ಇರಾನ್: ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ, ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ಬರಬೇಕಿದ್ದ ವಿಮಾನಕ್ಕೆ ಹಾನಿ!

ಇರಾನ್ ಜನರಿಗೆ ಅಗತ್ಯ ವೈದ್ಯಕೀಯ ಸರಬರಾಜು ಮತ್ತು ಮಾನವೀಯ ನೆರವನ್ನು ಸಂಗ್ರಹಿಸಲು ಈ ವಾರ ವಿಮಾನ ನವದೆಹಲಿಗೆ ತೆರಳಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ, ಅಮೆರಿಕದ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.
US officials have not yet corroborated the claim
ಮಹಾನ್ ಏರ್ ವಿಮಾನ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಇರಾನ್‌ನ ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ Mahan air ನ ವಿಮಾನವೊಂದಕ್ಕೆ ಹಾನಿಯಾಗಿದ್ದು, ಮಾನವೀಯ ನೆರವು ಸಂಗ್ರಹಿಸುವ ಭಾರತಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.

ಇರಾನ್ ಜನರಿಗೆ ಅಗತ್ಯ ವೈದ್ಯಕೀಯ ಸರಬರಾಜು ಮತ್ತು ಮಾನವೀಯ ನೆರವನ್ನು ಸಂಗ್ರಹಿಸಲು ಈ ವಾರ ವಿಮಾನ ನವದೆಹಲಿಗೆ ತೆರಳಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ, ಅಮೆರಿಕದ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.

ಮಶಾದ್ ವಿಮಾನ ನಿಲ್ದಾಣದ ಮೇಲೆ ಯುಎಸ್ ದಾಳಿಯ ನಂತರ ವಿಮಾನವು ಹಾನಿಗೊಳಗಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು ಏಪ್ರಿಲ್ 1 ರಂದು ನವದೆಹಲಿಗೆ ಆಗಮಿಸುವ ನಿರೀಕ್ಷೆಯಿತ್ತು.

US officials have not yet corroborated the claim
ಒಪ್ಪಂದಕ್ಕೆ ಒಪ್ಕೋತೀರೋ ಇಲ್ವೋ.. Kharg ದ್ವೀಪ ಸ್ಫೋಟಿಸ್ತೀವಿ..: ಇರಾನ್ ಗೆ Donald Trump ಅಂತಿಮ ಗಡುವು

ಭಾರತ ಮಾರ್ಚ್ 18 ರಂದು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ಮೂಲಕ ಇರಾನ್‌ಗೆ ಮೊದಲ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿತು. ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಭಾರತದ ಜನರಿಗೆ ಸಹಾಯಕ್ಕಾಗಿ ಧನ್ಯವಾದ ಸಲ್ಲಿಸಿತ್ತು.

ಮಹಾನ್ ಏರ್ ಖಾಸಗಿ ಒಡೆತನದ ಇರಾನಿನ ವಿಮಾನಯಾನ ಸಂಸ್ಥೆಯಾಗಿದ್ದು, ಇದು ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಹಲವಾರು ದೇಶಗಳಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com