ಉಗ್ರರ ವಿರುದ್ಧ ಪಾಕ್ ಕಾರ್ಯಾಚರಣೆ: ಆತ್ಮಾಹುತಿ ಬಾಂಬರ್ ಸೇರಿ ಐವರು ಭಯೋತ್ಪಾದಕರ ಹತ್ಯೆ

ಆತ್ಮಹತ್ಯಾ ಬಾಂಬರ್ ಸೇರಿದಂತೆ ಹತ್ಯೆಗೀಡಾದ ಭಯೋತ್ಪಾದಕರು ಹಿಂದಿನ ದಾಳಿಗಳಲ್ಲಿ ಭಾಗಿಯಾಗಿದ್ದರು ಮತ್ತು ಮತ್ತೊಂದು ದಾಳಿಗೆ ಯೋಜಿಸುತ್ತಿದ್ದರು.
Five terrorists killed in operation in Pakistan's Balochistan
ಸಾಂದರ್ಭಿಕ ಚಿತ್ರ
Updated on

ಬಲೂಚಿಸ್ತಾನ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಆತ್ಮಹುತಿ ಬಾಂಬರ್ ಸೇರಿದಂತೆ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗ ಸೋಮವಾರ ತಿಳಿಸಿದೆ.

ಪಿಶಿನ್ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಭದ್ರತಾ ಪಡೆಗಳು ನಿಷೇಧಿತ ಸಂಘಟನೆಗೆ ಸೇರಿದ ಶಂಕಿತ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್(ISPR) ಪ್ರಕಟಣೆಯಲ್ಲಿ ತಿಳಿಸಿದೆ.

ಹತ್ಯೆಗೀಡಾದ ಉಗ್ರರು ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ಸದಸ್ಯರು ಎಂದು ಭದ್ರತಾ ಮೂಲವೊಂದು ತಿಳಿಸಿದೆ.

Five terrorists killed in operation in Pakistan's Balochistan
ಬಲೂಚಿಸ್ತಾನದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ: 145 ಭಯೋತ್ಪಾದಕರ ಹತ್ಯೆ ಮಾಡಿದ್ದೇವೆ ಎಂದ ಪಾಕಿಸ್ತಾನ; ಭಾರತ-ಆಫ್ಘನ್ ವಿರುದ್ಧ ಗಂಭೀರ ಆರೋಪ; Video

ಆತ್ಮಹತ್ಯಾ ಬಾಂಬರ್ ಸೇರಿದಂತೆ ಹತ್ಯೆಗೀಡಾದ ಭಯೋತ್ಪಾದಕರು ಹಿಂದಿನ ದಾಳಿಗಳಲ್ಲಿ ಭಾಗಿಯಾಗಿದ್ದರು ಮತ್ತು ಮತ್ತೊಂದು ದಾಳಿಗೆ ಯೋಜಿಸುತ್ತಿದ್ದರು. ಭದ್ರತಾ ಪಡೆಗಳು ಅವರ ಸುರಕ್ಷಿತ ಮನೆಯನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿವೆ. ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ಒಂದು ತಿಂಗಳಿನಿಂದ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಭದ್ರತಾ ಪಡೆಗಳು ಮತ್ತು ಟಿಟಿಪಿ ಹಾಗೂ ಇತರ ದಂಗೆಕೋರ ಗುಂಪುಗಳಿಗೆ ಸಂಬಂಧಿಸಿದ ಉಗ್ರರ ನಡುವೆ ತೀವ್ರ ಘರ್ಷಣೆಗಳು ನಡೆಯುತ್ತಿರುವ ಮಧ್ಯೆ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com