ಇರಾನ್ ಯುದ್ಧ, ಉಕ್ರೇನ್ ಬಗ್ಗೆ ಪುಟಿನ್, ಟ್ರಂಪ್ ಚರ್ಚೆ: ಕ್ರೆಮ್ಲಿನ್ ಹೇಳಿದ್ದೇನು?

ಸುಮಾರು 90 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಯಿತು ಮತ್ತು ಅದು ಅತ್ಯಂತ "ಸ್ಪಷ್ಟ ಹಾಗೂ ವ್ಯವಹಾರಿಕವಾಗಿತ್ತು" ಎಂದು ಉಷಾಕೋವ್ ಅವರು ಎಎಫ್‌ಪಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
Vladimir Putin, Trump discuss Iran war, Ukraine in phone call, says Kremlin
ಟ್ರಂಪ್ - ಪುಟಿನ್
Updated on

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಕ್ರೆಮ್ಲಿನ್ ನ ವಿದೇಶಾಂಗ ನೀತಿ ಸಹಾಯಕ ಯೂರಿ ಉಷಾಕೋವ್ ಅವರು ಬುಧವಾರ ಹೇಳಿದ್ದಾರೆ. ಇಬ್ಬರು ನಾಯಕರು ಮಧ್ಯಪ್ರಾಚ್ಯ ಯುದ್ಧ ಮತ್ತು ಉಕ್ರೇನ್ ಬಗ್ಗೆ ಚರ್ಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 90 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಯಿತು ಮತ್ತು ಅದು ಅತ್ಯಂತ "ಸ್ಪಷ್ಟ ಹಾಗೂ ವ್ಯವಹಾರಿಕವಾಗಿತ್ತು" ಎಂದು ಉಷಾಕೋವ್ ಅವರು ಎಎಫ್‌ಪಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷರು "ಇರಾನ್ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿನ ಪರಿಸ್ಥಿತಿಗೆ ಹೆಚ್ಚು ಗಮನ ನೀಡಿದರು" ಎಂದು ಉಷಾಕೋವ್ ಅವರು ಹೇಳಿದ್ದಾರೆ.

Vladimir Putin, Trump discuss Iran war, Ukraine in phone call, says Kremlin
'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

"ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಸರಿಯಾದ ನಿರ್ಧಾರವೆಂದು ವ್ಲಾಡಿಮಿರ್ ಪುಟಿನ್ ಪರಿಗಣಿಸಿದ್ದಾರೆ. ಏಕೆಂದರೆ ಇದು ಮಾತುಕತೆಗಳಿಗೆ ಹೆಚ್ಚು ಅವಕಾಶವನ್ನು ನೀಡುತ್ತದೆ ಮತ್ತು ಒಟ್ಟಾರೆಯಾಗಿ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ" ಎಂದಿದ್ದಾರೆ.

ಆದರೆ ಪುಟಿನ್ "ಅಮೆರಿಕ ಮತ್ತು ಇಸ್ರೇಲ್ ಮತ್ತೊಮ್ಮೆ ಮಿಲಿಟರಿ ಕ್ರಮ ಕೈಗೊಂಡರೆ ಇರಾನ್ ಮತ್ತು ಅದರ ನೆರೆಹೊರೆಯವರಿಗೆ ಮಾತ್ರವಲ್ಲದೆ ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೂ ಸಮಸ್ಯೆಯಾಗುತ್ತದೆ ಎಂದು ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ಎತ್ತಿ ತೋರಿಸಿದರು" ಎಂದು ಉಷಾಕೋವ್ ಹೇಳಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದಲ್ಲಿ ರಷ್ಯಾ "ರಾಜತಾಂತ್ರಿಕ ಪ್ರಯತ್ನಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ದೃಢವಾಗಿ ಬದ್ಧವಾಗಿದೆ" ಎಂದು ಅವರು ತಿಳಿಸಿದ್ದಾರೆ.

"ಇದೇ ವೇಳೆ ಝೆಲೆನ್ಸ್ಕಿ ನೇತೃತ್ವದ ಕೈವ್ ಆಡಳಿತದ ನಡವಳಿಕೆಯ ಬಗ್ಗೆ ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರೂ ಮೂಲಭೂತವಾಗಿ ಒಂದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದು ಯುರೋಪಿಯನ್ನರ ಪ್ರಚೋದನೆ ಮತ್ತು ಬೆಂಬಲದೊಂದಿಗೆ ಸಂಘರ್ಷವನ್ನು ಹೆಚ್ಚಿಸುವ ನೀತಿಯನ್ನು ಅನುಸರಿಸುತ್ತಿದೆ" ಎಂದರು.

ಉಕ್ರೇನ್ ಮೇಲಿನ ರಷ್ಯಾದ ದಾಳಿಯು ಉಕ್ರೇನಿಯನ್ ಪ್ರದೇಶದ ಬಹುಭಾಗವನ್ನು ಧ್ವಂಸಗೊಳಿಸಿದೆ. ಸಾವಿರಾರು ನಾಗರಿಕರನ್ನು ಕೊಂದಿದೆ ಮತ್ತು ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಮಾಡಿದೆ.

"ವಿಜಯ ದಿನದ ಆಚರಣೆಯ ಅವಧಿಗೆ ಕದನ ವಿರಾಮವನ್ನು ಘೋಷಿಸಲು ನಾನು ಸಿದ್ಧನಿದ್ದೇನೆ" ಎಂದು ಪುಟಿನ್ ಹೇಳಿದರು. ಟ್ರಂಪ್ ಈ ಉಪಕ್ರಮವನ್ನು ಸಕ್ರಿಯವಾಗಿ ಬೆಂಬಲಿಸಿದರು" ಎಂದು ಉಷಕೋವ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com