ಇರಾನ್ ನಾಯಕರ 'ಹತ್ಯೆಗೆ ಪ್ರತೀಕಾರ': ಆಪಲ್, ಗೂಗಲ್ ಸೇರಿ 18 ಅಮೆರಿಕ ಕಂಪನಿಗಳ ಮೇಲೆ ದಾಳಿ; IRGC ಪ್ರತಿಜ್ಞೆ

"ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಕೆಲಸದ ಸ್ಥಳಗಳನ್ನು ತಕ್ಷಣವೇ ತೊರೆಯುವಂತೆ ನಾವು ಸಲಹೆ ನೀಡುತ್ತೇವೆ" ಎಂದು ಐಆರ್ ಜಿಸಿ ಹೇಳಿದೆ.
IRGC vows to attack US firms from April 1 in response to every 'targeted assassination' of Iranian leaders
ಇರಾನ್ ಸೇನೆ
Updated on

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ತನ್ನ ನಾಯಕರ "ಹತ್ಯೆಗೆ ಪ್ರತೀಕಾರ"ವಾಗಿ ಆಪಲ್, ಗೂಗಲ್ ಮತ್ತು ಮೆಟಾದಂತಹ ಪ್ರಮುಖ ಅಮೆರಿಕದ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ ಮಂಗಳವಾರ ಎಚ್ಚರಿಕೆ ನೀಡಿದೆ.

"ಏಪ್ರಿಲ್ 1 ರ ಬುಧವಾರದಿಂದ ಟೆಹ್ರಾನ್ ಸಮಯ ರಾತ್ರಿ 8:00 ರಿಂದ (1630 GMT) ಪ್ರಾರಂಭವಾಗುವ ಈ ದಾಳಿಯು, ಇರಾನ್‌ನಲ್ಲಿ ನಡೆಯುವ ಪ್ರತಿಯೊಂದು ಹತ್ಯೆಗೆ ಪ್ರತೀಕಾರವಾಗಿರುತ್ತದೆ. ಅಮೆರಿಕದ ಕಂಪನಿಗಳು ಘಟಕಗಳು ನಾಶವನ್ನು ನಿರೀಕ್ಷಿಸಬೇಕು" ಎಂದು ಐಆರ್ ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ ಮತ್ತು 18 ಕಂಪನಿಗಳ ಹೆಸರುಗಳನ್ನು ಪಟ್ಟಿ ಮಾಡಿದೆ.

"ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಕೆಲಸದ ಸ್ಥಳಗಳನ್ನು ತಕ್ಷಣವೇ ತೊರೆಯುವಂತೆ ನಾವು ಸಲಹೆ ನೀಡುತ್ತೇವೆ" ಎಂದು ಐಆರ್ ಜಿಸಿ ಹೇಳಿದೆ.

IRGC vows to attack US firms from April 1 in response to every 'targeted assassination' of Iranian leaders
"ಬನ್ನಿ, ನಾವು ಕಾಯುತ್ತಿದ್ದೇವೆ": ಅಮೆರಿಕ ಸೇನೆಗೆ ಇರಾನ್ ಸವಾಲು; Video ಬಿಡುಗಡೆ

ಇರಾನ್‌ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ ಬಜೆಟ್ ಮತ್ತು ಹಣಕಾಸು ವ್ಯವಹಾರಗಳ ಮುಖ್ಯಸ್ಥ ಜಮ್ಶಿದ್ ಎಶಾಘಿ ಅವರ ಹತ್ಯೆಯನ್ನು ಇರಾನ್ ದೃಢಪಡಿಸಿದೆ.

ಜನರಲ್ ಸ್ಟಾಫ್ ಒಂದು ಪ್ರಬಲ ಮಿಲಿಟರಿ. ಸಂಸ್ಥೆಯಾಗಿದ್ದು, ಇದು ನಿಯಮಿತ ಸೈನ್ಯ ಮತ್ತು ಇಸ್ಲಾಮಿಕ್ ಗಣರಾಜ್ಯದ ಸೈದ್ಧಾಂತಿಕ ಪಡೆ, ಕ್ರಾಂತಿಕಾರಿ ಗಾರ್ಡ್‌ಗಳ ನಡುವೆ ಸಮನ್ವಯ ಸಾಧಿಸುತ್ತದೆ.

ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್-ಇನ್-ಚೀಫ್ ಅಹ್ಮದ್ ವಹಿದಿ ಅವರು ಜಮ್ಶಿದ್ ಎಶಾಘಿಗೆ ಸಂತಾಪ ಸೂಚಿಸುವ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಅವರ ಕುಟುಂಬದ ಹಲವಾರು ಸದಸ್ಯರೊಂದಿಗೆ ಅವರು ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರೆ.

IRGC vows to attack US firms from April 1 in response to every 'targeted assassination' of Iranian leaders
'ಹೊಸ ದಾಳಿ ಮಾಡ್ತೇವೆ..': ಇರಾನ್ ಪ್ರತಿದಾಳಿಗೆ ಟ್ರಂಪ್ ಎಚ್ಚರಿಕೆ; ಖಮೇನಿ ಹತ್ಯೆಗೆ ಸಂಭ್ರಮ-ಶೋಕಾಚರಣೆ, ಬೃಹತ್ ಪರೇಡ್..!

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com