

ಡಮಾಸ್ಕಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸಿರಿಯಾ ಭೇಟಿ ವೇಳೆಯಲ್ಲಿ ಸ್ಫೋಟ ಸಂಭವಿಸಿದೆ. ಅವರು ಡಮಸ್ಕಸ್ ನಲ್ಲಿ ತಂಗಿದ್ದ ಹೋಟೆಲ್ ಬಳಿ ಮಂಗಳವಾರ ಉಂಟಾದ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದು ಇತ್ತೀಚಿನ ರಾಜಕೀಯ ಬದಲಾವಣೆಗಳ ಹೊರತಾಗಿಯೂ ದೇಶದ ದುರ್ಬಲ ಪರಿಸ್ಥಿತಿ ಮತ್ತು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿತ್ತು.
ಮ್ಯಾಕ್ರನ್ ತಂಗಿದ್ದ ಫೋರ್, ಸೀಸನ್ ಹೋಟೆಲ್ ಬಳಿ ಸ್ಫೋಟ ಸಂಭವಿಸಿದೆ. ಸ್ಫೋಟಕಗಳನ್ನು ಕಸದ ತೊಟ್ಟಿ ಹಗೂ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಸ್ಫೋಟದ ಪರಿಣಾಮ ಸ್ಥಳದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಸ್ಫೋಟ ಸಂಭವಿಸುವ ಮುನ್ನವೇ ಮ್ಯಾಕ್ರನ್ ಹೋಟೆಲ್‌ನಿಂದ ನಿರ್ಗಮಿಸಿದ್ದರಿಂದ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಫ್ರೆಂಚ್ ಅಧಿಕಾರಿಗಳು ನಂತರ ಖಚಿತಪಡಿಸಿದ್ದಾರೆ.