ನನ್ನಗೆ ಸಾವಿನ ಭಯವಿರಲಿಲ್ಲ: ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ ಸಹ-ಪೈಲಟ್ ಹಮ್ಮಾಮಿ

ವಿಮಾನವನ್ನು ಪತನಗೊಳಿಸುವುದೇ ನನ್ನ ಉದ್ದೇಶವಾಗಿತ್ತು. ನನಗೆ ಸಾವಿನ ಭಯವಿರಲಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' (WSJ) ವರದಿ ಮಾಡಿದೆ.
Flydubai co-pilot Hamam al-Hammami
ಸಹ-ಪೈಲಟ್ ಹಮ್ಮಾಮಿ
Updated on: 

ರಿಯಾದ್: 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಹಾಗೂ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ಆರೋಪವಿರುವ ಫ್ಲೈದುಬೈ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ತನಿಖಾಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾನೆ.

ವಿಮಾನವನ್ನು ಪತನಗೊಳಿಸುವುದೇ ನನ್ನ ಉದ್ದೇಶವಾಗಿತ್ತು. ನನಗೆ ಸಾವಿನ ಭಯವಿರಲಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' (WSJ) ವರದಿ ಮಾಡಿದೆ.

ಹಮ್ಮಾಮಿ ವಿಚಾರಣೆಯ ವಿವರಗಳನ್ನು ತಿಳಿದಿರುವ ಸೌದಿ ಅಧಿಕಾರಿಯೊಬ್ಬರು ಪತ್ರಿಕೆಗೆ ಈ ವಿಷಯ ತಿಳಿಸಿದ್ದು, ವಿಮಾನವನ್ನು ಪತನಗೊಳಿಸುವ ತಮ್ಮ ಉದ್ದೇಶವನ್ನು ಸಹ ಪೈಲಟ್ ಒಪ್ಪಿಕೊಂಡಿದ್ದಾರೆ. ಸಾಯುವ ಬಗ್ಗೆ ಯಾವುದೇ ಭಯವಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಈ ಮಾಹಿತಿಯು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ತೀವ್ರಗಾಮಿ ಸಿದ್ಧಾಂತದತ್ತ ಆಕರ್ಷಿತನಾದ ಹಾಗೂ ತೀವ್ರಗಾಮಿ ಒಲವಿನ ಕಾರಣದಿಂದ ಅಧಿಕಾರಿಗಳ ಗಮನ ಸೆಳೆದಿದ್ದ ಓಮನ್ ಪ್ರಜೆಯಾದ ಹಮ್ಮಾಮಿ, ಹೇಗೆ ಕಾಕ್‌ಪಿಟ್‌ಗೆ ಮರಳಿ ಅಂತಾರಾಷ್ಟ್ರೀಯ ವಿಮಾನವನ್ನು ಚಲಾಯಿಸಲು ಸಾಧ್ಯವಾಯಿತು ಎಂಬುದು ಈಗ ಚರ್ಚೆಯ ವಿಷಯವಾಗಿದೆ.

WSJ ವರದಿಯ ಪ್ರಕಾರ, ಹಮ್ಮಾಮಿ, ಜೂನ್ 2022ರಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿದ್ದ ಮತ್ತು ನಂತರ ಅಳಿಸಿಹಾಕಲಾದ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ವಿಮಾನಯಾನ ಮತ್ತು ವಿಮಾನ ಚಾಲನಾ ತರಬೇತಿಯ (flight training) ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದರು.

ವಿಮಾನಯಾನ ಮತ್ತು ವಿಮಾನ ಚಾಲನಾ ತರಬೇತಿಯನ್ನು ಸುಂದರವಾಗಿಸುವ ವಿಷಯವೇನೆಂದರೆ, ಅದು ಎಂದಿಗೂ ಏಕತಾನತೆಯಿಂದ ಕೂಡಿರುವುದಿಲ್ಲ (ಅಂದರೆ ದಿನನಿತ್ಯದ ಸಾಮಾನ್ಯ ಕೆಲಸದಂತೆ ಇರುವುದಿಲ್ಲ) ಎಂದು ಅವರು ಬರೆದುಕೊಂಡಿದ್ದರು. ಅಲ್ಲದೇ ತಮ್ಮ ಮೊದಲ ಏಕಾಂಗಿ ಹಾರಾಟ (solo flight) ಮತ್ತು ಪ್ರಯಾಣಿಕರನ್ನು ಹೊತ್ತ ವಿಮಾನವನ್ನು ಮೊದಲ ಬಾರಿಗೆ ಲ್ಯಾಂಡ್ ಮಾಡಿದ ಪ್ರಮುಖ ಘಟನೆಗಳನ್ನು ಸಹ ನೆನಪಿಸಿಕೊಂಡಿದ್ದ. ಇವು ಪೈಲಟ್ ಒಬ್ಬರು ಎಂದಿಗೂ ಮರೆಯಲಾಗದ ಅನುಭವಗಳು ಎಂದು ಹೇಳಿಕೊಂಡಿದ್ದರು.

