ಮಾನವ ಕಳ್ಳಸಾಗಣೆ: ಅಮೆರಿಕದ ಹೋಟೆಲ್‌ನಲ್ಲಿ ಭಾರತೀಯ ಸಿಬ್ಬಂದಿಯಿಂದ ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ, ಜೈಲು ಶಿಕ್ಷೆ!

ಅಮೆರಿಕಾನ್‌ಇನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಟೇಲ್, ಹೋಟೆಲ್ ಹಣವನ್ನು ಬಳಸಿ ಹೋಟೆಲ್‌ನಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಒಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾನೆ.
Kavankumar Patel worked at the AmericInn Hotel
ಅಮೆರಿಕನ್ಇನ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕವನಕುಮಾರ್ ಪಟೇಲ್ online desk
Updated on

ನವದೆಹಲಿ: ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸಲು ಮಾನವ ಕಳ್ಳಸಾಗಣೆದಾರರಿಗೆ ಹಣ ನೀಡಿದ ಆರೋಪದ ಮೇಲೆ ಅಮೆರಿಕದಲ್ಲಿ 27 ವರ್ಷದ ಭಾರತೀಯ ವ್ಯಕ್ತಿಯೊಬ್ಬನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಗುಜರಾತ್ ನಿವಾಸಿ ಕವನ್‌ಕುಮಾರ್ ಪಟೇಲ್ ನೆಬ್ರಸ್ಕಾದ ಒಮಾಹಾದಲ್ಲಿರುವ ಹೋಟೆಲ್‌ನಲ್ಲಿ ಉದ್ಯೋಗಿಯಾಗಿದ್ದು, ಕಳೆದ ವರ್ಷ ಜನವರಿಯಲ್ಲಿ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಜನವರಿ 6, 2025 ರಂದು ಪೊಲೀಸರು ಮಾನವ ಕಳ್ಳತನದ ವರದಿಯನ್ನು ಸ್ವೀಕರಿಸಿದಾಗ ಮತ್ತು ಲೈಂಗಿಕ ಕಳ್ಳಸಾಗಣೆ ನಡೆದಿರುವ ಬಗ್ಗೆ ಪುರಾವೆಗಳು ಕಂಡುಬಂದಾಗ ತನಿಖೆ ಪ್ರಾರಂಭವಾಯಿತು. ನಂತರ ವಾಣಿಜ್ಯ ಲೈಂಗಿಕತೆಗಾಗಿ ಮಾರಾಟ ಮಾಡಲು ಅಮೆರಿಕ್‌ಇನ್ ಹೋಟೆಲ್‌ಗೆ ಕರೆತರಲಾಗಿದ್ದ 15 ಮತ್ತು 16 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಟಾಸ್ಕ್ ಫೋರ್ಸ್ ಮತ್ತು ಒಮಾಹಾ ಪೊಲೀಸ್ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.

