

ನ್ಯೂಯಾರ್ಕ್: ವೆನೆಜುವೆಲಾವನ್ನು ಅನಿರೀಕ್ಷಿತವಾಗಿ ಹಿಡಿದಿಟ್ಟ ದಿಟ್ಟ ಆಕ್ರಮಣದ ಒಂದು ವಾರದ ನಂತರ, ಈಗ ಅಮೆರಿಕ-ರಷ್ಯಾ ಚಲನಶೀಲತೆಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕಂಡುಬರುತ್ತಿದೆ.
ಕಳೆದ ವಾರ ಕ್ಯಾರಕಾಸ್‌ನಲ್ಲಿ ಯುಎಸ್ ಪಡೆಗಳು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ವೆನೆಜುವೆಲಾದ ಮಾಜಿ ನಾಯಕ ನಿಕೋಲಸ್ ಮಡುರೊ ಅವರನ್ನು ಹಾಸಿಗೆಯಿಂದ ನ್ಯೂಯಾರ್ಕ್ ಜೈಲಿಗೆ ಎಳೆದೊಯ್ಯಲಾಗಿತ್ತು.
ಅವರನ್ನು ಸೆರೆಹಿಡಿದ ರೀತಿ 'ಬಲವೇ ಸರಿ' ಎಂಬ ನಾಣ್ಣುಡಿಯನ್ನು ಪ್ರತಿಬಿಂಬಿಸುತ್ತದೆ. ಉಕ್ರೇನಿಯನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿಯಂತಹ ಮಿತ್ರರಾಷ್ಟ್ರಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಅದರ ಬಗ್ಗೆ ಯೋಜಿಸುತ್ತಿರಬಹುದು ಎಂದು ಸೂಚಿಸಿದ್ದಾರೆ.
ಜೆಲೆನ್ಸ್ಕಿಯ ಅಭಿಪ್ರಾಯವನ್ನು ತಳ್ಳಿಹಾಕಿರುವ ಟ್ರಂಪ್, ನಾನು ಪುಟಿನ್ ಬಗ್ಗೆ "ತುಂಬಾ ನಿರಾಶೆಗೊಂಡಿದ್ದೇನೆ ಆದರೆ ಪುಟಿನ್ ವಿಷಯದಲ್ಲಿ ಅಂತಹ ನಿರ್ಬಂಧ "ಅಗತ್ಯವಿಲ್ಲ" ಎಂದು ಹೇಳಿದ್ದಾರೆ. ಉಕ್ರೇನ್‌ನಲ್ಲಿ ನಡೆದ ಯುದ್ಧ ಅಪರಾಧಗಳ ಆರೋಪದ ಮೇಲೆ ಪುಟಿನ್ ದಿ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್ ಎದುರಿಸುತ್ತಿದ್ದಾರೆ.
ಹೊಸ ವರ್ಷದ ಆರಂಭದ ದಿನಗಳಲ್ಲಿ ಮಡುರೊ ಅವರ ಬಂಧನ ಉಕ್ರೇನ್ ಸೇರಿದಂತೆ ವಾಷಿಂಗ್ಟನ್‌ನ ಮಿತ್ರರಾಷ್ಟ್ರಗಳಿಗೆ ಧೈರ್ಯ ತುಂಬುವ ಸಾಧ್ಯತೆಯಿದೆ, ಯುಕ್ರೇನ್ 2022 ರಿಂದ ರಷ್ಯಾದ ಆಕ್ರಮಣದ ಅಲೆಯನ್ನು ವಿರೋಧಿಸುತ್ತಿದೆ, ಅದರ ರಾಜಧಾನಿ ಕೈವ್ ನ್ನು ಇನ್ನೂ ಆಕ್ರಮಣದಿಂದ ಸುರಕ್ಷಿತವಾಗಿರಿಸಿದೆ.
ಮಡುರೊ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಾ, ಝೆಲೆನ್ಸ್ಕಿ ಪುಟಿನ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ, "ಸರ್ವಾಧಿಕಾರಿ"ಯನ್ನು ಹೀಗೆ ನಡೆಸಿಕೊಳ್ಳಬೇಕಾದರೆ, "ಮುಂದೆ ಏನು ಮಾಡಬೇಕೆಂದು ಅಮೆರಿಕಕ್ಕೆ ತಿಳಿದಿದೆ" ಎಂದು ಹೇಳಿದರು. ಝೆಲೆನ್ಸ್ಕಿಯವರ ಹೇಳಿಕೆಗಳ ಬಗ್ಗೆ ಮತ್ತು ಟ್ರಂಪ್ ಪುಟಿನ್ ಅವರನ್ನು ಸೆರೆಹಿಡಿಯಲು ಕಾರ್ಯಾಚರಣೆಗೆ ಆದೇಶಿಸುತ್ತಾರೆಯೇ ಎಂದು ಕೇಳಿದಾಗ, ಅಮೆರಿಕ ಅಧ್ಯಕ್ಷರು, "ಅದು ಅಗತ್ಯವಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
"ನಾವು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ ಮತ್ತು ಯಾವಾಗಲೂ ಹೊಂದಿದ್ದೆವು. ಆದರೆ ನಾನು ತುಂಬಾ ನಿರಾಶೆಗೊಂಡಿದ್ದೇನೆ. ನಾನು ಎಂಟು ಯುದ್ಧಗಳನ್ನು ಇತ್ಯರ್ಥಪಡಿಸಿದೆ" ಎಂದು ಟ್ರಂಪ್ ದೇಶದ ಉನ್ನತ ತೈಲ ಮತ್ತು ಅನಿಲ ಕಾರ್ಯನಿರ್ವಾಹಕರೊಂದಿಗಿನ ಸಭೆಯ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Advertisement