು ಹೆಚ್ಚಾಗಿ ಸ್ಥಗಿತಗೊಂಡಿರುವ ಸಮಯದಲ್ಲಿ ರಾಜತಾಂತ್ರಿಕ ಬೆಳವಣಿಗೆಯಾಗುತ್ತಿದೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ಪಡೆಯಬಾರದು ಎಂಬ ದೃಢ ನಿಲುವನ್ನು ಉಳಿಸಿಕೊಂಡು ಇರಾನ್ ಮಾತುಕತೆ ನಡೆಸಲು ವಾಷಿಂಗ್ಟನ್‌ಗೆ "ಕರೆ" ಮಾಡಬಹುದು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು. ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರ ಇಸ್ಲಾಮಾಬಾದ್‌ಗೆ ನಿಗದಿತ ಭೇಟಿಯನ್ನು ಶ್ವೇತಭವನ ರದ್ದುಗೊಳಿಸಿದ ನಂತರ ನೇರ ಮಾತುಕತೆ ಕ್ಷೀಣಿಸುತ್ತಿದೆ. ಇದರ ಹಿಂದೆ ಇರಾನ್ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ.

ಇರಾನ್ ಯುರೇನಿಯಂ ದಾಸ್ತಾನನ್ನು ಕನಿಷ್ಠ ಹತ್ತು ವರ್ಷಗಳ ಕಾಲ ನಿಲ್ಲಿಸಬೇಕು ಮತ್ತು ತನ್ನ ಪ್ರಸ್ತುತ ಪರಮಾಣು ದಾಸ್ತಾನನ್ನು ವಿದೇಶಕ್ಕೆ ಸ್ಥಳಾಂತರಿಸಬೇಕು ಎಂಬ ಅಮೆರಿಕದ ಬೇಡಿಕೆಯು ಪ್ರಸ್ತುತ ಬಿಕ್ಕಟ್ಟಿನ ಕೇಂದ್ರಬಿಂದುವಾಗಿದೆ.

ಆದಾಗ್ಯೂ, ಈ ನಿರ್ದಿಷ್ಟ ಅವಶ್ಯಕತೆಗಳಿಗೆ ಪ್ರತಿಕ್ರಿಯೆ ನೀಡುವ ಬಗ್ಗೆ ಇರಾನಿನ ನಾಯಕರಲ್ಲಿ ಒಮ್ಮತವಿಲ್ಲ" ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ವಾರಾಂತ್ಯದಲ್ಲಿ ಮಧ್ಯವರ್ತಿಗೆ ತಿಳಿಸಿದ್ದಾರೆ. ಇದು ಸಮುದ್ರದ ಬಿಕ್ಕಟ್ಟು ಮತ್ತು ನೌಕಾ ದಿಗ್ಬಂಧನವನ್ನು ಆದ್ಯತೆಯಾಗಿ ಪರಿಹರಿಸಲು ಪ್ರಯತ್ನಿಸುವ "ಎರಡು ಹಂತದಯಾಗಿದೆ ಎಂದು ಪಾಕಿಸ್ತಾನ ಮೂಲಕ ತಲುಪಿಸಲಾಗಿದೆ. ಈ ಪ್ರಸ್ತಾಪ ಧೀರ್ಘಾವಧಿಗೆ ಕದನ ವಿರಾಮ ವಿಸ್ತರಣೆ ಅಥವಾ "ಯುದ್ಧಕ್ಕೆ ಶಾಶ್ವತ ಅಂತ್ಯ"ವನ್ನು ಕಲ್ಪಿಸುತ್ತದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

Mojtaba Hosseini Khamenei , Donald Trump
ಇರಾನ್ ದಾಳಿಯ ನಡುವೆ ಇಸ್ರೇಲ್ ನೆರವು ಕೋರಿದ UAE! Iron Dome ವಾಯು ರಕ್ಷಣಾ ವ್ಯವಸ್ಥೆ ರವಾನೆ

ಈ ಒಪ್ಪಂದಡಿ ಪರಮಾಣು ಚರ್ಚೆಗಳು ಸಮುದ್ರ ಮಾರ್ಗವನ್ನು ತೆರವುಗೊಳಿಸಿದ ನಂತರ ಮಾತ್ರ ಪ್ರಾರಂಭವಾಗುತ್ತವೆ. ಶ್ವೇತಭವನವು ಅಧಿಕೃತವಾಗಿ ಪ್ರಸ್ತಾಪವನ್ನು ಸ್ವೀಕರಿಸಿದೆ" ಎಂದು ಆಕ್ಸಿಯೋಸ್ ವರದಿ ಮಾಡಿದರೂ. ಯುನೈಟೆಡ್ ಸ್ಟೇಟ್ಸ್ ಅದನ್ನು ಪರಿಶೀಲಿಸಲು ಸಿದ್ಧವಾಗಿದೆಯೇ" ಎಂಬುದು ಸ್ಪಷ್ಟವಾಗಿಲ್ಲ. ಇತ್ತೀಚಿನ ದಿನಗಳಲ್ಲಿ, ಅಬ್ಬಾಸ್ ಅರಘ್ಚಿ ಪಾಕಿಸ್ತಾನ ಮತ್ತು ಒಮಾನ್ ನಡುವೆ ಶಟಲ್ ರಾಜತಾಂತ್ರಿಕತೆಯಲ್ಲಿ ತೊಡಗಿಸಿಕೊಂಡಿದ್ದು, ಇಂದು ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹೆಚ್ಚಿನ ಉನ್ನತ ಮಟ್ಟದ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com