2010ರಲ್ಲಿ ಆರ್ಡರ್ ಮಾಡಿದ್ದ ನೋಕಿಯಾ ಫೋನ್ ಗಳು 16 ವರ್ಷ ಬಳಿಕ ಡೆಲಿವರಿ; ಬೇಸ್ತು ಬಿದ್ದ ಅಂಗಡಿ ಮಾಲೀಕ.. ಕಾರಣ ಯುದ್ಧ!

ಯುದ್ಧ ಪೀಡಿತ ಲಿಬಿಯಾದಲ್ಲಿ ಮೊಬೈಲ್ ಅಂಗಡಿ ಮಾಲೀಕರು 2010ರಲ್ಲಿ ಫೋನ್ ಆರ್ಡರ್ ಮಾಡಿದ್ದರು. ಆದರೆ ಆ ಫೋನ್ ಗಳು ಬರೊಬ್ಬರಿ 16 ವರ್ಷಗಳ ಬಳಿಕ ಡೆಲಿವರಿಯಾಗಿದೆ.
Nokia Phones Ordered In 2010 Reach Libyan Store After 16 Years
ನೋಕಿಯಾ ಫೋನ್ ಡೆಲಿವರಿ ಪಡೆದ ಅಂಗಡಿ ಮಾಲೀಕ
Updated on

ಟ್ರಿಪೋಲಿ: ಆರ್ಡರ್ ಮಾಡಿದ್ದ ನೋಕಿಯೋ ಫೋನ್ ಗಳು ಬರೊಬ್ಬರಿ 10 ವರ್ಷಗಳ ಡೆಲಿವರಿಯಾಗಿರುವ ವಿಚಿತ್ರ ಘಟನೆ ಲಿಬಿಯಾದಲ್ಲಿ ನಡೆದಿದೆ.

ಯುದ್ಧ ಪೀಡಿತ ಲಿಬಿಯಾದಲ್ಲಿ ಮೊಬೈಲ್ ಅಂಗಡಿ ಮಾಲೀಕರು 2010ರಲ್ಲಿ ಫೋನ್ ಆರ್ಡರ್ ಮಾಡಿದ್ದರು. ಆದರೆ ಆ ಫೋನ್ ಗಳು ಬರೊಬ್ಬರಿ 16 ವರ್ಷಗಳ ಬಳಿಕ ಡೆಲಿವರಿಯಾಗಿದ್ದು, ಇದನ್ನು ನೋಡಿದ ಅಂಗಡಿ ಮಾಲೀಕರು ಹೌಹಾರಿದ್ದಾರೆ.

ವಿಶ್ವದ ಯಾವುದೇ ಮೂಲೆಗೂ, ಯಾವುದೇ ದೇಶದಿಂದ ಡೆಲಿವರಿ 15 ರಿಂದ 30 ದಿನದಲ್ಲಿ ತಲುಪುತ್ತದೆ. ಆದರೆ ಲಿಬಿಯಾದಲ್ಲಿ 16 ವರ್ಷ ತೆಗೆದುಕೊಂಡಿದೆ. ಲಿಬಿಯಾದ ಶಾಪ್‌ಕೀಪರ್ 2010ರಲ್ಲಿ ನೋಕಿಯಾ ಬಟನ್ ಫೋನ್ ಆರ್ಡರ್ ಮಾಡಿದ್ದರು.

