'ಐರಿಸ್ ಡೆನಾ' ದಾಳಿಗೆ ತಕ್ಕ ಪ್ರತ್ಯುತ್ತರ ನೀಡದೇ ಬಿಡುವುದಿಲ್ಲ: ಇರಾನ್ ಸೇನಾ ಮುಖ್ಯಸ್ಥ

"ಡೆನಾ ನೌಕೆಯ ಸಿಬ್ಬಂದಿ ಶಾಂತಿಯುತ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಇರಾನ್‌ಗೆ ಹಿಂತಿರುಗುವಾಗ ದಾಳಿ ಮಾಡಲಾಗಿದೆ" ಎಂದು ಹತಾಮಿ ಹೇಳಿಕೆಯನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.
IRIS Dena attack won't go unanswered: Iran Army chief
'ಐರಿಸ್ ಡೆನಾ' ಮೇಲೆ ದಾಳಿ
Updated on

ಹಿಂದೂ ಮಹಾಸಾಗರದಲ್ಲಿ ತನ್ನ 'ಐರಿಸ್ ಡೆನಾ' ಯುದ್ಧನೌಕೆಯನ್ನು ಅಮೆರಿಕದ ಜಲಾಂತಾರ್ಗಾಮಿ ಮುಳುಗಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್‌ ಸೇನಾ ಮುಖ್ಯಸ್ಥ, ಡೆನಾ ಯುದ್ಧನೌಕೆಯ ಸಿಬ್ಬಂದಿ ಸಾವಿಗೆ 'ತಕ್ಕ ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ' ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.

ಇರಾನ್ ಸೇನೆಯ ಕಮಾಂಡರ್-ಇನ್-ಚೀಫ್ ಮೇಜರ್ ಜನರಲ್ ಅಮೀರ್ ಹತಾಮಿ, ದೇಶದ ಹೊಸ ಯುದ್ಧನೌಕೆಗಳಲ್ಲಿ ಒಂದಾದ ಹಡಗು ಮಿಲಿಟರಿ ತಾಲೀಮು ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ನಡೆದ ದಾಳಿಯನ್ನು ಖಂಡಿಸಿದ್ದಾರೆ.

"ಡೆನಾ ನೌಕೆಯ ಸಿಬ್ಬಂದಿ ಶಾಂತಿಯುತ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಇರಾನ್‌ಗೆ ಹಿಂತಿರುಗುವಾಗ ದಾಳಿ ಮಾಡಲಾಗಿದೆ" ಎಂದು ಹತಾಮಿ ಹೇಳಿಕೆಯನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.

'ಅವರು ನೇರವಾಗಿ ಯುದ್ಧದಲ್ಲಿ ತೊಡಗಿಲ್ಲದಿದ್ದರೂ' ನಾವಿಕರು ದಾಳಿಯನ್ನು ಎದುರಿಸಿದರು ಎಂದು ಹತಾಮಿ ಒತ್ತಿ ಹೇಳಿದರು.

IRIS Dena attack won't go unanswered: Iran Army chief
ಇರಾನ್‌ನ 'ಮುಕುಟ'ದಂತಿದ್ದ ಖಾರ್ಗ್ ಮೇಲೆ ಬಾಂಬ್ ದಾಳಿ: ದ್ವೀಪ ಸಂಪೂರ್ಣ ಧ್ವಂಸ; ಮಾಹಿತಿ ಹಂಚಿಕೊಂಡ ಟ್ರಂಪ್

"ಡೆನಾ ಹೆಸರು ಮತ್ತು ಅದರ ಸಿಬ್ಬಂದಿಯ ತ್ಯಾಗ ಇರಾನ್‌ನ ನೌಕಾ ಇತಿಹಾಸದಲ್ಲಿ ಧೈರ್ಯ ಮತ್ತು ಸಮರ್ಪಣೆಯ ಸಂಕೇತವಾಗಿ ದಾಖಲಾಗುತ್ತದೆ" ಎಂದು ಹತಾಮಿ ಮೃತ ಸಿಬ್ಬಂದಿಗೆ ಗೌರವ ಸಲ್ಲಿಸುತ್ತಾ ಹೇಳಿದರು.

"ಸೇನೆಯು ಇರಾನ್‌ನ ಸಮುದ್ರ ಗಡಿಗಳನ್ನು ರಕ್ಷಿಸುತ್ತದೆ ಮತ್ತು ಅದರ ನೌಕಾ ಶಕ್ತಿಯನ್ನು ಇನ್ನೂ ಹೆಚ್ಚಿನ ದೃಢನಿಶ್ಚಯದಿಂದ ಬಲಪಡಿಸುತ್ತದೆ" ಎಂದು ಅವರು ತಿಳಿಸಿದರು.

ಅಮೆರಿಕದ ನೌಕಾಪಡೆಯು ಕಳೆದ ಮಂಗಳವಾರ ರಾತ್ರಿ ಶ್ರೀಲಂಕಾ ಸಮೀಪ ಹಿಂದೂಮಹಾಸಾಗರದಲ್ಲಿ ಸಂಚರಿಸುತ್ತಿದ್ದ ಇರಾನಿನ ಐರಿಸ್ ಡೆನಾ ಯುದ್ಧನೌಕೆಯನ್ನು ಟಾರ್ಪಿಡೋ ಬಳಸಿ ಮುಳುಗಿಸಿತು. ಟಾರ್ಪಿಡೋ ವನ್ನು ಬಳಸಿ ನೌಕೆಯೊಂದನ್ನು ಮುಳುಗಿಸಿರುವ ಘಟನೆ ನಡೆದದ್ದು ಇದೇ ಮೊದಲು. ಈ ದುರ್ಘಟನೆಯಲ್ಲಿ ಇರಾನ್ ನ 87 ನಾವಿಕರು ಮೃತಪಟ್ಟಿದ್ದಾರೆ. ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಇದನ್ನು "ಸಮುದ್ರದ ದೌರ್ಜನ್ಯ" ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com