ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ರಷ್ಯಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾದ ಗಂಜಾಂ ಜಿಲ್ಲೆಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
Ukrainian drone kills Odisha man in Moscow
ರಷ್ಯಾ ಮೇಲೆ ಉಕ್ರೇನ್ ದಾಳಿ
Updated on

ಮಾಸ್ಕೋ: ರಷ್ಯಾ ಮೇಲೆ ಉಕ್ರೇನ್ ಮತ್ತೆ ಡ್ರೋನ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಒಡಿಶಾ ಮೂಲದ ವ್ಯಕ್ತಿ ಸಾವನ್ನಪ್ಪಿದ್ದು ಇತರೆ ಇಬ್ಬರು ಗಾಯಗೊಂಡಿದ್ದಾರೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ರಷ್ಯಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾದ ಗಂಜಾಂ ಜಿಲ್ಲೆಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು 30 ವರ್ಷದ ಎ ರಾಮೇಯ ಎಂದು ಗುರುತಿಸಲಾಗಿದ್ದು, ಅವರು ಚಿಕಿಟಿ ಬ್ಲಾಕ್‌ನ ಮಾಧಬಂಧ ಗ್ರಾಮದ ನಿವಾಸಿಯಾಗಿದ್ದರು. ಅವರು ರಜೆಯಲ್ಲಿದ್ದಾಗ ಗ್ರಾಮದಲ್ಲಿ ಸ್ವಲ್ಪ ಸಮಯ ಕಳೆದ ನಂತರ ಸುಮಾರು ಎರಡು ತಿಂಗಳ ಹಿಂದಷ್ಟೇ ರಷ್ಯಾಕ್ಕೆ ಹಿಂತಿರುಗಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಗಾಜಾಪ್ರೋಮ್ ತೈಲ ಸಂಸ್ಕರಣಾಗಾರದ ನಿರ್ಮಾಣ ಕಂಪನಿಯಲ್ಲಿ ಸ್ಟ್ರಕ್ಚರ್ ಫಿಟರ್ ಆಗಿ ಕೆಲಸ ಮಾಡುತ್ತಿದ್ದರು.

Ukrainian drone kills Odisha man in Moscow
ರಷ್ಯಾ: ಮಾಸ್ಕೋ ಮೇಲೆ ಉಕ್ರೇನ್ ಅತಿದೊಡ್ಡ ದಾಳಿ; ಭಾರತೀಯ ಪ್ರಜೆ ಸೇರಿದಂತೆ ನಾಲ್ವರು ಸಾವು!

ಇದೀಗ ಉಕ್ರೇನ್ ಡ್ರೋನ್ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದು, ಅವರ ದೇಹವನ್ನು ಮರಳಿ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಂತೆಯೇ ಗಾಯಾಮ್ ಜಿಲ್ಲೆಯ ರಂಗೆಲುಂಡಾ ಬ್ಲಾಕ್‌ನ ಕೊಥಾರ್ಸಿಂಗ್ ಗ್ರಾಮದ ಜಿ ತೇಜೇಶ್ವರ ರೆಡ್ಡಿ (22) ಮತ್ತು ಜಿ ಖೇತ್ರಬಾಸಿ ರೆಡ್ಡಿ (35) ಗಾಯಗೊಂಡಿದ್ದಾರೆ.

ಮಾಸ್ಕೋದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದಾಗ ಭಾನುವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com