ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಇರಾನ್ ದಾಳಿ; ಪುಣೆ ಮೂಲದ ಭಾರತೀಯ ನಾವಿಕ ಸಾವು

ಮೃತ ನಾವಿಕನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಭಾರತೀಯ ಅಧಿಕಾರಿಗಳು, ಯುಎಇ ಅಧಿಕಾರಿಗಳು ಮತ್ತು ಹಡಗು ಕಂಪನಿಯೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.
Indian sailor missing after Hormuz ship attack confirmed dead
ಒಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ
Updated on

ದುಬೈ: ಓಮನ್ ಕರಾವಳಿಯಲ್ಲಿ MV GFS ಗ್ಯಾಲಕ್ಸಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ದೃಢಪಡಿಸಿದೆ.

ಮೃತ ನಾವಿಕನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಭಾರತೀಯ ಅಧಿಕಾರಿಗಳು, ಯುಎಇ ಅಧಿಕಾರಿಗಳು ಮತ್ತು ಹಡಗು ಕಂಪನಿಯೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

"ಜುಲೈ 12, 2026 ರಂದು ವಾಣಿಜ್ಯ ಹಡಗಿನ MV GFS ಗ್ಯಾಲಕ್ಸಿ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಕ್ಕೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ" ಎಂದು ಮಿಷನ್ X ನಲ್ಲಿ ರಾಯಭಾರ ಕಚೇರಿ ಪೋಸ್ಟ್‌ ಮಾಡಿದೆ.

Indian sailor missing after Hormuz ship attack confirmed dead
ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ: ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ಓಮನ್ ಕರಾವಳಿಯಲ್ಲಿ ಭಾನುವಾರ ಸೈಪ್ರಸ್ ಧ್ವಜ ಹೊಂದಿದ್ದ MV GFS ಗ್ಯಾಲಕ್ಸಿ ಮೇಲೆ ನಡೆದ ದಾಳಿಯ ವೇಳೆ ಅದರಲ್ಲಿದ್ದ 11 ಭಾರತೀಯ ಸಿಬ್ಬಂದಿಗಳಲ್ಲಿ ಒಬ್ಬರು ಮೃತಪಟ್ಟಿದ್ದರು. ಹಡಗಿನಲ್ಲಿದ್ದ ಇತರ ಹತ್ತು ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಮೃತ ನಾವಿಕನನ್ನು ಪುಣೆಯ 30 ವರ್ಷದ ಹೇರಾಂಬ್ ಕರ್ಮಾರ್ಕರ್ ಎಂದು ಗುರುತಿಸಲಾಗಿದ್ದು, ದಾಳಿಗೊಳಗಾದಾಗ ಸರಕು ಸಾಗಣೆ ಹಡಗಿನಲ್ಲಿ ಮೂರನೇ ಎಂಜಿನಿಯರ್ ಆಗಿದ್ದರು.

ಗಲ್ಫ್ ನ್ಯೂಸ್ ಪ್ರಕಾರ, ಮಂಗಳವಾರ ಸಂಜೆ ಹಡಗು ಕಂಪನಿಯು, ಓಮನ್‌ನ ಕರಾವಳಿ ಕಾವಲು ಪಡೆ ಕರ್ಮಾರ್ಕರ್ ಅವರ ಮೃತದೇಹವನ್ನು ವಶಪಡಿಸಿಕೊಂಡಿದೆ ಎಂದು ಅವರ ಕುಟುಂಬಕ್ಕೆ ತಿಳಿಸಿತ್ತು. ಕರ್ಮಾರ್ಕರ್ ಅವರು ಕಾಣೆಯಾದ ಸುಮಾರು 60 ಗಂಟೆಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ.

"ರಾಯಭಾರ ಕಚೇರಿಯು ದುಃಖಿತ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಸಂಬಂಧಿತ ಯುಎಇ ಅಧಿಕಾರಿಗಳು ಮತ್ತು ಹಡಗು ಕಂಪನಿಯೊಂದಿಗೆ ಸಮನ್ವಯ ಸಾಧಿಸುತ್ತಿದೆ" ಎಂದು ಭಾರತೀಯ ಮಿಷನ್ ತಿಳಿಸಿದೆ.

ಕರ್ಮಾರ್ಕರ್ ಅವರು ಪತ್ನಿ, ತಾಯಿ ಮತ್ತು ತಂಗಿಯನ್ನು ಅಗಲಿದ್ದು, ಅವರು ಯುಕೆಯ ಗ್ಲ್ಯಾಸ್ಗೋ ಕಾಲೇಜಿನಿಂದ ಸಾಗರ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದು ವ್ಯಾಪಾರಿ ನೌಕಾಪಡೆಗೆ ಸೇರಿದ್ದರು ಎಂದು ಅವರ ಮಾವ ವಿವೇಕ್ ಟಂಡನ್ ಬುಧವಾರ ಹೇಳಿದ್ದಾರೆ.

ಭಾರತವು ಹಡಗಿನ ಮೇಲಿನ ದಾಳಿಯನ್ನು ಖಂಡಿಸಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಕ್ಷಣವೇ ಕಡಿಮೆ ಮಾಡುವಂತೆ ಆಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com