2010ರಲ್ಲಿ ಭಾರಿ ಸದ್ದು ಮಾಡಿದ್ದ ನೋಕಿಯಾ ಮ್ಯೂಸಿಕ್ ಫೋನ್, ಅಂದಿನ ಅತ್ಯಾಧುನಿಕ ಹಾಗೂ ಅತ್ಯಾಕರ್ಷಕ ಫೋನ್ ಆಗಿತ್ತು. ಅಂದು ಆನ್‌ಲೈನ್ ಶಾಪಿಂಗ್ ಈ ಮಟ್ಟಕ್ಕೆ ಬೆಳೆದಿರಲಿಲ್ಲ. ಜನರು ಮೊಬೈಲ್ ಶಾಪ್‌ಗೆ ತೆರಳಿ ಫೋನ್ ಖರೀದಿಸುತ್ತಿದ್ದರು. ಬೇಡಿಕೆ ಹೆಚ್ಚುತ್ತಿದ್ದ ಕಾರಣದಿಂದ ಮೊಬೈಲ್ ಶಾಪ್ ಮಾಲೀಕ ನೋಕಿಯಾ ಮ್ಯೂಸಿಕ್ ಬಟನ್ ಫೋನ್ ಆರ್ಡರ್ ಮಾಡಿದ್ದರು.

Nokia Phones Ordered In 2010 Reach Libyan Store After 16 Years
ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

ಡೆಲಿವರಿ ವಿಳಂಬಕ್ಕೆ ಯುದ್ಧ ಕಾರಣ

ಅಂಗಡಿ ಮಾಲೀಕ ನೋಕಿಯಾ ಡೀಲರ್ ಮೂಲಕ ಫೋನ್ ಆರ್ಡರ್ ಮಾಡಿದ್ದಾರೆ. ಮೊಬೈಲ್ ಶಾಪ್ ಮಾಲೀಕನ ಅಂಗಡಿಯಿಂದ ಕೆಲವೇ ದೂರದಲ್ಲಿರುವ ನೋಕಿಯಾ ವೇರ್‌ಹೌಸ್‌ಗೆ ಫೋನ್ ಬಂದಿದೆ. ಆದರೆ 2010ರ ಅಂತ್ಯದಲ್ಲಿ ಆರ್ಡರ್ ಮಾಡಿದ ಫೋನ್ ಬರಲು ಕೆಲ ತಿಂಗಳು ಹಿಡಿದಿದೆ.

ಅಷ್ಟರಲ್ಲಿ ಅಂದರೆ 2011ರಲ್ಲಿ ಲಿಬಿಯಾದಲ್ಲಿ ಯುದ್ಧದ ಸಂದರ್ಭ ಸೃಷ್ಟಿಯಾಗಿತ್ತು. ಸರ್ಕಾರ ಪತನಗೊಂಡಿತ್ತು. ಹೋರಾಟಗಳು, ಉಗ್ರರ ಅಟ್ಟಹಾಸ ಸೇರಿದಂತೆ ಒಂದಲ್ಲಾ ಒಂದು ಘಟನೆ ನಡೆಯುತ್ತಲೇ ಹೋಗಿತ್ತು. ಹೀಗಾಗಿ ಲಿಬಿಯಾದಲ್ಲಿ ಸ್ಥಿರ ಆಡಳಿತ ನೀಡುವ ಸರ್ಕಾರವೇ ಇರಲಿಲ್ಲ. ವಸ್ತುಗಳ ಸಾಗಣೆ ದುಸ್ತರವಾಗಿತ್ತು.

ನೋಕಿಯಾ ವೇರ್‌ಹೌಸ್‌ನಲ್ಲಿ ಬಂದಿದ್ದ ಫೋನ್ ಒಂದಲ್ಲ ಎರಡಲ್ಲ ಬರೋಬ್ಬರಿ 16 ವರ್ಷಗಳ ಕಾಲ ಹಾಗೇ ಉಳಿದಿತ್ತು. ಇದೇ ವೇರ್‌ಹೌಸ್‌ನಲ್ಲಿ 2010-11ರ ಸಮಯದಲ್ಲಿ ಬಂದಿದ್ದ ಹಲವು ವಸ್ತುಗಳು ಹಾಗೇ ಉಳಿದಿದೆ.

