ಕೆನಡಾ ಗ್ಯಾಂಗ್ ಜೊತೆ ಲಿಂಕ್, ಅಮೆರಿಕಾದಲ್ಲಿ ಡ್ರಗ್ಸ್ ಸಾಗಣೆ: FBI ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಭಾರತೀಯ ಮೂಲದ ಯುವಕ..!

ಅಂತರರಾಷ್ಟ್ರೀಯ ಡ್ರಗ್ ಮಾಫಿಯಾಗಳು ಮತ್ತು ಗ್ಯಾಂಗ್‌ಗಳನ್ನು ಮಟ್ಟಹಾಕಲು ಯುಎಸ್ ಕಾನೂನು ಜಾರಿ ಸಂಸ್ಥೆಗಳು 'ಆಪರೇಷನ್ ಹಾರ್ಡ್‌ಬಾಲ್' ಎಂಬ ಬೃಹತ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿವೆ.
FBI post
FBI ಪ್ರಕಟಣೆ
Updated on

ವಾಷಿಂಗ್ಟನ್: ಅಂತರರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಮುಖ ತನಿಖಾ ಸಂಸ್ಥೆಯಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI), ಭಾರತೀಯ ಮೂಲದ 30 ವರ್ಷದ ಅಮೃತಪಾಲ್ ಸಿಂಗ್ ಎಂಬಾತನನ್ನು ತನ್ನ ‘ಮೋಸ್ಟ್ ವಾಂಟೆಡ್’ (ಅತ್ಯಂತ ಪ್ರಮುಖ ಅಪರಾಧಿಗಳ) ಪಟ್ಟಿಗೆ ಸೇರಿಸಿದೆ.

ಎಫ್‌ಬಿಐ ನೀಡಿರುವ ಮಾಹಿತಿಯ ಪ್ರಕಾರ, ಅಮೃತಪಾಲ್ ಸಿಂಗ್ ಕೆನಡಾದಿಂದ ಕಾರ್ಯನಿರ್ವಹಿಸುವ 'ರವೀಂದರ್ ಧಂಡಾ ಆರ್ಗನೈಸ್ಡ್ ಕ್ರೈಮ್ ಗ್ರೂಪ್' ಎಂಬ ಅಪಾಯಕಾರಿ ಅಂತರರಾಷ್ಟ್ರೀಯ ಅಪರಾಧ ಜಾಲದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಈ ದಂಧೆಯು ಉತ್ತರ ಅಮೆರಿಕಾದಾದ್ಯಂತ ಭಾರಿ ಪ್ರಮಾಣದಲ್ಲಿ ಕೋಕೇನ್ ಮತ್ತು ಮೆಥಾಂಫೆಟಮೈನ್ ನಂತಹ ನಿಷೇಧಿತ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದೆ ಎಂದು ಆರೋಪಿಸಿದೆ.

ಮಾದಕ ದ್ರವ್ಯಗಳ ಅಕ್ರಮ ವಿತರಣೆ, ಸಾಗಣೆ ಮತ್ತು ರಫ್ತು ಮಾಡಲು ಸಂಚು ರೂಪಿಸಿದ ಗಂಭೀರ ಆರೋಪಗಳು ಈತನ ಮೇಲಿವೆ.

ಈ ಹಿನ್ನೆಲೆಯಲ್ಲಿ, ಲಾಸ್ ಏಂಜಲೀಸ್‌ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಜೂನ್ 2026 ರಲ್ಲಿ ಈತನ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

FBI post
Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ, ತೈಲ ಬೆಲೆ ಭಾರೀ ಏರಿಕೆ..!

ಅಂತರರಾಷ್ಟ್ರೀಯ ಡ್ರಗ್ ಮಾಫಿಯಾಗಳು ಮತ್ತು ಗ್ಯಾಂಗ್‌ಗಳನ್ನು ಮಟ್ಟಹಾಕಲು ಯುಎಸ್ ಕಾನೂನು ಜಾರಿ ಸಂಸ್ಥೆಗಳು 'ಆಪರೇಷನ್ ಹಾರ್ಡ್‌ಬಾಲ್' ಎಂಬ ಬೃಹತ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿವೆ. ಈ ತನಿಖೆಯ ಭಾಗವಾಗಿಯೇ ಅಮೃತಪಾಲ್ ಸಿಂಗ್‌ನನ್ನು ಹಿಡಿಯಲು ಬಲೆ ಬೀಸಲಾಗಿದೆ.

ಪ್ರಸ್ತುತ ಅಮೃತಪಾಲ್ ಸಿಂಗ್ ತಲೆಮರೆಸಿಕೊಂಡಿದ್ದು, ಎಫ್‌ಬಿಐನ ಲಾಸ್ ಏಂಜಲೀಸ್ ಫೀಲ್ಡ್ ಆಫೀಸ್ ಈತನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ತಕ್ಷಣ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com