"ಅಪ್ರಾಪ್ತ ಯುವತಿಯರು, ತಮ್ಮನ್ನು ಕರೆತಂದವರು ಕಡಿಮೆ ದರಕ್ಕೆ ಕೊಠಡಿ ಪಡೆಯುವುದಕ್ಕಾಗಿ ಹೋಟೆಲ್ ಸಿಬ್ಬಂದಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಇಲ್ಲದೇ ಇದ್ದಲ್ಲಿ, ಅವರನ್ನು ಹೋಟೆಲ್‌ನಿಂದ ಹೊರಹಾಕಲಾಗುವುದು ಎಂದು ಬೆದರಿಸಿದ್ದು ತನಿಖೆ ವೇಳೆ ಬಯಲಾಗಿದೆ. ಇಬ್ಬರು ಹೋಟೆಲ್ ಉದ್ಯೋಗಿಗಳು ಅಪ್ರಾಪ್ತ ವಯಸ್ಕರಲ್ಲಿ ಒಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಕಳ್ಳಸಾಗಣೆದಾರರಿಗೆ ಹಣ ನೀಡಿದರು ಮತ್ತು ಮೂರನೇ ಹೋಟೆಲ್ ಉದ್ಯೋಗಿ ಇನ್ನೊಬ್ಬ ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರು" ಎಂದು ನೆಬ್ರಸ್ಕಾದ ಯುಎಸ್ ಅಟಾರ್ನಿ ಕಚೇರಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕಾನ್‌ಇನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಟೇಲ್, ಹೋಟೆಲ್ ಹಣವನ್ನು ಬಳಸಿ ಹೋಟೆಲ್‌ನಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಒಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ನಂತರ ಹೋಟೆಲ್ ಉದ್ಯೋಗಿಗಳು ಕಳ್ಳಸಾಗಣೆದಾರರು ಮತ್ತು ಅಪ್ರಾಪ್ತ ಯುವತಿಯರಿಗೆ ಹೋಟೆಲ್‌ನಲ್ಲಿ ಹಲವು ದಿನಗಳ ಕಾಲ ಉಳಿಯಲು ಅವಕಾಶ ನೀಡಿದರು. ಕಳ್ಳಸಾಗಣೆದಾರರು ವಾಣಿಜ್ಯ ಲೈಂಗಿಕತೆಗಾಗಿ ಆನ್‌ಲೈನ್ ಜಾಹೀರಾತುಗಳನ್ನು ಪೋಸ್ಟ್ ಮಾಡುತ್ತಾರೆ. ಈ ರೀತಿ ಕರೆತರಲಾದ ಅಪ್ರಾಪ್ತರಿಗೆ ಆಹಾರವನ್ನೂ ಕೊಡದೆ ಬೆದರಿಕೆ ಹಾಕಲಾಗಿತ್ತು ಎಂದು ತಿಳಿದುಬಂದಿದೆ.

Kavankumar Patel worked at the AmericInn Hotel
ಗುಜರಾತ್‌ನಲ್ಲಿ ಮಾನವ ಕಳ್ಳಸಾಗಣೆ, ಅತ್ಯಾಚಾರ; ಸಂತ್ರಸ್ತ ಮಹಿಳೆಯ ಪತಿ ಸೇರಿ 7 ಜನರ ಬಂಧನ

ಈ ಪ್ರಕರಣದ ಪ್ರಮುಖ ಆರೋಪಿ, ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಪಟೇಲ್, ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಗಡೀಪಾರಾಗಲಿದ್ದಾನೆ.

ಕಳ್ಳಸಾಗಣೆದಾರರಾದ ಎಡ್ವರ್ಡೊ ಜೋಸ್ ಪೆರ್ಡೊಮೊ, ಮೈಕೆಲ್ ಮಾರ್ಟಿನೆಜ್-ಗೊನ್ಜಾಲೆಜ್ ಮತ್ತು ಆಲ್ಫ್ರೆಡೊ ಜಾಂಬ್ರಾನೊ-ಹುರ್ಟಾಡೊ ಮತ್ತು ಭಾರತೀಯ ಮೂಲದ ಹೋಟೆಲ್ ಉದ್ಯೋಗಿಗಳಾದ ಸುಮಿತ್ ಚೌಧರಿ ಮತ್ತು ವಿಶಾಲ್ ಗೋಸ್ವಾಮಿ ಅವರ ಮೇಲೂ ಆರೋಪ ಹೊರಿಸಲಾಗಿದೆ.

"ಹೋಮ್‌ಲ್ಯಾಂಡ್ ಸೆಕ್ಯುರಿಟಿ ಟಾಸ್ಕ್ ಫೋರ್ಸ್ ಮೂರು ಮಕ್ಕಳನ್ನು ರಕ್ಷಿಸಿದೆ" ಎಂದು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಲೆಸ್ಲಿ ವುಡ್ಸ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com