ನೇಪಾಳ ಪ್ರವಾಹ: ಕ್ಷಣಾರ್ಧದಲ್ಲಿ ಕೆಸರಿನಲ್ಲಿ ಮುಚ್ಚಿಹೋದ ಗ್ರಾಮ! ಭಯಾನಕ ದೃಶ್ಯದ Video ವೈರಲ್

ಕೆಸರು ಮಿಶ್ರಿತ ನೀರು ನದಿದಡವನ್ನು ಮೀರಿ, ಕಟ್ಟಡ, ಸೇತುವೆಗಳು, ರಸ್ತೆಗಳು ಮತ್ತು ಬಸ್, ಕಾರು ಸೇರಿದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕ್ಷಣಾರ್ಧದಲ್ಲಿ ದಪ್ಪನೆಯ ಕೆಸರಿನ ಪದರದಡಿ ಮುಚ್ಚಿಹಾಕುವುದನ್ನು ಇದರಲ್ಲಿ ಕಾಣಬಹುದು.
The entire stretch of the river community is turned into fields of mud and debris
ರಭಸದಲ್ಲಿ ನುಗ್ಗಿಬಂದ ಕೆಸರು ಮಿಶ್ರಿತ ನೀರು
Updated on

ಕಠ್ಮಂಡು: ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ದಿಢೀರ್ ಪ್ರವಾಹದ ವಿಡಿಯೋವೊಂದರಲ್ಲಿ ನದಿತೀರದ ಗ್ರಾಮವೊಂದು ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿರುವುದನ್ನು ತೋರಿಸುತ್ತದೆ. ಈ ಭಾರಿ ದುರಂತದ ನಂತರ 1,400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 392 ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ.

ಭೋಟೇಕೋಷಿ ಮತ್ತು ತ್ರಿಶೂಲಿ ನದಿಗಳ ದಡದಲ್ಲಿರುವ ವಸತಿ ಪ್ರದೇಶಗಳ ಮೂಲಕ ಪ್ರವಾಹವು ರಭಸದಿಂದ ನುಗ್ಗಿಬರುತ್ತಿರುವ ಭೀಕರ ದೃಶ್ಯಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ಕೆಸರು ಮಿಶ್ರಿತ ನೀರು ನದಿದಡವನ್ನು ಮೀರಿ, ಕಟ್ಟಡ, ಸೇತುವೆಗಳು, ರಸ್ತೆಗಳು ಮತ್ತು ಬಸ್, ಕಾರು ಸೇರಿದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕ್ಷಣಾರ್ಧದಲ್ಲಿ ದಪ್ಪನೆಯ ಕೆಸರಿನ ಪದರದಡಿ ಮುಚ್ಚಿಹಾಕುವುದನ್ನು ಇದರಲ್ಲಿ ಕಾಣಬಹುದು.

ನದಿತೀರದ ಸಮುದಾಯವಿದ್ದ ಸಂಪೂರ್ಣ ಪ್ರದೇಶವು ಕೆಸರು ಮತ್ತು ಅವಶೇಷಗಳ ರಾಶಿಯಾಗಿ ಬದಲಾಗುತ್ತದೆ ಮತ್ತು ಪ್ರವಾಹವು ನಂತರ ಕೆಳಮುಖವಾಗಿ ಹರಿಯುವುದನ್ನು ಮುಂದುವರಿಸುತ್ತದೆ. ಹಿಮಾಲಯ ಪರ್ವತ ಶ್ರೇಣಿಯ ಕೆಳಗಿರುವ ಕಡಿದಾದ ಇಳಿಜಾರುಗಳು ಮತ್ತು ಹಸಿರಿನಿಂದ ಕೂಡಿದ ಕಣಿವೆಗಳು ಪ್ರವಾಹ ಮತ್ತು ಭೂಕುಸಿತಗಳಿಗೆ ವಿಶೇಷವಾಗಿ ತುತ್ತಾಗುವ ಸಾಧ್ಯತೆ ಇರುತ್ತದೆ.. ಮಾನವ-ಪ್ರೇರಿತ ಹವಾಮಾನ ಬದಲಾವಣೆಯಿಂದಾಗಿ ಹಿಮನದಿಗಳು ಕರಗುವಿಕೆ ಹೆಚ್ಚಾಗಿದೆ.

ಡಜನ್‌ಗಟ್ಟಲೆ ಸೇತುವೆಗಳು ನಾಶವಾಗಿವೆ ಮತ್ತು ಸುಮಾರು 40 ಕಿಲೋಮೀಟರ್‌ಗಳಷ್ಟು ರಸ್ತೆಗಳು ಹಾನಿಗೊಳಗಾಗಿವೆ, ಇದರಿಂದಾಗಿ ಶೋಧ ಕಾರ್ಯಗಳಿಗೆ ತೊಡಕಾಗಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

ಕಠ್ಮಂಡುವಿನಲ್ಲಿರುವ 'ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್'ನ ಹವಾಮಾನ ತಜ್ಞರ ಪ್ರಕಾರ, ಹಿಮನದಿಯಿಂದ ಉಂಟಾದ ಹಿಮಪಾತವು (avalanche) ಬುಧವಾರದ ಈ ಹಠಾತ್ ಪ್ರವಾಹಕ್ಕೆ ಕಾರಣವಾಗಿರಬಹುದು. ತ್ರಿಶೂಲಿ ನದಿಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ನೀರಿನ ಮಟ್ಟವು 9 ಮೀಟರ್‌ಗಳಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

The entire stretch of the river community is turned into fields of mud and debris
ನೇಪಾಳ ಪ್ರವಾಹ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೃತ ಮಹಿಳೆಯ ಕೂದಲು ಹಿಡಿದು, ಚಿನ್ನದ ಕಿವಿಯೋಲೆ ಕದ್ದ ಖದೀಮರು! Video

ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಈ ದುರಂತದ ನಂತರ ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರೆದಿದ್ದು,, 290 ಭಾರತೀಯ ಪ್ರಜೆಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಮತ್ತು ಇಲ್ಲಿಯವರೆಗೆ 84 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com