Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾನನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Iran International ವರದಿ ಮಾಡಿದೆ.
Ali Khamenei's son, Mojtaba Khamenei, selected as new Supreme Leader
ಅಲಿ ಖಮೇನಿ ಮತ್ತು ಮೊಜ್ತಾಬಾ ಖಮೇನಿ(ಸಂಗ್ರಹ ಚಿತ್ರ)
Updated on

ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಅಲಿ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್‌ನ ನೂತನ ಪರಮೋಚ್ಛ ನಾಯಕನಾಗಿ ದೇಶದ ಶಿಯಾ ಧಾರ್ಮಿಕ ಪಂಡಿತರನ್ನೊಳಗೊಂಡ ಸಂಸ್ಥೆ Assembly of Experts ಆಯ್ಕೆ ಮಾಡಿದೆ.

ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾನನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Iran International ವರದಿ ಮಾಡಿದೆ.

ಈ ಬೆಳವಣಿಗೆ ಅಲಿ ಖಮೇನಿ ಅವರ ನಿಧನದ ನಂತರ ನಡೆದಿದೆ. ಅಮೆರಿಕಾ-ಇಸ್ರೇಲ್ ದಾಳಿಗಳ ಹಿನ್ನೆಲೆಯಲ್ಲಿ ಖಮೇನಿ ಹತ್ಯೆಗೀಡಾದಿದ್ದು, ಪಶ್ಚಿಮ ಏಷ್ಯಾದಾದ್ಯಂತ ಸಶಸ್ತ್ರ ಸಂಘರ್ಷಗಳನ್ನು ಹೆಚ್ಚಿಸಿವೆ. ಪರಮೋಚ್ಛ ನಾಯಕನ ಸ್ಥಾನವು ರಾಜ್ಯದ ಎಲ್ಲಾ ವಿಷಯಗಳ ಮೇಲೆ ಅಂತಿಮ ಅಧಿಕಾರವನ್ನೂ, ಇರಾನ್‌ನ ಸಶಸ್ತ್ರ ಪಡೆಗಳು ಹಾಗೂ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ ಮೇಲಿನ ನಿಯಂತ್ರಣವನ್ನು ಹೊಂದಿದೆ.

Ali Khamenei's son, Mojtaba Khamenei, selected as new Supreme Leader
Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

ಮೊಜ್ತಾಬಾ ಖಮೇನಿ ಯಾರು?

ಮೊಜ್ತಾಬಾ ಖಮೇನಿ ಅವರು ಇತ್ತೀಚೆಗಷ್ಟೇ ಮೃತಪಟ್ಟ ಅತ್ಯುನ್ನತ ನಾಯಕ ಅಲಿ ಖಮೇನಿ ಅವರ ಎರಡನೇ ಪುತ್ರ. ಅವರ ಪದೋನ್ನತಿ ರಾಜಕೀಯವಾಗಿ ಸಂವೇದನಾಶೀಲ ವಿಷಯವಾಗಬಹುದು, ಏಕೆಂದರೆ ಇಸ್ಲಾಮಿಕ್ ರಿಪಬ್ಲಿಕ್ ದೀರ್ಘಕಾಲದಿಂದ ವಂಶಪಾರಂಪರ್ಯ ಆಡಳಿತವನ್ನು ಟೀಕಿಸುತ್ತಿದ್ದು, ತಾನು ರಾಜಶಾಹಿಗೆ ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಹೇಳಿಕೊಂಡಿದೆ.

ಮಧ್ಯಮ ಹುದ್ದೆಯ ಧಾರ್ಮಿಕ ಪಂಡಿತರಾಗಿ ಪರಿಚಿತರಾದ ಮೊಜ್ತಾಬಾ, ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾನ್‌ನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ತಂದೆಯ ಆಡಳಿತಾವಧಿಯಲ್ಲಿ ರಾಜಕೀಯ, ಸೈನಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡ ಇರಾನ್‌ನ ಪ್ರಭಾವಶಾಲಿ ಸೈನಿಕ ಮತ್ತು ಭದ್ರತಾ ಸಂಸ್ಥೆ- Islamic Revolutionary Guard Corps (IRGC) ಜೊತೆ ಅವರು ದೀರ್ಘಕಾಲದ ಸಂಬಂಧ ಹೊಂದಿದ್ದಾರೆ.

Ali Khamenei's son, Mojtaba Khamenei, selected as new Supreme Leader
ಸರ್ವೋಚ್ಚ ನಾಯಕನ ಆಯ್ಕೆಗಾಗಿ 88 ಸದಸ್ಯರು ಸೇರಿದ್ದ ಕಟ್ಟಡ ಧ್ವಂಸಗೈದ ಇಸ್ರೇಲ್; 9 ಸಾವಿರ ಕೋಟಿಯ ಅಮೆರಿಕದ ರೇಡಾರ್ ಧ್ವಂಸ!

2019ರಲ್ಲಿ ಅಮೆರಿಕಾದಿಂದ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲ್ಪಟ್ಟ IRGC, ಮೊಜ್ತಾಬಾವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. IRGC ಧಾರ್ಮಿಕ ಪಂಡಿತರ ಗುಂಪಿನ ಮೇಲೆ ಭಾರೀ ಒತ್ತಡ ತಂದು ಮೊಜ್ತಾಬಾವನ್ನು ಆಯ್ಕೆ ಮಾಡುವಂತೆ ಮಾಡಿದೆ.

ಮೊಜ್ತಾಬಾ ಪ್ರಾಯೋಗಿಕವಾಗಿ ಪರಮೋಚ್ಛ ನಾಯಕನ ಕಚೇರಿಯನ್ನು ನಿರ್ವಹಿಸುತ್ತಿದ್ದರೆಂದು ಹೇಳಲಾಗುತ್ತದೆ, ವ್ಯವಸ್ಥೆಯೊಳಗಿನ ಪ್ರಮುಖ ಶಕ್ತಿಕೇಂದ್ರ ವ್ಯಕ್ತಿಯಾಗಿ ಅನೇಕ ವಿಶ್ಲೇಷಕರು ಅವರನ್ನು ಪರಿಗಣಿಸುತ್ತಾರೆ. ಐಆರ್ ಜಿಸಿ ಜೊತೆಗಿನ ಅವರ ಸಂಪರ್ಕಗಳು ಮತ್ತು ಸಶಸ್ತ್ರ ಪಡೆಗಳಲ್ಲಿನ ಅನುಭವವು, ಪ್ರಾದೇಶಿಕವಾಗಿ ಸಂವೇದನಾಶೀಲ ಸಮಯದಲ್ಲಿ ದೇಶದ ನಿರ್ಧಾರ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com