ವೇರ್‌ಹೌಸ್ ದಾಖಲೆ ಪ್ರಕಾರ ಹಲವು ವಸ್ತುಗಳು ಡೆಲಿವರಿಯಾಗದೇ ಉಳಿದುಕೊಂಡಿತ್ತು. ಇದನ್ನು ಕ್ಲಿಯರ್ ಮಾಡಲು ಮೇಲಾಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಒಂದರ ಹಿಂದೆ ಒಂದರಂತೆ ವಸ್ತುಗಳ ಡೆಲಿವರಿ ಆರಂಭಗೊಂಡಿತ್ತು. ಇದರಲ್ಲಿ 16 ವರ್ಷದ ಹಿಂದೆ ಆರ್ಡರ್ ಮಾಡಿದ್ದ ನೋಕಿಯಾ ಮ್ಯೂಸಿಕ್ ಫೋನ್ ಕೂಡ ಇತ್ತು.

ತನ್ನದೇ ಆರ್ಡರ್ ನೋಡಿ ಬೆಚ್ಚಾದ ಅಂಗಡಿ ಮಾಲೀಕ

ಅಂದಿನ ಕಾಲಕ್ಕೆ ಭಾರಿ ಬೇಡಿಕೆ ಪಡೆದಿದ್ದ ನೋಕಿಯಾ ಬಟನ್ ಫೋನ್ ಡೆಲಿವರಿಯಾಗಿದೆ. ಇದನ್ನು ಕಂಡ ಶಾಪ್ ಮಾಲೀಕ ಒಂದು ಕ್ಷಣ ದಂಗಾಗಿ ಹೋಗಿದ್ದಾನೆ. ತಾನು ಆರ್ಡರ್ ಮಾಡೇ ಇಲ್ಲ ಎಂದು ಯೋಚಿಸುತ್ತಿರುವಾಗಲೇ, 2010ರ ಆರ್ಡರ್ ಹಾಗೂ ಪೇಮೆಂಟ್ ಮಾಹಿತಿಯನ್ನು ಡೆಲಿವರಿ ಸಿಬ್ಬಂದಿಗಳು ನೀಡಿದ್ದಾರೆ. ಅಷ್ಟರಲ್ಲೇ ಬರೋಬ್ಬರಿ 16 ವರ್ಷಗಳ ಹಿಂದಿನ ಕತೆ ನೆನಪಾಗಿದೆ.

ಡೆಲಿವರಿ ಬಂದ ನೋಕಿಯ ಫೋನ್ ಅನ್‌ಬಾಕ್ಸ್ ಮಾಡಿ ಅತ್ತ ನಗಲು ಆಗದೇ ಅಳಲು ಆಗದೇ ಶಾಪ್ ಕೀಪರ್ ಹಾಸ್ಯದಲ್ಲಿ ಘಟನೆ ವಿವರಿಸಿದ್ದಾರೆ. ಎಲ್ಲೆಡೆ ಸ್ಮಾರ್ಟ್‌ಫೋನ್ ಜಮಾನ ಬಂದು ಹಲವು ವರ್ಷಗಳೇ ಉರುಳಿದೆ. ಈಗ 16 ವರ್ಷಗಳ ಹಿಂದಿನ ಬಟನ್ ಫೋನ್ ಡೆಲಿವರಿಯಾಗಿದೆ.

ಅತೀವ ಬೇಡಿಕೆ ಸಮಯದಲ್ಲಿ ಫೋನ್ ಬರಲಿಲ್ಲ, ಫೋನ್ ಬಂದಾಗ ತಂತ್ರಜ್ಞಾನ ಬದಲಾಗಿ ಸಾಕಷ್ಟು ದೂರ ಪ್ರಯಾಣಿಸಿ ಆಗಿದೆ. ಈ ಫೋನ್‌ನ್ನು ಮಕ್ಕಳಿಗೆ ನೀಡಿದರೂ ಅವರು ಕಿತ್ತೊಗೆಯುತ್ತಾರೆ ಎಂದು ಶಾಪ್ ಮಾಲೀಕ ಹೇಳಿದ್ದಾನೆ.

ಮಾಲೀಕನ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com