ಕುವೈತ್‌ನಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳು ಪತನ; ರಾಯಭಾರ ಕಚೇರಿ ಆವರಣದಲ್ಲಿ ಬೆಂಕಿ: ಕುವೈತ್‌

ಇರಾನ್, ಅಮೆರಿಕದ ಮೇಲೆ ಪ್ರತಿದಾಳಿ ಮುಂದುವರೆಸಿದ್ದು, ಇದೇ ‌ಸಂದರ್ಭದಲ್ಲಿ ಅಮೆರಿಕದ ಹಲವು ಎಫ್‌-15 ಯುದ್ಧ ವಿಮಾನಗಳು ಪತನಗೊಂಡಿವೆ.
Several US jets crash, fire at embassy compound: Kuwait
ಪಶ್ಚಿಮ ಏಷ್ಯಾ ಉದ್ವಿಗ್ನ
Updated on

ಕುವೈತ್‌ನಲ್ಲಿ ಸೋಮವಾರ ಅಮೆರಿಕದ ಹಲವಾರು ಯುದ್ಧವಿಮಾನಗಳು ಪತನಗೊಂಡಿವೆ ಎಂದು ಗಲ್ಫ್ ರಾಷ್ಟ್ರದ ರಕ್ಷಣಾ ಸಚಿವಾಲಯ ತಿಳಿಸಿದೆ.

ಇರಾನ್, ಅಮೆರಿಕದ ಮೇಲೆ ಪ್ರತಿದಾಳಿ ಮುಂದುವರೆಸಿದ್ದು, ಇದೇ ‌ಸಂದರ್ಭದಲ್ಲಿ ಅಮೆರಿಕದ ಹಲವು ಎಫ್‌-15 ಯುದ್ಧ ವಿಮಾನಗಳು ಪತನಗೊಂಡಿವೆ. ಅಪಘಾತಕ್ಕೂ ಮುನ್ನ ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್‌ ಆಗಿದ್ದಾರೆ. ಆದ್ರೆ ಅಪಘಾತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

ಅಪಘಾತಕ್ಕೀಡಾದ ವಿಮಾನದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕುವೈತ್ ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

Several US jets crash, fire at embassy compound: Kuwait
ವೈಮಾನಿಕ ದಾಳಿಗಳನ್ನು ಹಿಮ್ಮೆಟ್ಟಿಸಿದ ಕುವೈತ್; ಏಕಾಂಗಿ ಆಯ್ತಾ ಇರಾನ್?

ಕುವೈತ್‌ ಮೇಲೆ ಇರಾನ್ ದಾಳಿ ಮಾಡಿದ ನಂತರ ಅಮೆರಿಕ ರಾಯಭಾರ ಕಚೇರಿಯ ಆವರಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕುವೈತ್ ಅನ್ನು ಗುರಿಯಾಗಿಸಿಕೊಂಡು, ಇರಾನ್ ಕ್ಷಿಪಣಿ ಮತ್ತು ಡ್ರೋನ್ ಗುಂಡಿನ ದಾಳಿಯನ್ನು ತೀವ್ರಗೊಳಿಸಿದೆ.

ಕುವೈತ್‌ನಲ್ಲಿರುವ ನಾಗರಿಕರು ರಾಯಭಾರ ಕಚೇರಿಗೆ ಬರಬೇಡಿ: ಅಮೆರಿಕ ಸೂಚನೆ

ಏತನ್ಮಧ್ಯೆ, ದಾಳಿಯ ನಂತರ ಕುವೈತ್ ನಗರದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಆವರಣದಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿರುವ ತನ್ನ ನಾಗರಿಕರಿಗೆ ರಾಯಭಾರ ಕಚೇರಿಗೆ ಆಗಮಿಸದಂತೆ ಮತ್ತು ಮನೆಯೊಳಗೆ ಇದ್ದು ರಕ್ಷಣೆ ಪಡೆಯುವಂತೆ ಅಮೆರಿಕ ತನ್ನ ನಾಗರಿಕಿಗೆ ತುರ್ತು ಸಲಹೆಯನ್ನು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com