ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

55 ವರ್ಷದ ನಿಖಿಲ್ ಗುಪ್ತಾ, ಅಮೆರಿಕದ ಪ್ರಜೆ, ವಕೀಲ ಹಾಗೂ ಪಂಜಾಬ್ ಸ್ವಾತಂತ್ರ್ಯ ಪ್ರತಿಪಾದಕರಾಗಿರುವ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸುಪಾರಿ ನೀಡಲು ಸಂಚು ರೂಪಿಸಿದ ಆರೋಪದಡಿ ಫೆಬ್ರವರಿಯಲ್ಲಿ ಮೂರು ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದರು.
SFJ chief Gurpatwant Singh Pannun
ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್(ಸಂಗ್ರಹ ಚಿತ್ರ)
Updated on: 

ನ್ಯೂಯಾರ್ಕ್: ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ನಿಖಿಲ್ ಗುಪ್ತಾಗೆ ಅಮೆರಿಕದ ಫೆಡರಲ್ ನ್ಯಾಯಾಲಯ ನಿನ್ನೆ ಶುಕ್ರವಾರ 235 ತಿಂಗಳು (19 ವರ್ಷಕ್ಕೂ ಹೆಚ್ಚು) ಜೈಲು ಶಿಕ್ಷೆ ವಿಧಿಸಿದೆ.

55 ವರ್ಷದ ನಿಖಿಲ್ ಗುಪ್ತಾ, ಅಮೆರಿಕದ ಪ್ರಜೆ, ವಕೀಲ ಹಾಗೂ ಪಂಜಾಬ್ ಸ್ವಾತಂತ್ರ್ಯ ಪ್ರತಿಪಾದಕರಾಗಿರುವ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸುಪಾರಿ ನೀಡಲು ಸಂಚು ರೂಪಿಸಿದ ಆರೋಪದಡಿ ಫೆಬ್ರವರಿಯಲ್ಲಿ ಮೂರು ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದರು.

ಪನ್ನುನ್ ಅವರಲ್ಲಿ ಕ್ಷಮೆ ಕೇಳುತ್ತೇನೆ. ನಾನು ನೋವುಂಟು ಮಾಡಿದ ಸಮುದಾಯಗಳ ಕ್ಷಮೆ ಕೇಳುತ್ತೇನೆ. ನನ್ನನ್ನು ಯಾವಾಗಲೂ ಪ್ರೀತಿಸುತ್ತಿದ್ದ, ನಾನು ಅರ್ಹನಾಗಿರದಿದ್ದರೂ ನನ್ನನ್ನು ಪ್ರೀತಿಸಿದ ನನ್ನ ಕುಟುಂಬದವರಲ್ಲೂ ಕ್ಷಮೆ ಕೇಳುತ್ತೇನೆ ಎಂದು ನಿನ್ನೆ ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ನಿಖಿಲ್ ಗುಪ್ತಾ ಹೇಳಿಕೆ ನೀಡಿದನು.

SFJ chief Gurpatwant Singh Pannun
ಖಲಿಸ್ತಾನಿ ಪ್ರತ್ಯೇಕತಾವಾದಿ ಹತ್ಯೆ ಯತ್ನ ಪ್ರಕರಣ: ಭಾರತದಿಂದ 'ಅರ್ಥಪೂರ್ಣ ಹೊಣೆಗಾರಿಕೆ' ಬಯಸುತ್ತೇವೆ- ಅಮೇರಿಕಾ

235 ತಿಂಗಳ ಶಿಕ್ಷೆ ಪೂರ್ಣಗೊಂಡ ಬಳಿಕ ನಿಖಿಲ್ ಗುಪ್ತಾರನ್ನು ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ನ್ಯಾಯಾಧೀಶ ವಿಕ್ಟರ್ ಮರೇರೊ ಹೇಳಿದರು. ಮೂರು ವರ್ಷಗಳ ಹಿಂದೆ ಬಂಧನಕ್ಕೊಳಗಾದ ಬಳಿಕ ಅವರನ್ನು ನೋಡದ ಕುಟುಂಬದವರು ಭಾರತದಿಂದ ಇಂಟರ್ನೆಟ್ ಸಂಪರ್ಕದ ಮೂಲಕ ಶಿಕ್ಷೆಯ ವಿಚಾರಣೆಯನ್ನು ಆಲಿಸಿದರು.

