ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿ ಎರಡು ಹೆಲಿಕಾಪ್ಟರ್ ಡಿಕ್ಕಿ: ಭಾರತೀಯ ಪ್ರಜೆ ಸಾವು, ಹಲವರಿಗೆ ಗಾಯ!

ನೇಪಾಳದ ಸೋಲುಖುಂಬು ಜಿಲ್ಲೆಯ ಫೆರಿಚೆ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಾಗ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Nepal Helicopter Crash: Mid-Air Collision Near Everest Kills Indian National
ಎವರೆಸ್ಟ್ ಬೇಸ್ ಕ್ಯಾಂಪ್ ಬಳಿ ಎರಡು ಹೆಲಿಕಾಪ್ಟರ್ ಡಿಕ್ಕಿOnline Desk
Updated on: 

ಸೋಲುಖುಂಬು (ನೇಪಾಳ): ನೇಪಾಳದ ಎವರೆಸ್ಟ್ ಪ್ರದೇಶದಲ್ಲಿ ಎರಡು ಸಣ್ಣ ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಭೀಕರ ಅಪಘಾತ ಸಂಭವಿಸಿದೆ. ನೇಪಾಳದ ಸೋಲುಖುಂಬು ಜಿಲ್ಲೆಯ ಹಿಮಾವೃತ ಪ್ರದೇಶವಾದ ಖುಂಬು ಪಸಾಂಗ್ ಲಹ್ಮು ಗ್ರಾಮದ ಫೆರಿಚೆ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಾಗ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಪಘಾತ ನಡೆದಿದ್ದು ಹೇಗೆ?

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮಾರ್ಗದಲ್ಲಿರುವ ಫೆರಿಚೆ ಹೆಲಿಪ್ಯಾಡ್‌ನಲ್ಲಿ 'ಫಿಶ್‌ಟೇಲ್ ಏರ್' ಮತ್ತು 'ಏರ್ ಡೈನಾಸ್ಟಿ' ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಏಕಕಾಲದಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿದ್ದಾಗ, ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 8:11ಕ್ಕೆ ಅವುಗಳ ರೆಕ್ಕೆಗಳು ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಅದರಂತೆ, ಅಪಘಾತದಲ್ಲಿ ಮೃತಪಟ್ಟ ಭಾರತೀಯ ಪ್ರಜೆಯನ್ನು ತಮಿಳುನಾಡಿನ ಚೆನ್ನೈ ಮೂಲದ 47 ವರ್ಷದ ವಸಂತ್ ಕುಮಾರ್ ಬಲರಾಮರಾಮಡು ಎಂದು ಗುರುತಿಸಲಾಗಿದೆ. ಇವರು ಫಿಶ್‌ಟೇಲ್ ಏರ್ ಸಂಸ್ಥೆಯ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅವರ ಮೃತದೇಹವನ್ನು ಲುಕ್ಲಾದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಇದರೊಂದಿಗೆ, ಅದೇ ಹೆಲಿಕಾಪ್ಟರ್‌ನಲ್ಲಿದ್ದ ಭಾರತೀಯ ಮೂಲದ ನ್ಯೂಜಿಲೆಂಡ್ ಪ್ರಜೆ 49 ವರ್ಷದ ಶೈಲೇಶ್ ಕೃಷ್ಣ ಪಟೇಲ್ ಹಾಗೂಇಬ್ಬರು ನೇಪಾಳಿ ಪೈಲಟ್‌ಗಳಾದ ರವೀಂದ್ರ ಪ್ರಜಾಪತಿ (ಫಿಶ್‌ಟೇಲ್ ಏರ್) ಮತ್ತು ಪ್ರಜ್ವಲ್ ಕೆ.ಸಿ. (ಡೈನಾಸ್ಟಿ ಏರ್) ಕೂಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಏತನ್ಮಧ್ಯೆ, ಅಪಘಾತದ ಸಮಯದಲ್ಲಿ ಹೆಲಿಕಾಪ್ಟರ್‌ಗಳಲ್ಲಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆ ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

Nepal Helicopter Crash: Mid-Air Collision Near Everest Kills Indian National
ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ; ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ಅದರಲ್ಲೂ, ಹಿಮಾಲಯ ಪ್ರದೇಶಗಳಲ್ಲಿ ಪ್ರವಾಸಿಗರು, ಪರ್ವತಾರೋಹಿಗಳು ಮತ್ತು ತುರ್ತು ರಕ್ಷಣಾ ಕಾರ್ಯಗಳಿಗಾಗಿ ಹೆಲಿಕಾಪ್ಟರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ; ಆದರೆ ಕಠಿಣ ಭೂಪ್ರದೇಶ ಮತ್ತು ತ್ವರಿತವಾಗಿ ಬದಲಾಗುವ ಹವಾಮಾನವು ಇಲ್ಲಿ ವಿಮಾನ ಹಾರಾಟಕ್ಕೆ ಸವಾಲಾಗಿ ಪರಿಣಮಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X