ಹಿಂದೂ ಸಮುದಾಯ ಪಾಕಿಸ್ತಾನದ 'ಅವಿಭಾಜ್ಯ ಅಂಗ' ಎಂದ ಪ್ರಧಾನಿ ಶೆಹಬಾಜ್ ಷರೀಪ್! ದೀಪಾವಳಿ ಹಬ್ಬದ ಶುಭ ಹಾರೈಕೆ

ಷರೀಫ್ ತಮ್ಮ ಸಂದೇಶದಲ್ಲಿ, ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯವನ್ನು ದೇಶದ ಸಾಮಾಜಿಕ ರಚನೆಯ ಮೌಲ್ಯಯುತ ಮತ್ತು ಅವಿಭಾಜ್ಯ ಅಂಗವೆಂದು ಕರೆದಿದ್ದಾರೆ. ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಗಳನ್ನು ಗುರುತಿಸಿದ್ದಾರೆ.
Pakistan PM Shehbaz Sharif
ಪ್ರಧಾನಿ ಶೆಹಬಾಜ್ ಷರೀಪ್
Updated on: 

ಲಾಹೋರ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾನುವಾರ ಪಾಕಿಸ್ತಾನ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿದ್ದು, ಧಾರ್ಮಿಕ ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಷರೀಫ್ ತಮ್ಮ ಸಂದೇಶದಲ್ಲಿ, ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯವನ್ನು ದೇಶದ ಸಾಮಾಜಿಕ ರಚನೆಯ ಮೌಲ್ಯಯುತ ಮತ್ತು ಅವಿಭಾಜ್ಯ ಅಂಗವೆಂದು ಕರೆದಿದ್ದಾರೆ. ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಗಳನ್ನು ಗುರುತಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಕಚೇರಿ (PMO) X ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, "ದೀಪಾವಳಿಯ ಸಂತೋಷದಾಯಕ ಮತ್ತು ಶುಭ ಸಂದರ್ಭದಲ್ಲಿ ಪ್ರಪಂಚದಾದ್ಯಂತದ ಹಿಂದೂ ಸಮುದಾಯಕ್ಕೆ, ವಿಶೇಷವಾಗಿ ಪಾಕಿಸ್ತಾನದಲ್ಲಿ ವಾಸಿಸುವವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಆತ್ಮೀಯ ಶುಭಾಶಯ ಎಂದಿದ್ದಾರೆ.

ದೀಪಾವಳಿಯನ್ನು ದ್ವೇಷ ಮತ್ತು ಹತಾಶೆಯ ಮೇಲೆ ಬೆಳಕಿನ ವಿಜಯದ ಸಾಂಕೇತಿಕ ಹಬ್ಬ ಎಂದು ಹೇಳಿದ್ದು, ಅದರ ಸಂದೇಶವು ಧಾರ್ಮಿಕ ಆಚರಣೆಗಳನ್ನು ಮೀರಿ ಜನರು ಶಾಂತಿ ಮತ್ತು ಸಾಮರಸ್ಯದಿಂದ ಒಟ್ಟಿಗೆ ಬದುಕಲು ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದ್ದಾರೆ.

ಭವಿಷ್ಯದ ಬಗ್ಗೆ ಭರವಸೆ, ಸಮೃದ್ಧಿ ಮತ್ತು ಆಶಾವಾದದೊಂದಿಗೆ ಹಬ್ಬದ ಸಂಬಂಧವನ್ನು ಅವರು ಒತ್ತಿ ಹೇಳಿದ್ದಾರೆ. ಈ ಮೌಲ್ಯಗಳನ್ನು ಅದರ ಅತ್ಯಂತ ಪಾಲಿಸಬೇಕಾದ ಅಂಶಗಳಲ್ಲಿ ಒಂದೆಂದು ವಿವರಿಸಿದ್ದಾರೆ. ಪಾಕಿಸ್ತಾನವು ತನ್ನ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತದೆ. ವಿಭಿನ್ನ ನಂಬಿಕೆಗಳು ಮತ್ತು ಸಂಪ್ರದಾಯಗಳು ದೇಶದ ಸಾಮಾಜಿಕ ಪರಂಪರೆಯ ಪ್ರಮುಖ ಭಾಗವಾಗಿದೆ ಎಂದಿದ್ದಾರೆ.

Pakistan PM Shehbaz Sharif
ಪಾಕಿಸ್ತಾನ, ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸರಳೀಕರಿಸಿದ ಕೇಂದ್ರ

ಪಾಕಿಸ್ತಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಹಿಂದೂ ಸಮುದಾಯವನ್ನು ಅವರು ಶ್ಲಾಘಿಸಿದ್ದಾರೆ. ಸರ್ಕಾರವು ಅವರ ಧರ್ಮ, ನಂಬಿಕೆ, ಬಣ್ಣ ಅಥವಾ ಜನಾಂಗವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಬದ್ಧವಾಗಿದೆ. "ಶಾಂತಿಯುತ, ಸಮಗ್ರ ಮತ್ತು ಸಮೃದ್ಧ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ. ವಿಭಿನ್ನ ಧರ್ಮದ ಜನರು ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳವರು ಘನತೆ ಮತ್ತು ಪರಸ್ಪರ ಗೌರವದಿಂದ ಬದುಕಬಹುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X