ಕ್ಯಾಪ್ಟನ್ ಮೇಲೆ ನಡೆದ ದಾಳಿಗೆ ಕಾರಣವೇನಾಗಿರಬಹುದು ಮತ್ತು ಫ್ಲೈದುಬೈ ನೇಮಕಾತಿ ಸಮಯದಲ್ಲಿ ಹಮ್ಮಾಮಿಯ ಹಿನ್ನೆಲೆಯನ್ನು ನಿರ್ಲಕ್ಷಿಸಲ್ಪಟ್ಟಿರುವುದರ ಬಗ್ಗೆ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಮಾಮ್‌-ಅಲ್‌-ಹಮ್ಮಾಮಿ ಈ ಮೊದಲು ಸರ್ಕಾರಿ ಸ್ವಾಮ್ಯದ 'ಒಮಾನ್ ಏರ್'ನಲ್ಲಿ ಪೈಲಟ್‌ ಆಗಿ ಕರ್ತವ್ಯ ನಿಭಾಯಿಸಿದ್ದ. ಅಲ್ಲಿ ಆತ ಉಗ್ರಗಾಮಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ ನಂತರ, ಆತನನ್ನು ವಿಮಾನ ಹಾರಾಟದಿಂದ ನಿರ್ಬಂಧಿಸಿತು.

ಆ ಬಳಿಕ ಹಮ್ಮಾಮಿಯನ್ನು ಉಗ್ರಗಾಮಿ ಸಿದ್ಧಾಂತದಿಂದ ಹೊರತರುವ ಕಾರ್ಯಕ್ರಮಕ್ಕೆ ಒಳಪಡಿಸಲಾಯಿತು ಮತ್ತು ಕಚೇರಿ ಕೆಲಸಕ್ಕೆ (ಡೆಸ್ಕ್ ಜಾಬ್) ನಿಯೋಜಿಸಲಾಯಿತು. ಒಮಾನ್ ಏರ್ ತೊರೆದ ನಂತರ ಹಮ್ಮಮಿ ಅಂತಿಮವಾಗಿ ಯುಎಇಯಲ್ಲಿ ಉದ್ಯೋಗವನ್ನು ಪಡೆದ. ಫ್ಲೈದುಬೈ ಫೆಬ್ರವರಿ 2026ರಲ್ಲಿ ಆತನನ್ನು ನೇಮಿಸಿಕೊಂಡಿತು.

Flydubai co-pilot Hamam al-Hammami
FlyDubai ಪೈಲಟ್ ಭಾರತೀಯ ಸ್ಮಿತ್ ಮಚ್ಛರ್‌ಗೆ ಇರಿದ ಕೋ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಯಾರು?

ಆದರೆ ಈ ವಿಮಾನಯಾನ ಸಂಸ್ಥೆಯು ಆತನ ಹಿನ್ನೆಲೆಯ ಬಗ್ಗೆ ಒಮಾನ್‌ ಏರ್‌ನಿಂದ ಯಾವ ಮಾಹಿತಿಯನ್ನೂ ಪಡೆದಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ತನಿಖಾಧಿಕಾರಿಗಳು ಹಮಾಮ್‌-ಅಲ್‌-ಹಮ್ಮಾಮಿ ಸಿರಿಯಾದಲ್ಲಿದ್ದ ಅವಧಿಯ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಒಮಾನಿ ತಂದೆ ಮತ್ತು ಸಿರಿಯನ್ ತಾಯಿಗೆ ಜನಿಸಿದ ಆತ, ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ಆ ದೇಶದಲ್ಲಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಲ್ ಹಮ್ಮಾಮಿ 2024 ರಲ್ಲಿ ಓಮನ್ ಏರ್‌ನಲ್ಲಿ ಸಹ-ಪೈಲಟ್ ತರಬೇತಿದಾರರಾಗಿ ಕೆಲಸ ಮಾಡುತ್ತಿದ್ದಾಗ ಆತ ಉಗ್ರಗಾಮಿ ಸಾಮಗ್ರಿಗಳನ್ನು ಹೊಂದಿರುವುದು ಕಂಡುಬಂದಿತ್ತು. ನಂತರ ಆತನನ್ನು ಹಾರಾಟದಿಂದ ನಿಷೇಧಿಸಲಾಯಿತು ಆದರೆ ಆಡಳಿತಾತ್ಮಕ ಪಾತ್ರದಲ್ಲಿ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಅವಕಾಶ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com