ಓಮನ್ ಕರಾವಳಿಯಲ್ಲಿ ಭಾರತೀಯರಿದ್ದ ಹಡಗಿನ ಮೇಲೆ ದಾಳಿ: ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

"ಇಂದು ಮುಂಜಾನೆ ಓಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಜಿಎಫ್‌ಎಸ್ ಗ್ಯಾಲಕ್ಸಿ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ" ಎಂದು ಭಾರತ ಸರ್ಕಾರ ಹೇಳಿದೆ.
Oman
ಓಮನ್ ಕರಾವಳಿ ಪ್ರದೇಶonline desk
Updated on

ನವದೆಹಲಿ: ಓಮನ್ ಕರಾವಳಿಯ ಬಳಿ ಇರಾನ್ ಹಾರಿಸಿದ "ಎಚ್ಚರಿಕೆ ಗುಂಡು"ಗೆ ಗುರಿಯಾದ ವ್ಯಾಪಾರಿ ಹಡಗಿನ ಮೇಲಿನ ದಾಳಿಯನ್ನು ಭಾರತ ಭಾನುವಾರ ಖಂಡಿಸಿದ್ದು, ಹಡಗಿನಲ್ಲಿ 11 ಭಾರತೀಯ ನಾವಿಕರಿದ್ದರು ಎಂದು ಹೇಳಿದೆ. ಅವರಲ್ಲಿ ಹತ್ತು ಜನರನ್ನು ರಕ್ಷಿಸಲಾಗಿದೆ, ಆದರೆ ಒಬ್ಬರು ಕಾಣೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

"ಇಂದು ಮುಂಜಾನೆ ಓಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಜಿಎಫ್‌ಎಸ್ ಗ್ಯಾಲಕ್ಸಿ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿದ್ದ 11 ಭಾರತೀಯ ಪ್ರಜೆಗಳಲ್ಲಿ ಇಲ್ಲಿಯವರೆಗೆ 10 ಜನರನ್ನು ರಕ್ಷಿಸಲಾಗಿದೆ, ಆದರೆ 1 ಭಾರತೀಯ ಪ್ರಜೆ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

Oman
ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಅಮೆರಿಕ ದಾಳಿ: ಇಬ್ಬರು ಭಾರತೀಯ ನಾವಿಕರು, ಓರ್ವ ಮುಖ್ಯ ಇಂಜಿನಿಯರ್ ಸಾವು! Video

ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಓಮನ್ ಅಧಿಕಾರಿಗಳೊಂದಿಗೆ ಪೂರ್ವಭಾವಿಯಾಗಿ ಸಮನ್ವಯ ಸಾಧಿಸುತ್ತಿದೆ. ಓಮನ್ ಅಧಿಕಾರಿಗಳ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com