Iran war ending? ಒಂದು ಕಡೆ ಶಾಂತಿ ಮಾತುಕತೆ, ಮತ್ತೊಂದೆಡೆ 'ಬಿಗ್ ಟಾರ್ಗೆಟ್' ಎಂದ ಡೊನಾಲ್ಡ್ ಟ್ರಂಪ್! ಏನಿದು ವಿಚಿತ್ರ ನಡೆ?

ಒಂದು ಕಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಯುದ್ಧ ಶೀಘ್ರದಲ್ಲೇ ಕೊನೆಯಾಗಲಿದೆ ಅಂತಿದ್ದರೆ ಮತ್ತೊಂದೆಡೆ ಇರಾನ್ ನ ನೌಕಾಪಡೆ, ವಾಯುಪಡೆ ಎಲ್ಲವನ್ನೂ ಹಾಳು ಮಾಡಿದ್ದು, ಇಂದು ಮತ್ತಷ್ಟು ಕಡೆಗಳಲ್ಲಿ ಬಿಗ್ ಟಾರ್ಗೆಟ್ ಹಾಕಿಕೊಂಡಿದ್ದೇವೆ ಎಂದು ಹೇಳುತ್ತಾ ಬಂದಿದ್ದಾರೆ
Donald Trump
ಡೊನಾಲ್ಡ್ ಟ್ರಂಪ್!
Updated on

ವಾಷಿಂಗ್ಟನ್: ಇರಾನ್ ಜೊತೆಗೆ ಯುದ್ಧ ಆರಂಭಿಸಿ ಒಂದು ತಿಂಗಳು ಕಳೆದರೂ ಇನ್ನೂ ಸಂಪೂರ್ಣ ಗೆಲುವು ಸಾಧಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಿನಕ್ಕೊಂದು, ಕ್ಷಣಕ್ಕೊಂದು ರೀತಿಯಲ್ಲಿ ವಿಚಿತ್ರವಾದ ಹೇಳಿಕೆ ನೀಡುತ್ತಾ ಬಂದಿದ್ದಾರೆ.

ಒಂದು ಕಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಯುದ್ಧ ಶೀಘ್ರದಲ್ಲೇ ಕೊನೆಯಾಗಲಿದೆ ಅಂತಿದ್ದರೆ ಮತ್ತೊಂದೆಡೆ ಇರಾನ್ ನ ನೌಕಾಪಡೆ, ವಾಯುಪಡೆ ಎಲ್ಲವನ್ನೂ ಹಾಳು ಮಾಡಿದ್ದು, ಇಂದು ಮತ್ತಷ್ಟು ಕಡೆಗಳಲ್ಲಿ ಬಿಗ್ ಟಾರ್ಗೆಟ್ ಹಾಕಿಕೊಂಡಿದ್ದೇವೆ ಎಂದು ಹೇಳುತ್ತಾ ಬಂದಿದ್ದಾರೆ. ಭಾನುವಾರವೂ ಇದೇ ರೀತಿಯ ವಿಚಿತ್ರ ರೀತಿಯ ಹೇಳಿಕೆ ನೀಡಿದ್ದಾರೆ.

ಹೌದು. ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ ಜೊತೆಗಿನ ಶಾಂತಿ ಮಾತುಕತೆ ಬಗ್ಗೆ ಆಶಾವಾದಿಯಾಗಿದ್ದೇನೆ. ಉತ್ತಮ ಮಾತುಕತೆಗಳು ನಡೆಯುತ್ತಿವೆ. ಗೌರವದ ಸಂಕೇತವಾಗಿ 20 ತೈಲ ಟ್ಯಾಂಕರ್‌ಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ ಎಂದಿದ್ದಾರೆ.

ಏರ್ ಪೋರ್ಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗೆ ಶಾಂತಿ ಒಪ್ಪಂದವನ್ನು ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ ಅದು ಆಗಬಹುದು ಎಂದರು.

ಇರಾನ್‌ ಜೊತೆಗೆ ಉತ್ತಮ ಮಾತುಕತೆ ನಡೆಸಿದ್ದೇವೆ. ಬಹಳ ಹಿಂದೆಯೇ ನಮಗೆ ನೀಡಬೇಕಾಗಿದ್ದ ಬಹಳಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಿ, ಆದರೆ ಅವು ತುಂಬಾ ಚೆನ್ನಾಗಿವೆ. ಇರಾನ್ ಜೊತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಮತ್ತೊಂದೆಡೆ ಇಂದು ಕೂಡಾ ಮತ್ತಷ್ಟು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಇರಾನ್ ನೌಕಾಪಡೆ ಹೋಗಿದೆ, ವಾಯುಪಡೆ ಹೋಗಿದೆ. ಇಂದು ಕೂಡಾ ಅನೇಕ ಕಡೆಗಳಲ್ಲಿ ಮತ್ತಷ್ಟು ನಾಶಪಡಿಸುತ್ತೇವೆ ಎಂದು ಹೇಳಿದರು. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ.

Donald Trump
West Asia war: ಶಾಂತಿ ಪ್ರಸ್ತಾವ ನಡುವೆಯೇ ಯುದ್ಧಕ್ಕೆ ಸಜ್ಜು; ಭೂ ದಾಳಿಗೆ ಬಂದರೆ ಬೆಂಕಿ ಮೂಲಕ ಉತ್ತರ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ

ಇರಾನ್ ಆರಂಭದಲ್ಲಿ ಹಾರ್ಮುಜ್ ಜಲಸಂಧಿ ಮೂಲಕ 8 ಹಡಗುಗಳನ್ನು ಕಳುಹಿಸಲು ಒಪ್ಪಿಕೊಂಡಿತು.ತದನಂತರ 10 ಹಡಗುಗಳನ್ನು ಕಳುಹಿಸಿದೆ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಜಲಸಂಧಿ ಮೂಲಕ 20 ತೈಲ ಹಡಗುಗಳು ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಡಗುಗಳ ಸಾಗಲಿವೆ ಎಂದು ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com