ಟೂರಿಸ್ಟ್ ವೀಸಾ ಪುನರಾರಂಭ: ತೀವ್ರ ಬೇಡಿಕೆ, ಬಾಂಗ್ಲಾದೇಶದಲ್ಲಿ ಮತ್ತಷ್ಟು ವೀಸಾ ಸೇವೆ ಹೆಚ್ಚಿಸಲು ಭಾರತ ಮುಂದು!

ಸಾರ್ವಜನಿಕರಿಂದ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿರುವ ಬಗ್ಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮೆಚ್ಚುಗೆ ವ್ಯಕ್ತಪಡಿಸಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಢಾಕಾ: ಭಾರತದಲ್ಲಿ ಈಗಾಗಲೇ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗಿರುವಂತೆಯೇ ಬಾಂಗ್ಲಾದೇಶದಲ್ಲಿ ವೀಸಾ ಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ. ಎರಡು ವರ್ಷ ಸ್ಥಗಿತಗೊಂಡಿದ್ದ ಟೂರಿಸ್ಟ್ ವೀಸಾಗಳನ್ನು ಪುನರಾರಂಭಿಸಿದ ನಂತರ ಅರ್ಜಿಗಳಲ್ಲಿ ತೀವ್ರ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ.

ಸಾರ್ವಜನಿಕರಿಂದ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿರುವ ಬಗ್ಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮೆಚ್ಚುಗೆ ವ್ಯಕ್ತಪಡಿಸಿದೆ. ವೀಸಾ ಸೇವೆ ವಿಸ್ತರಿಸಲಾಗುವುದು ಮತ್ತು ಅರ್ಜಿ ಪ್ರಕ್ರಿಯೆ ಸುಗಮಗೊಳಿಸುವುದನ್ನು ಮುಂದುವರಿಸುವುದಾಗಿ ಶುಕ್ರವಾರ ತನ್ನ ಅಧಿಕೃತ ಫೇಸ್‌ಬುಕ್ ಪುಟದ ಮೂಲಕ ಹೇಳಿದೆ

"ವಿವಿಧ ಉದ್ದೇಶಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ಬಯಸುವವರಿಂದ ಅಗಾಧ ಪ್ರತಿಕ್ರಿಯೆಯಿಂದ ನಾವು ಉತ್ತೇಜಿತರಾಗಿದ್ದೇವೆ ಎಂದು ಹೈಕಮಿಷನ್ ಹೇಳಿದೆ.

ಜನರಿಂದ ಜನರಿಗೆ ಹತ್ತಿರವಾಗುವ ಸಂಪರ್ಕಗಳನ್ನು ಬೆಳೆಸುವ ಮತ್ತು ಎರಡೂ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಈ ಕ್ರಮವು ಬಾಂಗ್ಲಾದೇಶಾದ್ಯಂತ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ.

ಸೌದಿ ಅರೇಬಿಯಾ-ಬಾಂಗ್ಲಾದೇಶ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (SABCCI) ಅಧ್ಯಕ್ಷ ಅಶ್ರಫುಲ್ ಹಕ್ ಚೌಧರಿ ಸುದ್ದಿಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

ಇದು ಬಾಂಗ್ಲಾದೇಶದ ಜನರಿಗೆ ತುಂಬಾ ಒಳ್ಳೆಯ ಸುದ್ದಿ. ಎರಡು ನೆರೆಹೊರೆಯವರ ನಡುವಿನ ಐತಿಹಾಸಿಕ ಸಂಬಂಧಗಳು ಮತ್ತು ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ, ಆರೋಗ್ಯ ರಕ್ಷಣೆ ಮತ್ತು ಇತರ ವಲಯಗಳಿಗೆ ತುಂಬಾ ಪ್ರಯೋಜನವಾಗಲಿದೆ. ಸುಧಾರಿತ ವೀಸಾ ಸೇವೆಗಳು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ವ್ಯಾಪಾರ, ಹೂಡಿಕೆ ಮತ್ತು ಒಟ್ಟಾರೆ ಸಹಕಾರಕ್ಕೆ ಕಾರಣವಾಗುತ್ತವೆ ಎಂದು ಅವರು ಆಶಿಸಿದ್ದಾರೆ.

Casual Images
No police, No court: ಅಕ್ರಮ ಬಾಂಗ್ಲಾ ವಲಸಿಗರು ಇನ್ನು ಮುಂದೆ ನೇರ BSF ವಶಕ್ಕೆ: CM ಸುವೇಂದು ಅಧಿಕಾರಿ ಸೂಚನೆ

ಪ್ರವಾಸಿ ವೀಸಾಗಳನ್ನು ಜೂನ್ 28, 2026 ರಂದು ಢಾಕಾದಲ್ಲಿರುವ ಒಂದು ಕೇಂದ್ರ ಸೇರಿದಂತೆ ಐದು ಕೇಂದ್ರಗಳಿಂದ ಅಧಿಕೃತವಾಗಿ ಪುನರಾರಂಭಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com