ಲಂಡನ್​ನ ಐಷಾರಾಮಿ ಅಪಾರ್ಟ್​​ಮೆಂಟ್​ನಿಂದ ಬಿದ್ದು ಭಾರತೀಯ ದಂಪತಿ, ಅವರ ಪುತ್ರ ಸಾವು!

ಮೃತ ದಂಪತಿಯನ್ನು 47 ವರ್ಷದ ರಾಕೇಶ್ ಪೈ, ಅವರ ಪತ್ನಿ ಅದಿತಿ ಪರಲ್ಕರ್(46) ಮತ್ತು ಅವರ ಮಗ ಸಿದ್ ಎಂದು ಗುರುತಿಸಲಾಗಿದೆ.
Indian couple, ill son, fall to death from London flat
ಸಾಂದರ್ಭಿಕ ಚಿತ್ರ
Updated on

ಲಂಡನ್: ಲಂಡನ್‌ನ ಐಷಾರಾಮಿ ಅಪಾರ್ಟ್‌ಮೆಂಟ್ ಬ್ಲಾಕ್‌ನಿಂದ ಬಿದ್ದು ಭಾರತೀಯ ಮೂಲದ ದಂಪತಿ ಮತ್ತು ಅವರ 9 ವರ್ಷದ ಅಸ್ವಸ್ಥ ಮಗ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ವರದಿ ಮಾಡಿವೆ.

ಮೃತ ದಂಪತಿಯನ್ನು 47 ವರ್ಷದ ರಾಕೇಶ್ ಪೈ, ಅವರ ಪತ್ನಿ ಅದಿತಿ ಪರಲ್ಕರ್(46) ಮತ್ತು ಅವರ ಮಗ ಸಿದ್ ಎಂದು ಗುರುತಿಸಲಾಗಿದೆ.

ಮೇ 27 ರಂದು ದಕ್ಷಿಣ ಲಂಡನ್‌ನ ಎಲಿಫೆಂಟ್ ಮತ್ತು ಕ್ಯಾಸಲ್‌ನಲ್ಲಿರುವ ಹೈಪಾಯಿಂಟ್ ಟವರ್ ಬ್ಲಾಕ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನ 36ನೇ ಮಹಡಿಯಲ್ಲಿರುವ ಬಾಲ್ಕನಿಯಿಂದ ಬಿದ್ದು ಈ ಮೂವರು ಮೃತಪಟ್ಟಿದ್ದಾರೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

Indian couple, ill son, fall to death from London flat
ಮಂಡ್ಯದಲ್ಲಿ ಮನಕಲಕುವ ಘಟನೆ: ತಂದೆ-ತಾಯಿ, ಮಗ ನಿಗೂಢ ಸಾವು; ಡೆತ್​ನೋಟ್​​ನಲ್ಲಿ ಶಕ್ತಿ ಯೋಜನೆ ಉಲ್ಲೇಖ!

ಸಂಡೇ ಗಾರ್ಡಿಯನ್ ಪ್ರಕಾರ, ಈ ಕುಟುಂಬವು 45 ಅಂತಸ್ತಿನ ಕಟ್ಟಡದ 36ನೇ ಮಹಡಿಯಲ್ಲಿ ವಾಸಿಸುತ್ತಿತ್ತು.

ಸಿದ್ "ಗಂಭೀರ ಕಾಯಿಲೆಗಳಿಂದ" ಬಳಲುತ್ತಿದ್ದರು ಮತ್ತು ಅವರ "ಈ ಕಠಿಣ ನಿರ್ಧಾರಕ್ಕೆ" ಮಗನ ಸ್ಥಿತಿಯೇ ಕಾರಣ ಎಂದು ಪೊಲೀಸರು ನಂಬಿರುವುದಾಗಿ ಬರ್ಮೊಂಡ್ಸೆ ಮತ್ತು ಓಲ್ಡ್ ಸೌತ್‌ವಾರ್ಕ್‌ನ ಲೇಬರ್ ಸಂಸದ ನೀಲ್ ಕೊಯ್ಲ್ ಅವರು ಹೇಳಿದ್ದಾರೆ.

ಭಾರತದಲ್ಲಿ ಜನಿಸಿದ ಪೈ ಮತ್ತು ಪರಲ್ಕರ್ ಕ್ರಮವಾಗಿ ಹಣಕಾಸು ಮತ್ತು ನಿರ್ಮಾಣ ವ್ಯವಹಾರದಲ್ಲಿ ತೊಡಗಿದ್ದರು.

ಈ ದಂಪತಿ 2020 ರಲ್ಲಿ ಭಾರತದಲ್ಲಿ ತಮ್ಮ ಮಗನಿಗೆ ಚಿಕಿತ್ಸೆ ಪಡೆಯಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ. ಆದರೆ ಮಗನ ಆರೋಗ್ಯ ಸುಧಾರಿಸದ ಹಿನ್ನಲೆಯಲ್ಲಿ ಕಳೆದ ವರ್ಷ ಬ್ರಿಟನ್‌ಗೆ ಮರಳಿದ್ದರು.

ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ತನಿಖೆಯ ನಂತರವೇ ನಿಖರವಾಗಿ ಏನಾಯಿತು ಎಂಬುದು ತಿಳಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com