ಬರೀ ಮಾಂಸದ ಮುದ್ದೆಗಳಷ್ಟೇ ಇವೆ...: 300 ಯೋಧರ ಕೊಂದ ರಷ್ಯನ್ ಸೇನಾಧಿಕಾರಿಯಿಂದ ಸೇನಾ ರಹಸ್ಯ ಲೀಕ್! ಉಕ್ರೇನ್‌ಗೆ ಪಲಾಯನ ಮಾಡಿದ್ದೇ ಒಂದು ರೋಚಕ ಸಾಹಸ

ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಡುವೆ, ತನ್ನದೇ ದೇಶದ ಸೇನೆಗೆ ದ್ರೋಹ ಬಗೆದು 300ಕ್ಕೂ ಹೆಚ್ಚು ರಷ್ಯನ್ ಸೈನಿಕರ ಹತ್ಯೆಗೆ ಕಾರಣನಾದ ರಷ್ಯಾದ ಯುವ ಸೇನಾಧಿಕಾರಿಯ ರೋಮಾಂಚನಕಾರಿ ಕಥೆ ಈಗ ಜಾಗತಿಕವಾಗಿ ಭಾರಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:
How A Young Russian Officer Betrayed His Own Army And Killed 300 Soldiers For Ukraine
ಮಾಜಿ ರಷ್ಯನ್ ಸಂವಹನ ಅಧಿಕಾರಿ ಲೆವ್ ಸ್ಟುಪ್ನಿಕೋವ್Online Desk
Updated on: 

ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಡುವೆ, ತನ್ನದೇ ದೇಶದ ಸೇನೆಗೆ ದ್ರೋಹ ಬಗೆದು 300ಕ್ಕೂ ಹೆಚ್ಚು ರಷ್ಯನ್ ಸೈನಿಕರ ಹತ್ಯೆಗೆ ಕಾರಣನಾದ ರಷ್ಯಾದ ಯುವ ಸೇನಾಧಿಕಾರಿಯ ಕಥೆ ಈಗ ಜಾಗತಿಕವಾಗಿ ಭಾರಿ ಸಂಚಲನ ಮೂಡಿಸಿದೆ. ರಷ್ಯನ್ ಸೇನೆಯ ಲೆಫ್ಟಿನೆಂಟ್ ಲೆವ್ ಸ್ಟುಪ್ನಿಕೋವ್ ಎಂಬ 26 ವರ್ಷದ ರಷ್ಯನ್ ಸಂವಹನ ಅಧಿಕಾರಿ ಉಕ್ರೇನ್ ಪರ ಗೂಢಚಾರಿಕೆ ನಡೆಸಿ, 300 ಕ್ಕೂ ಹೆಚ್ಚು ಸೈನಿಕರ ಹತ್ಯೆಗೆ ಕಾರಣವಾಗಿದ್ದಾನೆ. ಇದಾದ ನಂತರ ಅಲ್ಲಿಗೇ ಪಲಾಯನ ಮಾಡಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಅಲ್ಲಿ ಬರೀ ಮಾಂಸದ ಮುದ್ದೆಗಳಷ್ಟೇ ಇವೆ...

ಫೆಬ್ರವರಿ 2024ರಲ್ಲಿ ಪೂರ್ವ ಉಕ್ರೇನ್‌ನ ಮುಂಚೂಣಿಯ ಯುದ್ಧರಂಗದ ಬಳಿ ರಷ್ಯಾದ ಹಿರಿಯ ಅಧಿಕಾರಿಗಳು ಮತ್ತು ಸೈನಿಕರು ತರಬೇತಿಗಾಗಿ ಒಂದೆಡೆ ಜಮಾಯಿಸಿದ್ದರು. ಸ್ಟುಪ್ನಿಕೋವ್ ಈ ಸೈನಿಕರ ಸಂಖ್ಯೆಯನ್ನು ಅಂದಾಜಿಸಿ, ಅವರ ನಿಖರವಾದ ಲೊಕೇಶನ್ ಅನ್ನು ಉಕ್ರೇನಿಯನ್ ಗುಪ್ತಚರ ಅಧಿಕಾರಿಗಳಿಗೆ ರಹಸ್ಯವಾಗಿ ರವಾನಿಸಿದ್ದ. ಮಾಹಿತಿ ಸಿಕ್ಕ ತಕ್ಷಣ ಉಕ್ರೇನ್ ಸೇನೆ ಅಲ್ಲಿಗೆ ಭೀಕರ ಕ್ಷಿಪಣಿ ದಾಳಿ ನಡೆಸಿತು. ದಾಳಿಯ ನಂತರ ಉಕ್ರೇನ್ ಅಧಿಕಾರಿ, "ಅಲ್ಲಿ ಸ್ಫೋಟಗಳಾಯಿತೇ? ಫೋಟೋ ಕಳುಹಿಸು" ಎಂದು ಸ್ಟುಪ್ನಿಕೋವ್‌ಗೆ ಮೆಸೇಜ್ ಮಾಡಿದ್ದರು. ಅದಕ್ಕೆ ಆತ, "ಅಲ್ಲಿ ಫೋಟೋ ತೆಗೆಯಲು ಏನೂ ಉಳಿದಿಲ್ಲ, ಬರೀ ಸೈನಿಕರ ಮಾಂಸದ ಮುದ್ದೆಗಳಷ್ಟೇ ಇವೆ" ಎಂದು ಪ್ರತಿಕ್ರಿಯಿಸಿದ್ದ. ಈ ಒಂದೇ ದಾಳಿಯಲ್ಲಿ ರಷ್ಯಾದ 36ನೇ ಮೋಟರೈಸ್ಡ್ ರೈಫಲ್ ಬ್ರಿಗೇಡ್‌ನ ಕಮಾಂಡರ್ ಕರ್ನಲ್ ಗುಸೇನ್ ಮುಸಾಯೆವ್ ಸೇರಿದಂತೆ 68 ಸೈನಿಕರು ಸಾವನ್ನಪ್ಪಿದ್ದರು.

