'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕ್ಯೂಬಾ ಹಲವು ವರ್ಷಗಳಿಂದ ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದ ತೈಲ ಮತ್ತು ಹಣದ ಮೇಲೆ ಬದುಕುತ್ತಿದೆ. ಕ್ಯೂಬಾ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು.
Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್JUSTIN LANE
Updated on

ವಾಷಿಂಗ್ಟನ್: ವೆನೆಜುವೆಲಾ ಮೇಲೆ ನಡೆದ ರೀತಿಯಲ್ಲೇ ಕ್ಯೂಬಾದ ಮೇಲೂ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಬಹದು.. ಅದಕ್ಕೂ ಮೊದಲೇ ಅವರು ಒಪ್ಪಂದಕ್ಕೆ ಬರಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, "ಕ್ಯೂಬಾ ಹಲವು ವರ್ಷಗಳಿಂದ ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದ ತೈಲ ಮತ್ತು ಹಣದ ಮೇಲೆ ಬದುಕುತ್ತಿದೆ. ಕ್ಯೂಬಾ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ದ್ವೀಪ ರಾಷ್ಟ್ರವು ಇನ್ನು ಮುಂದೆ ತೈಲ ಅಥವಾ ಹಣವನ್ನು ಪಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ತಡ ಮಾಡದೇ ನಿರ್ಧಾರಕ್ಕೆ ಬನ್ನಿ

ಇದೇ ವೇಳೆ "ಕ್ಯೂಬಾಗೆ ಇನ್ನು ಮುಂದೆ ತೈಲ ಅಥವಾ ಹಣ ಹೋಗುವುದಿಲ್ಲ.. ಶೂನ್ಯ! ತಡವಾಗುವ ಮೊದಲು ಅವರು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕೆಂದು ನಾನು ಬಲವಾಗಿ ಸೂಚಿಸುತ್ತೇನೆ. ಕ್ಯೂಬಾ ಹಲವು ವರ್ಷಗಳ ಕಾಲ ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದ ತೈಲ ಮತ್ತು ಹಣದ ಮೇಲೆ ಬದುಕಿದೆ. ಇನ್ನು ಮೇಲೆ ಅದು ಸಾಧ್ಯವಿಲ್ಲ ಎಂದು ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.

Donald Trump
'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

ವೆನೆಜುವೆಲಾ ಮೇಲೆ ದಾಳಿ ಖಂಡಿಸಿದ್ದ ಕ್ಯೂಬಾ

ಇನ್ನು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಶನಿವಾರ ಕ್ಯೂಬಾ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮುಂದೆ ಸಾವಿರಾರು ಹವಾನಾ ನಿವಾಸಿಗಳ ರ್ಯಾಲಿಯಲ್ಲಿ ವೆನೆಜುವೆಲಾ ಮೇಲಿನ ಅಮೆರಿಕ ದಾಳಿಯನ್ನು ಖಂಡಿಸಿದ್ದರು. ವೆನೆಜುವೆಲಾಜ ಮೇಲಿನ ಸೇನಾದಾಳಿ ಮತ್ತು ಅದರ ಅಧ್ಯಕ್ಷರನ್ನು ಸೆರೆಹಿಡಿದಿದ್ದಕ್ಕಾಗಿ ಅಮೆರಿಕವನ್ನು ಖಂಡಿಸಿದ್ದರು.

"ಕ್ಯೂಬಾ ಈ ಕ್ರಮಗಳನ್ನು ರಾಜ್ಯ ಭಯೋತ್ಪಾದನೆಯ ಕೃತ್ಯವೆಂದು ಖಂಡಿಸುತ್ತದೆ ಮತ್ತು ಖಂಡಿಸುತ್ತದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಮಾನದಂಡಗಳ ಆಘಾತಕಾರಿ ಉಲ್ಲಂಘನೆಯಾಗಿದೆ. ಯುನೈಟೆಡ್ ಸ್ಟೇಟ್ಸ್‌ಗೆ ಯಾವುದೇ ಬೆದರಿಕೆಯನ್ನುಂಟುಮಾಡದ ಶಾಂತಿಯುತ ರಾಷ್ಟ್ರದ ವಿರುದ್ಧ ಮಿಲಿಟರಿ ಆಕ್ರಮಣ" ಎಂದು ಡಯಾಜ್-ಕ್ಯಾನೆಲ್ ಕಿಡಿಕಾರಿದ್ದರು.

ಕ್ಯೂಬಾದ ಪ್ರಮುಖ ತೈಲ ಮೂಲ ವೆನೆಜುವೆಲಾ

ಇನ್ನು ದಕ್ಷಿಣ ಅಮೆರಿಕಾದ ದೇಶದಲ್ಲಿ ಕೆಲಸ ಮಾಡುವ ಸಾವಿರಾರು ವೈದ್ಯಕೀಯ ಸಿಬ್ಬಂದಿಗೆ ಬದಲಾಗಿ ವೆನೆಜುವೆಲಾ ಕ್ಯೂಬಾದ ಈಗಾಗಲೇ ಕೊರತೆಯಿರುವ ತೈಲ ಆಮದುಗಳಲ್ಲಿ ಸುಮಾರು 30% ಅನ್ನು ಪೂರೈಸುತ್ತದೆ. ತೈಲ ನಷ್ಟವು ಕ್ಯೂಬಾದ ಈಗಾಗಲೇ ಅಲುಗಾಡುತ್ತಿರುವ ವಿದ್ಯುತ್ ಗ್ರಿಡ್ ಮತ್ತು ಇಂಧನ ಪೂರೈಕೆಗೆ ವಿನಾಶಕಾರಿ ಹೊಡೆತವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಏತನ್ಮಧ್ಯೆ, ವೆನೆಜುವೆಲಾದಲ್ಲಿ ಕೆಲಸ ಮಾಡುವ ಸಂಬಂಧಿಕರು ಮತ್ತು ಸ್ನೇಹಿತರ ಭವಿಷ್ಯದ ಬಗ್ಗೆ ಸಾವಿರಾರು ಕ್ಯೂಬನ್ನರು ಚಿಂತಿತರಾಗಿದ್ದಾರೆ. ಕ್ಯೂಬಾದ ಆರೋಗ್ಯ ಸಚಿವಾಲಯವು ಶನಿವಾರ "ಉತ್ತಮ ರಕ್ಷಣೆ" ಹೊಂದಿದೆ ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com