
ನವದೆಹಲಿ: ಅಮೆರಿಕಾದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಯತ್ನದ ಬಗ್ಗೆ ಭಾರತದ ತನಿಖೆಯ "ಅರ್ಥಪೂರ್ಣ ಹೊಣೆಗಾರಿಕೆ" ಇರುವವರೆಗೆ ತಾನು ಸಂಪೂರ್ಣವಾಗಿ ತೃಪ್ತನಾಗುವುದಿಲ್ಲ ಎಂದು ಅಮೇರಿಕಾ ಹೇಳಿದೆ.
"ನಾವು ಆ ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತೇವೆ ಮತ್ತು ನೋಡಲು ಬಯಸುತ್ತೇವೆ ಮತ್ತು ಆ ತನಿಖೆಯಿಂದ ಉಂಟಾಗುವ ಅರ್ಥಪೂರ್ಣ ಹೊಣೆಗಾರಿಕೆ ಇರುವವರೆಗೆ ಯುನೈಟೆಡ್ ಸ್ಟೇಟ್ಸ್ ಸಂಪೂರ್ಣವಾಗಿ ತೃಪ್ತರಾಗುವುದಿಲ್ಲ" ಎಂದು ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
ಮಾತುಕತೆಗಾಗಿ ಅಮೆರಿಕಾಕ್ಕೆ ಭಾರತೀಯ ತನಿಖಾ ಸಮಿತಿಯ ಕಳೆದ ವಾರ ಭೇಟಿಗೆ ಪ್ರತಿಕ್ರಿಯೆಯಾಗಿ ವೇದಾಂತ್ ಪಟೇಲ್ ಈ ಹೇಳಿಕೆ ನೀಡಿದ್ದಾರೆ.
ಅಮೇರಿಕಾ ನೆಲದಲ್ಲಿ ಪನ್ನುನ್‌ನ್ನು ಕೊಲ್ಲುವ ಅಂತಹ ಯಾವುದೇ ಸಂಚಿನೊಂದಿಗೆ ತನ್ನ ಸಹಭಾಗಿತ್ವ ಅಥವಾ ಒಳಗೊಳ್ಳುವಿಕೆಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಅಮೆರಿಕದ ಆರೋಪದ ನಂತರ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಭಾರತ ತನಿಖಾ ಸಮಿತಿಯನ್ನು ರಚಿಸಿತ್ತು.
ಕಳೆದ ಬೇಸಿಗೆಯಲ್ಲಿ ಪ್ರೇಗ್‌ನಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆ ಎನ್ನಲಾಗುತ್ತಿರುವ ನಿಖಿಲ್ ಗುಪ್ತಾನನ್ನು ಯುಎಸ್‌ಗೆ ಹಸ್ತಾಂತರಿಸಲಾಗಿದೆ. ಅಮೇರಿಕಾ ಇತ್ತೀಚೆಗೆ ಮತ್ತೊಬ್ಬ ಭಾರತೀಯ ವಿಕಾಸ್ ಯಾದವ್ ಅವರನ್ನು ಕೊಲೆ-ಬಾಡಿಗೆ ಸಂಚಿನ ಮಾಸ್ಟರ್ ಮೈಂಡ್ ಎಂದು ಹೆಸರಿಸಿದ್ದು, ಆತನ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ.
ಸಿಸಿ1 ಎಂದು ಹೆಸರಿಸಲಾದ ಅಧಿಕಾರಿ, ನಂತರ ಯಾದವ್ ಎಂದು ಗುರುತಿಸಲ್ಪಟ್ಟರು, ಆತ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದು ಭಾರತ ಇತ್ತೀಚೆಗೆ ಹೇಳಿತ್ತು.
Advertisement