ಖಮೇನಿ ಅಂತ್ಯಕ್ರಿಯೆಯಲ್ಲಿ 'Kill Trump' ಬ್ಯಾನರ್‌ ಹಿಡಿದು ಶೋಕತಪ್ತರ ಆಕ್ರೋಶ!

ಮೆರವಣಿಗೆಯಲ್ಲಿ ಕಾಣಿಸಿಕೊಂಡ ಬ್ಯಾನರ್ ಹಾಗೂ ಫಲಕಗಳಲ್ಲಿ "ಟ್ರಂಪ್ ಅವರನ್ನು ಕೊಲ್ಲಿ" ಎಂದು ಬರೆಯಲಾಗಿತ್ತು. ಅದರಲ್ಲಿ "ಟ್ರಂಪ್" ಎಂಬ ಪದದ ಮೂಲಕ ಗುಂಡು ಹಾದು ಹೋಗುವುದನ್ನು ಚಿತ್ರಿಸಲಾಗಿದೆ.
Mourners carry 'Kill Trump' banners at Ali Khamenei's funeral
'Kill Trump' ಬ್ಯಾನರ್‌
Updated on

ಟೆಹ್ರಾನ್: ಟೆಹ್ರಾನ್‌ನಲ್ಲಿ ಸೋಮವಾರ ನಡೆದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಶೋಕತಪ್ತರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಎಂದು ಬರೆಯಲಾಗಿದ್ದ ಬ್ಯಾನರ್‌ಗಳು ಮತ್ತು ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು ಎಂದು ಅಲ್ ಜಜೀರಾ ವರದಿ ಮಾಡಿದೆ.

ಮೆರವಣಿಗೆಯಲ್ಲಿ ಕಾಣಿಸಿಕೊಂಡ ಬ್ಯಾನರ್ ಹಾಗೂ ಫಲಕಗಳಲ್ಲಿ "ಟ್ರಂಪ್ ಅವರನ್ನು ಕೊಲ್ಲಿ" ಎಂದು ಬರೆಯಲಾಗಿತ್ತು. ಅದರಲ್ಲಿ "ಟ್ರಂಪ್" ಎಂಬ ಪದದ ಮೂಲಕ ಗುಂಡು ಹಾದು ಹೋಗುವುದನ್ನು ಚಿತ್ರಿಸಲಾಗಿದೆ. ಇತರ ಶೋಕತಪ್ತರು "ರಕ್ತ ಕುದಿಯುತ್ತಿದೆ" ಎಂಬ ಪದಗಳ ಜೊತೆಗೆ ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್, ಅಮೆರಿಕ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಚಿತ್ರಗಳನ್ನು ಒಳಗೊಂಡ ಫಲಕಗಳನ್ನು ಹಿಡಿದಿದ್ದರು.

ಯೂರೋನ್ಯೂಸ್ ಪ್ರಕಾರ, ಅಂತ್ಯಕ್ರಿಯೆಯ ವೇಳೆ ಭಾನುವಾರ ಖಮೇನಿ ಅವರ ಮೃತದೇಹದ ಬಳಿ ಪ್ರಾರ್ಥನೆ ಸಲ್ಲಿಸುವ ಮೊದಲು ಶೋಕತಪ್ತರನ್ನು ಉದ್ದೇಶಿಸಿ ಮಾತನಾಡಿದ ಶ್ಲಾಘಕ ಮೊಹಮ್ಮದ್ ರಸೌಲಿ ಅವರು ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

Mourners carry 'Kill Trump' banners at Ali Khamenei's funeral
ಹತ್ಯೆಯಾಗಿ 4 ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆಗೆ ಇರಾನ್ ಸಿದ್ಧತೆ: ಶವಪೆಟ್ಟಿಗೆ ಪ್ರದರ್ಶನ; ಇಷ್ಟು ದಿನ ಎಲ್ಲಿತ್ತು ಶರೀರ?

"ನನ್ನ ಇಮಾಮ್ ಮತ್ತು ನನ್ನ ನಾಯಕನನ್ನು ಕೊಂದವನನ್ನು ನಾವು ಏಕೆ ಕೊಲ್ಲಬಾರದು?" ರಸೌಲಿ ಪ್ರಶ್ನಿಸಿದರು.

"ನಿಮ್ಮ ಕೊಲೆಗಾರನನ್ನು ನಾವು ಕೊಲ್ಲದಿದ್ದರೆ ಅದು ನಮಗೆ ಅವಮಾನ" ಎಂದು ಅವರು ಹೇಳಿದರು.

ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಮತ್ತು ಘೋಷಣೆಗಳು ಸಮಾರಂಭದ ಸುತ್ತಲೂ ಗೋಚರಿಸುತ್ತಿದ್ದವು ಎಂದು ಯೂರೋನ್ಯೂಸ್ ವರದಿ ಮಾಡಿದೆ.

ಕಳೆದ ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನವೇ ಮೂರು ದಶಕಗಳಿಂದ ಇರಾನ್ ಅನ್ನು ಆಳಿದ ಖಮೇನಿ ಅವರನ್ನು ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com