illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಕ್ಯಾಮರೂನ್ ಗಡಿಯಲ್ಲಿರುವ ಮಧ್ಯ ಆಫ್ರಿಕಾದ ಬಾಬುವಾ ಪಟ್ಟಣದಿಂದ ಸುಮಾರು 50 ಕಿಲೋಮೀಟರ್ (31 ಮೈಲಿ) ದೂರದಲ್ಲಿರುವ ಝಂಬೋಯೆ ಗಣಿಗಾರಿಕೆ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ
 gold mine on the Cameroon
ಚಿನ್ನದ ಗಣಿ ಕುಸಿದ ಪ್ರದೇಶ
Updated on

ಬೌವಾರ್: ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಒಂದು ದೊಡ್ಡ ದುರಂತ ಸಂಭವಿಸಿದೆ. ಅಕ್ರಮವಾಗಿ ನಡೆಸಲಾಗುತ್ತಿದ್ದ ಚಿನ್ನದ ಗಣಿಯಲ್ಲಿ ಕುಸಿತ ಉಂಟಾಗಿದ್ದು, 100 ಮಂದಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಈ ದೇಶದಲ್ಲಿ ಇಂತಹ ಅನೇಕ ಘಟನೆಗಳು ಆಗ್ಗಾಗೆ ನಡೆಯುತ್ತಲೇ ಇವೆ.

ಕ್ಯಾಮರೂನ್ ಗಡಿಯಲ್ಲಿರುವ ಮಧ್ಯ ಆಫ್ರಿಕಾದ ಬಾಬುವಾ ಪಟ್ಟಣದಿಂದ ಸುಮಾರು 50 ಕಿಲೋಮೀಟರ್ (31 ಮೈಲಿ) ದೂರದಲ್ಲಿರುವ ಝಂಬೋಯೆ ಗಣಿಗಾರಿಕೆ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಅಲ್ಲಿ ಇನ್ನೂ ಶೋಧ ಕಾರ್ಯ ಮುಂದುವರಿದಿದೆ. ನೂರಾರು ಕುಶಲಕರ್ಮಿಗಳು (artisanal miners) ಕೆಲಸ ಮಾಡುತ್ತಿದ್ದ ವೇಳೆ ಚಿನ್ನದ ಗಣಿಗಾರಿಕೆ ಪ್ರದೇಶದಲ್ಲಿ ಕುಸಿತ ಸಂಭವಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಚಿನ್ನದ ಗಣಿಗಾರಿಕೆ ಪ್ರದೇಶ ಸಂಪೂರ್ಣವಾಗಿ ಕುಸಿದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಪೂರ್ಣವಾಗಿ ಮಣ್ಣಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಗಣಿಗಾರ ಸೆಡ್ರಿಕ್ ಎಂಬಾಂಗೊ ಎಎಫ್‌ಪಿಗೆ (AFP) ತಿಳಿಸಿದ್ದು, ಈ ಘಟನೆಯನ್ನು ವಿನಾಶಕಾರಿ ಎಂದು ಬಣ್ಣಿಸಿದ್ದಾರೆ.

ಗಣಿಗಾರಿಕೆ ಮಾಡುತ್ತಿದ್ದ ಹಲವರು ಭೂಗತ ಸುರಂಗಗಳು ಕುಸಿದಿದ್ದರಿಂದ" ಈ ಭೂಕುಸಿತ ಸಂಭವಿಸಿದೆ ಎಂದು ನಂಬಲಾಗಿದೆ ಎಂದು ಬಾಬುವಾದ ಸಾರ್ವಜನಿಕ ಅಭಿಯೋಜಕರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ ಮತ್ತು ಈ ಬಗ್ಗೆ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ಹಂತದಲ್ಲಿ ನಿಖರವಾಗಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುವುದು ಕಷ್ಟಸಾಧ್ಯ ಎಂದು ಬಬೌವಾ ಚುನಾಯಿತ ಅಧಿಕಾರಿ ಲಾರೆಂಟ್ ನ್ಗೊನ್ ಬಾಬಾ ಬುಧವಾರ ಮುಂಜಾನೆ ಎಎಫ್‌ಪಿಗೆ ತಿಳಿಸಿದರು.

ಸಾವನ್ನಪ್ಪಿದ್ದವರಲ್ಲಿ ಕನಿಷ್ಠ ನಾಲ್ವರು ಕ್ಯಾಮರೂನಿಯನ್ನರು ಎಂದು ಕ್ಯಾಮರೂನ್ ಟ್ರಿಬ್ಯೂನ್ ವರದಿ ಮಾಡಿದೆ. ಬದುಕುಳಿದವರನ್ನು ಬಬೌವಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬುಧವಾರವೂ ಹುಡುಕಾಟ ಮುಂದುವರೆಯಿತು.

ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ರಾಜ್ಯ ನಿಯಂತ್ರಣದ ಹೊರಗಿನ ಅಕ್ರಮ ಕಾರ್ಯಾಚರಣೆಗಳಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಈ ದುರಂತದ ನಂತರ ನಮ್ಮ ಅಧಿಕಾರಿಗಳು ಮಧ್ಯ ಆಫ್ರಿಕಾದ ಸಹೋದ್ಯೋಗಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೂರ್ವ ಕ್ಯಾಮರೂನಿಯನ್ ಪ್ರದೇಶದ ಗವರ್ನರ್ ಗ್ರೆಗೊಯಿರ್ ಮ್ವೊಂಗೊ ಅವರು ಸರ್ಕಾರಿ ಸ್ವಾಮ್ಯದ ಸಿಆರ್‌ಟಿವಿ ರೇಡಿಯೊದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com