Stanford Graduation Ceremony: ಗೂಗಲ್ CEO ಸುಂದರ್ ಪಿಚೈ ವೇದಿಕೆ ಏರುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು! Video

ಪದವಿ ಪ್ರದಾನ ಸಮಾರಂಭಕ್ಕೆ ಧರಿಸಿದ್ದ ಉಡುಪು ಹಾಗೂ ಕ್ಯಾಪ್ ಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾಂಗಣದಿಂದ ನಿರ್ಗಮಿಸುತ್ತಿರುವುದು ವಿಡಿಯೋದಲ್ಲಿದೆ. ಆಗಲು ಕೆಲವರು ಪಿಚ್ಚೈ ವಿರುದ್ಧ ಘೋಷಣೆ ಕೂಗುವುದನ್ನು ಕೇಳಬಹುದು.
The students stood up from their seats and waved Palestinian flags
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
Updated on

ಸ್ಟ್ಯಾನ್‌ಫೋರ್ಡ್: ಅಮೆರಿಕದ ಸ್ಟ್ರಾನ್ ಪೋರ್ಡ್ ವಿಶ್ವವಿದ್ಯಾಲಯದ 2026 ರ ಪದವಿ ಪ್ರದಾನ ಸಮಾರಂಭದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ವೇದಿಕೆ ಏರುತ್ತಿದ್ದಂತೆ ಸುಮಾರು 200 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಪಿಚೈ ಅವರನ್ನು ಪರಿಚಯಿಸುತ್ತಿದ್ದಂತೆ, ತಮ್ಮ ಆಸನಗಳಿಂದ ಎದ್ದುನಿಂತ ವಿದ್ಯಾರ್ಥಿಗಳು ಪ್ಯಾಲೆಸ್ಟೀನಿಯನ್ ಧ್ವಜಗಳ ಹಾರಾಟ ನಡೆಸಿದ್ದಾರೆ. ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲವಾಗಿ ಸಾಂಪ್ರದಾಯಿಕ ಸ್ಕಾರ್ಫ್ ಧರಿಸಿರುವುದನ್ನು ಕಾಣಬಹುದು.

ಪದವಿ ಪ್ರದಾನ ಸಮಾರಂಭಕ್ಕೆ ಧರಿಸಿದ್ದ ಉಡುಪು ಹಾಗೂ ಕ್ಯಾಪ್ ಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾಂಗಣದಿಂದ ನಿರ್ಗಮಿಸುತ್ತಿರುವುದು ವಿಡಿಯೋದಲ್ಲಿದೆ. ಆಗಲು ಕೆಲವರು ಪಿಚ್ಚೈ ವಿರುದ್ಧ ಘೋಷಣೆ ಕೂಗುವುದನ್ನು ಕೇಳಬಹುದು.

ಆದರೆ ಸ್ಟ್ಯಾನ್‌ಫೋರ್ಡ್ ಹಳೆಯ ವಿದ್ಯಾರ್ಥಿಯಾಗಿರುವ ಪಿಚೈ ತಮ್ಮ ಭಾಷಣವನ್ನು ಮುಂದುವರಿಸಿದ್ದಾರೆ. ಇದು ನನ್ನ ಎರಡನೇ ಭಾಷಣ. ಮೊದಲ ಭಾಷಣದಲ್ಲಿ ಹೀಗೆ ಆಗರಲಿಲ್ಲ ಎಂದು ಪಿಚ್ಚೈ ಹೇಳುವುದು ಕೂಡಾ ವಿಡಿಯೋದಲ್ಲಿದೆ.

ಐಡಿಎಫ್, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮತ್ತು ಐಸಿಇ ಜೊತೆಗಿನ ಗೂಗಲ್‌ನ ಒಪ್ಪಂದಗಳ ವಿರುದ್ಧ ಸ್ಟೂಡೆಂಟ್ಸ್ ಫಾರ್ ಜಸ್ಟೀಸ್ ಇನ್ ಪ್ಯಾಲೆಸ್ಟೈನ್ ಮತ್ತು ನೋ ಟೆಕ್ ಫಾರ್ ಅಪರ್ತೀಡ್ ವಾಕ್‌ಔಟ್ ಅನ್ನು ಆಯೋಜಿಸಿತ್ತು.

ಗೂಗಲ್ ಮತ್ತು ಇಸ್ರೇಲ್ ಸರ್ಕಾರದ ನಡುವಿನ $1.2 ಬಿಲಿಯನ್ ಕ್ಲೌಡ್-ಕಂಪ್ಯೂಟಿಂಗ್ ಒಪ್ಪಂದದ ಪ್ರಾಜೆಕ್ಟ್ ನಿಂಬಸ್‌ಗೆ ಸಂಬಂಧಿಸಿದ ಪ್ರತಿಭಟನೆ ಇದಾಗಿದೆ. ಪ್ಯಾಲೆಸ್ಟೀನಿಯನ್ ಪರ ಕಾರ್ಯಕರ್ತರು ಈ ಒಪ್ಪಂದವನ್ನು ಟೀಕಿಸಿದ್ದಾರೆ ಮತ್ತು ಗೂಗಲ್ ತನ್ನ ತಂತ್ರಜ್ಞಾನ ಸೇವೆಗಳ ಮೂಲಕ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.

The students stood up from their seats and waved Palestinian flags
AI ಯಿಂದ ಕೆಲಸ ಹೋಗುವುದಿಲ್ಲ, ಮರು ರೂಪಿಸುತ್ತದೆ; ತರಬೇತಿ ಅತ್ಯಂತ ಮುಖ್ಯ: Google CEO ಸುಂದರ್ ಪಿಚ್ಚೈ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com