ಫ್ಲೈದುಬೈ ಪೈಲಟ್ ನಿಜವಾದ "ಹೀರೋ": ಭಾರತೀಯ ಕ್ಯಾಪ್ಟನ್ ಸಾಹಸ ಕೊಂಡಾಡಿದ ಡೊನಾಲ್ಡ್ ಟ್ರಂಪ್..!

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಲ್ಲಿನ ಘಟನೆ ಕುರಿತು ನೆತನ್ಯಾಹು ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ನಾನು ಬಿಬಿ ನೆತನ್ಯಾಹು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ.
Donald Trump
ಡೊನಾಲ್ಡ್ ಟ್ರಂಪ್
Updated on: 

ವಾಷಿಂಗ್ಟನ್: ದುಬೈನಿಂದ ಟೆಲ್ ಅವಿವ್ ನಗರಕ್ಕೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಒಳಗಡೆ ನಡೆದ ಭೀಕರ ಸಂಘರ್ಷ ಮತ್ತು ವಿಮಾನ ಪತನದ ಸಂಚನ್ನು ವಿಫಲಗೊಳಿಸಿದ ಪೈಲಟ್ ಹಾಗೂ ಇಸ್ರೇಲಿ ಪ್ರಯಾಣಿಕನನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವೈಟ್‌ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ನಂಬಲಾಗದ ಕಥೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಲ್ಲಿನ ಘಟನೆ ಕುರಿತು ನೆತನ್ಯಾಹು ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ನಾನು ಬಿಬಿ ನೆತನ್ಯಾಹು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ಸಹ ಪೈಲಟ್ ಬಹುಶಃ ಭಯೋತ್ಪಾದಕನಾಗಿರಬಹುದು ಅಥವಾ ವಿವೇಚನೆಯಿಲ್ಲದೆ ವ್ಯಕ್ತಿಯಾಗಿರಬಹುದು ಎಂದು ಹೇಳಿದ್ದಾರೆ.

ಬಳಿಕ ನೆತನ್ಯಾಹು ಅವರಿಂದ ತಮಗೆ ತಿಳಿದಿದ್ದ ಘಟನೆಯ ವಿವರಗಳನ್ನು ಹಂಚಿಕೊಂಡಿದ ಅವರು, ವಿಮಾನದಲ್ಲಿದ್ದ ಇಸ್ರೇಲಿ ಮೂಲದ ಪ್ಲಂಬರ್‌ವೊಬ್ಬರಿಗೆ ವಿಮಾನ ಹಾರಿಸುವ ಯಾವುದೇ ಅನುಭವವಿರಲಿಲ್ಲ. ಆದರೆ, ಕಾಕ್‌ಪಿಟ್‌ನಿಂದ ಗದ್ದಲ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಮಧ್ಯಪ್ರವೇಶಿಸಿದ್ದಾರೆ.

ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿಸಿಕೊಂಡು ಪರಿಸ್ಥಿತಿ ಸರಿಯಿಲ್ಲ ಎಂಬುದನ್ನು ಅರಿತ ಪ್ಲಂಬರ್ ವಿಮಾನದ ಕಾಕ್‌ಪಿಟ್‌ಗೆ ತೆರಳಿದ್ದಾರೆ. “ವಿಮಾನವನ್ನು ಎಂದಿಗೂ ಹಾರಿಸದಿದ್ದರೂ, ಅವರು ನಿಯಂತ್ರಣದ ಕಂಬಿಯನ್ನು ಹಿಡಿದು ಮೇಲಕ್ಕೆ ಎತ್ತಿ ವಿಮಾನವನ್ನು ಸಮತಟ್ಟಾಗಿ ತಂದಿದ್ದಾರೆ. ಹೀಗೆ ವಿಮಾನ ಪತನಗೊಳ್ಳುವುದನ್ನು ತಡೆದಿದ್ದಾರೆ.

Donald Trump
Flydubai ವಿಮಾನ ಪತನಕ್ಕೆ ಸಹ ಪೈಲಟ್ ಯತ್ನ: ಇರಿತಕ್ಕೊಳಗಾಗಿದ್ದರೂ ಧೃತಿಗೆಡದೆ ಹೋರಾಟ, ಭಾರತೀಯ ಪೈಲಟ್‌ಗೆ ಸಲಾಂ ಎಂದ ನೆತನ್ಯಾಹು..!

ನಾನು ಕೇಳಿದ ಕಥೆ ಇದು. ಇದು ನಿಜವೋ ಅಲ್ಲವೋ ನನಗೆ ಗೊತ್ತಿಲ್ಲ. ಬಿಬಿಯಿಂದ ನನಗೆ ಸಿಕ್ಕ ಮಾಹಿತಿ ಇದೇ ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಪ್ಲಂಬರ್‌ಗೆ ವಿಮಾನವನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಹೇಗೆ ತಿಳಿಯಿತು ಎಂಬುದಕ್ಕೆ ನೆತನ್ಯಾಹು ನೀಡಿದ ವಿವರಣೆಯನ್ನೂ ಟ್ರಂಪ್ ಹಂಚಿಕೊಂಡಿದ್ದಾರೆ.

ಟಿವಿಯಲ್ಲಿ 'ಏರ್ ಡಿಸಾಸ್ಟರ್ಸ್' (Air Disasters) ಕಾರ್ಯಕ್ರಮವನ್ನು ನಿಯಮಿತವಾಗಿ ನೋಡುತ್ತಿದ್ದ ಕಾರಣ ತಮಗೆ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಗಂಭೀರವಾಗಿ ಇರಿತಕ್ಕೊಳಗಾಗಿಯೂ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್‌ನನ್ನು ನಿಜವಾದ "ಹೀರೋ" ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com