

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇರಾನ್‌ಗೆ ಹೊಸದಾದ ಎಚ್ಚರಿಕೆ ನೀಡಿದ್ದಾರೆ. ಟೆಹರಾನ್ ವಿರುದ್ಧ ಅಮೆರಿಕ ಪ್ರಬಲ ಮಿಲಿಟರಿ ದಾಳಿ ನಡೆಸಲಿದೆ ಎಂಬ ಸಂದೇಶ ರವಾನಿಸಿದ್ದು, ಇರಾನ್‌ನ ಇಂಧನ ಮೂಲಸೌಕರ್ಯದ ಪ್ರಮುಖ ಅಂಶಗಳ ವಿರುದ್ಧ ಕ್ರಮದ ಸೂಚನೆ ನೀಡಿದ್ದಾರೆ.
ಇರಾನ್‌ನ ಮಿಲಿಟರಿ ಸಾಮರ್ಥ್ಯಗಳು ಗಮನಾರ್ಹವಾಗಿ ದುರ್ಬಲಗೊಂಡಿದ್ದು, ಮುಂದಿನ ಕ್ರಮ ಸನ್ನಿಹಿತವಾಗಿದೆ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಇರಾನ್ ಮೇಲೆ ದಾಳಿ ಮಾಡಲಿದೆ (ಅದರ ನೌಕಾಪಡೆ, ವಾಯುಪಡೆ, ರಾಡಾರ್, ವಿಮಾನ ವಿರೋಧಿ ಮತ್ತು ಇತರ ಎಲ್ಲಾ ರೀತಿಯ ರಕ್ಷಣಾ, ಅದರ ಹೆಚ್ಚಿನ ಆಕ್ರಮಣಕಾರಿ ಸಾಮರ್ಥ್ಯ ನಾಶವಾಗಿದೆ) ಇಂದು ರಾತ್ರಿ ತುಂಬಾ ಕಠಿಣವಾಗಿದೆ ಎಂದಿದ್ದಾರೆ.
ಖಾರ್ಗ್ ದ್ವೀಪ ಮತ್ತಿತರ ತೈಲ ಸಂಬಂಧಿತ ಕೇಂದ್ರಗಳು ಸೇರಿದಂತೆ ಇರಾನ್ ನ ಪ್ರಮುಖ ಇಂಧನ ಮೂಲಸೌಕರ್ಯದ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ಟ್ರಂಪ್ ಸೂಚಿಸಿದ್ದಾರೆ.
"ತುಂಬಾ ದೂರದಲ್ಲಿಲ್ಲ. ಮುಂದೆ ನಾವು ಖಾರ್ಗ್ ದ್ವೀಪ ಮತ್ತಿತರ ಇಂಧನ ಮೂಲಸೌಕರ್ಯ ಕೇಂದ್ರಗಳನ್ನು ಪಡೆದುಕೊಳ್ಳುತ್ತೇವೆ. ವೆನೆಜುವೆಲಾದಂತೆ ಅವುಗಳ ತೈಲ ಮತ್ತು ಅನಿಲ ಮಾರುಕಟ್ಟೆಗಳ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ವಾಷಿಂಗ್ಟನ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಟ್ರಂಪ್ ನೀಡಿರುವ ಹೇಳಿಕೆ ಮಧ್ಯ ಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚಾಗುವುದನ್ನು ಸೂಚಿಸಿದೆ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು! ಎಂದು ಟ್ರಂಪ್ ಅಂತ್ಯದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಭಯ ರಾಷ್ಟ್ರಗಳಿಂದ ತೀವ್ರವಾದ ಎಚ್ಚರಿಕೆಗಳು ಮತ್ತು ಮಿಲಿಟರಿ ಬೆದರಿಕೆಗಳು ನಡೆಯುತ್ತಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಟ್ರಂಪ್ ಈ ಹೇಳಿಕೆ ನೀಡಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Advertisement