LIVE ರಿಪೋರ್ಟಿಂಗ್ ವೇಳೆ ಭೀಕರ ಅಪಘಾತ: ಕಾರು ಗುದ್ದಿದ ರಭಸಕ್ಕೆ ವರದಿಗಾರ್ತಿ, ಕ್ಯಾಮೆರಾಮನ್ ಅಪ್ಪಚ್ಚಿ, Video

ಮೆಕ್ಸಿಕೋದ ಮಾಂಟೆರ್ರೆಯಲ್ಲಿ ರಸ್ತೆ ಪರಿಸ್ಥಿತಿ ಕುರಿತು LIVE ವರದಿ ಮಾಡುತ್ತಿದ್ದ ಪತ್ರಕರ್ತೆ ಹಾಗೂ ಕ್ಯಾಮೆರಾಮನ್‌ಗೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ LIVE ಪ್ರಸಾರದ ವೇಳೆಯೇ..
Car Wipes out Mexican TV News Reporter and camera man During Live Coverage
ವರದಿಗಾರ್ತಿಗೆ ಕಾರು ಡಿಕ್ಕಿ
Updated on: 

ಮೆಕ್ಸಿಕೋ: ಮಳೆ ಮತ್ತು ಭೂಕುಸಿತದ ಕುರಿತು ರಸ್ತೆಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಭೀಕರ ಅಪಘಾತ ಸಂಭವಿಸಿ, ವರದಿಗಾರ್ತಿ ಮತ್ತು ಕ್ಯಾಮೆರಾಮನ್ ಗಾಯಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಮೆಕ್ಸಿಕೋದ ಮಾಂಟೆರ್ರೆಯಲ್ಲಿ ರಸ್ತೆ ಪರಿಸ್ಥಿತಿ ಕುರಿತು LIVE ವರದಿ ಮಾಡುತ್ತಿದ್ದ ಪತ್ರಕರ್ತೆ ಹಾಗೂ ಕ್ಯಾಮೆರಾಮನ್‌ಗೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ LIVE ಪ್ರಸಾರದ ವೇಳೆಯೇ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೆಕ್ಸಿಕೋದ GamaVisión ಚಾನೆಲ್‌ನ ವರದಿಗಾರ್ತಿ ಅಲ್ಮಾ ಡೆ ಲಾ ರೋಸಾ ಫ್ಲೋರೆಸ್ ಮತ್ತು ಅವರ ಕ್ಯಾಮೆರಾಮನ್ ಗಾಯಗೊಂಡಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಫ್ಲೋರೆಸ್ ಅವರು ಮಳೆಯಿಂದಾಗಿ ರಸ್ತೆಗೆ ಬಿದ್ದಿದ್ದ ಮರದಿಂದ ಉಂಟಾದ ಹಾನಿ ಕುರಿತು LIVE ವರದಿ ಮಾಡುತ್ತಿದ್ದರು. ಈ ವೇಳೆ ಒದ್ದೆಯಾದ ರಸ್ತೆಯಲ್ಲಿ ಏಕಾಏಕಿ ನಿಯಂತ್ರಣ ಕಳೆದುಕೊಂಡ ಜೀಪ್ ಮಾದರಿಯ ಕಾರು ಸ್ಕಿಡ್ ಆಗಿ ಜಾರಿಕೊಂಡು ನೇರವಾಗಿ ಸುದ್ದಿ ತಂಡದತ್ತ ಬಂದಿದೆ.

ಕ್ಷಣಾರ್ಧದಲ್ಲಿ ಕಾರು ಪತ್ರಕರ್ತೆ ಹಾಗೂ ಕ್ಯಾಮೆರಾಮನ್‌ಗೆ ಡಿಕ್ಕಿ ಹೊಡೆದಿದ್ದು, ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಈ ಆಘಾತಕಾರಿ ದೃಶ್ಯ LIVE ಪ್ರಸಾರದಲ್ಲೇ ಸೆರೆಯಾಗಿದ್ದು, ಬಳಿಕ ಪ್ರಸಾರವನ್ನು ತಕ್ಷಣ ಸ್ಟುಡಿಯೋಗೆ ವರ್ಗಾಯಿಸಲಾಯಿತು.

Car Wipes out Mexican TV News Reporter and camera man During Live Coverage
ಭಾರತೀಯ ಸ್ಮಿತ್ ಮಚ್ಛರ್‌ಗೆ ಚಾಕುವಿನಿಂದ ಇರಿದ ಫ್ಲೈದುಬೈ ಕೋ ಪೈಲಟ್: ಹಮಾಮ್ ಅಲ್-ಹಮ್ಮಾಮಿ ಯಾರು?

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಘಟನೆ ಬಳಿಕ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ಇಬ್ಬರು ಪತ್ರಕರ್ತರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಹೆಚ್ಚಿನ ತಪಾಸಣೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆರಂಭಿಕ ವರದಿಗಳ ಪ್ರಕಾರ, ಅಲ್ಮಾ ಹಾಗೂ ಕ್ಯಾಮೆರಾಮನ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರ ಆರೋಗ್ಯ ಸ್ಥಿರವಾಗಿದೆ. ಇತ್ತ ಕಾರಿನ ಚಾಲಕ ಸ್ಥಳದಲ್ಲೇ ಉಳಿದಿದ್ದು, ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ರಸ್ತೆಯ ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ವರದಿ ಮಾಡಲು ತೆರಳಿದ್ದ ಸುದ್ದಿ ತಂಡವೇ LIVE ಪ್ರಸಾರದ ವೇಳೆ ಅಪಘಾತಕ್ಕೆ ಸಿಲುಕಿರುವುದು ಇದೀಗ ಗಮನ ಸೆಳೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com