ನ್ಯಾಯಾಲಯದಲ್ಲಿ ಸುದೀರ್ಘ ಭಾಷಣ ಮಾಡಿದ ಪನ್ನುನ್, ನಿಖಿಲ್ ಗುಪ್ತಾರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಕಾರ್ಯನಿರ್ವಹಿಸಿದ ಕೇವಲ ಒಬ್ಬ ಕೆಳಮಟ್ಟದ ವ್ಯಕ್ತಿ ಎಂದು ಬಣ್ಣಿಸಿದರು. ಸ್ವಾತಂತ್ರ್ಯ ಚಳವಳಿಯನ್ನು ವಿರೋಧಿಸುವ ಹಿಂದೂ ರಾಷ್ಟ್ರೀಯವಾದಿ ಎಂದು ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿದರು.ಮೋದಿ ಆಡಳಿತ ತನ್ನನ್ನು ಕೊಲ್ಲಲು ಬಯಸಿದೆ ಎಂದು ಪನ್ನುನ್ ಆರೋಪಿಸಿದರು.

SFJ chief Gurpatwant Singh Pannun
ಪನ್ನುನ್ ಹತ್ಯೆಗೆ ಸಂಚು: ಅಮೆರಿಕ ನ್ಯಾಯಾಲಯದ ಮುಂದೆ ನಿಖಿಲ್​ ಗುಪ್ತಾ ಹಾಜರು, ನಾನು ತಪ್ಪು ಮಾಡಿಲ್ಲ ಎಂದು ಹೇಳಿಕೆ!

ನಿನ್ನೆ ನ್ಯಾಯಾಲಯ ಹೊರಗೆ ಖಲಿಸ್ತಾನ ಪರ ಹಳದಿ ಮತ್ತು ನೀಲಿ ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು ಜಮಾಯಿಸಿದ್ದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಚಿತ್ರಗಳನ್ನು ಕೈಕೋಳ ಹಾಕಿ, ಕಿತ್ತಳೆ ಬಣ್ಣದ ಜೈಲು ಸಮವಸ್ತ್ರ ಧರಿಸಿದಂತೆ ಚಿತ್ರಿಸಲಾಗಿದ್ದ ತಾತ್ಕಾಲಿಕ ಜೈಲು ಕೋಣೆಯ ಸುತ್ತ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.

2023ರಲ್ಲಿ ಭಾರತದಲ್ಲಿದ್ದ ಗುಪ್ತಾ, ಪನ್ನುನ್ ಹತ್ಯೆ ನಡೆಸಬಹುದೆಂದು ತಾನು ಭಾವಿಸಿದ್ದ ವ್ಯಕ್ತಿಗೆ ಆನ್‌ಲೈನ್ ಮೂಲಕ 15,000 ಡಾಲರ್ ಪಾವತಿಸಿದ್ದರು. ಆದರೆ, ಆ ವ್ಯಕ್ತಿ ಸುಪಾರಿ ಹಂತಕನಂತೆ ನಟಿಸುತ್ತಿದ್ದ ರಹಸ್ಯ ತನಿಖಾಧಿಕಾರಿ ಎನ್ನಲಾಗಿದೆ.

ನಿಖಿಲ್ ಗುಪ್ತಾ ಅವರನ್ನು ಪ್ರಾಗ್‌ನಲ್ಲಿ ಬಂಧಿಸಲಾಗಿದ್ದು, 2023ರ ಜೂನ್‌ನಲ್ಲಿ ಅಮೆರಿಕಕ್ಕೆ ಹಸ್ತಾಂತರಿಸಿದ ಬಳಿಕ ಜಾಮೀನು ನಿರಾಕರಿಸಿ ಬಂಧನದಲ್ಲಿರಿಸಲಾಗಿದೆ. ತಪ್ಪೊಪ್ಪಿಗೆ ಒಪ್ಪಂದದ ಪ್ರಕಾರ, ಅವರು ಕನಿಷ್ಠ ಎರಡು ದಶಕಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X