ಮುಂದುವರೆದು, ಸ್ಟುಪ್ನಿಕೋವ್ ರಷ್ಯಾ ಸೇನೆಯಲ್ಲಿ ಸಿಗ್ನಲ್ಸ್ ಅಧಿಕಾರಿಯಾಗಿದ್ದರಿಂದ ಆತನಿಗೆ ರಷ್ಯಾದ ಯುದ್ಧ ಯೋಜನೆಗಳು, ಸೈನಿಕರ ಚಲನವಲನಗಳು ಮತ್ತು ಡ್ರೋನ್ ಕಂಟ್ರೋಲರ್‌ಗಳ ಸಂಪೂರ್ಣ ಪ್ರವೇಶವಿತ್ತು. ಹಾಗಾಗಿ, ಆತ ನಿರಂತರವಾಗಿ ರಷ್ಯಾದ ರೇಡಿಯೋ ತರಂಗಾಂತರಗಳು ಮತ್ತು ರಹಸ್ಯ ಯೋಜನೆಗಳನ್ನು ಉಕ್ರೇನ್‌ಗೆ ಶೇರ್ ಮಾಡುತ್ತಿದ್ದ. ಇದರೊಂದಿಗೆ, ರಷ್ಯಾದ ನಿಗಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದ ಹಾಗೂ ಡ್ರೋನ್ ಬ್ಯಾಟರಿಗಳನ್ನು ಹಾಳುಗೆಡವಿ ರಷ್ಯಾ ಸೇನೆಗೆ ಒಳಗಿನಿಂದಲೇ ಭಾರಿ ನಷ್ಟ ಉಂಟುಮಾಡುತ್ತಿದ್ದ. ಅದರಂತೆ, ಈತನ ಮಾಹಿತಿ ಆಧಾರಿತ ಸರಣಿ ದಾಳಿಗಳಿಂದಾಗಿ ಒಟ್ಟು 300ಕ್ಕೂ ಹೆಚ್ಚು ರಷ್ಯನ್ ಸೈನಿಕರು ಹತ್ಯೆಯಾಗಿದ್ದಾರೆ.

How A Young Russian Officer Betrayed His Own Army And Killed 300 Soldiers For Ukraine
'ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿ ನಿಲ್ಲಿಸಲು ಸಿದ್ಧ, ಆದ್ರೆ.. ಒಂದು ಷರತ್ತು': Zelensky ಹೇಳಿದ್ದೇನು?

ಉಕ್ರೇನ್‌ಗೆ ಪಲಾಯನ...

ಸರಣಿ ಸಾವುಗಳಿಂದಾಗಿ ರಷ್ಯಾ ಸೇನೆಗೆ ತನ್ನೊಳಗೇ ಗೂಢಚಾರನೊಬ್ಬನಿದ್ದಾನೆ ಎಂಬ ಅನುಮಾನ ಬಲವಾಗಿತ್ತು. ಹಾಗಾಗಿ, ತಾನು ಸಿಕ್ಕಿಬೀಳುವ ಮುನ್ನವೇ, ಜುಲೈ 2024ರಲ್ಲಿ ಸ್ಟುಪ್ನಿಕೋವ್ ಉಕ್ರೇನ್ ಅಧಿಕಾರಿಗಳ ನೆರವಿನಿಂದ ಗಡಿ ದಾಟಿ ಕೈವ್‌ಗೆ ಪಲಾಯನ ಮಾಡಿದ. ಅದರಲ್ಲೂ, ಉಕ್ರೇನ್ ಡ್ರೋನ್‌ಗಳು ಆತನಿಗೆ ಗಡಿ ದಾಟಲು ದಾರಿ ತೋರಿಸಿದ್ದವು. ಪ್ರಸ್ತುತ ಆತ ಉಕ್ರೇನ್ ಪರವಾಗಿ ನಿಂತು, ವ್ಲಾಡಿಮಿರ್ ಪುಟಿನ್ ಆಡಳಿತವನ್ನು ವಿರೋಧಿಸುವ ರಷ್ಯನ್ನರ ಸೈನಿಕ ಪಡೆ ಇಂಟರ್ನ್ಯಾಷನಲ್ ಲೆಜಿಯನ್‌ನ ರಷ್ಯನ್ ವಾಲಂಟಿಯರ್ ಕಾರ್ಪ್ಸ್ ಸೇರಿಕೊಂಡು ತನ್ನದೇ ಹಳೆಯ ದೇಶದ ವಿರುದ್ಧ ಯುದ್ಧ ಮಾಡುತ್ತಿದ್ದಾನೆ. ಏತನ್ಮಧ್ಯೆ, "ನಾನು ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದೆ, ಆದರೆ ಪುಟಿನ್ ಆ ಎಲ್ಲ ತತ್ವಗಳನ್ನು ಧ್ವಂಸಗೊಳಿಸಿದ್ದಾರೆ, ಹಾಗಾಗಿ ನಾನು ನನ್ನ ದೇಶಕ್ಕೆ ದ್ರೋಹ ಮಾಡಿಲ್ಲ" ಎಂದು ಆತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com