ಸೇನೆ ದಾಳಿ ನಡೆಸಿದರೆ ಇರಾನ್, ಹೌತಿಗಳಿಂದ ಪ್ರತೀಕಾರ?: ಅಮೆರಿಕ ಗುಪ್ತಚರ ಮಾಹಿತಿ

ಗುಪ್ತಚರ ಮೌಲ್ಯಮಾಪನಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಅಮೆರಿಕದ ಹೊಸ ದಾಳಿಯ ಸಾಧ್ಯತೆಯನ್ನು ಇರಾನ್ ಮತ್ತು ಹೌತಿಗಳು ಗಂಭೀರವಾಗಿ ಪರಿಗಣಿಸಿವೆ.
Iran-Houthis May Retaliate If US Strikes
ಸೇನೆ ದಾಳಿ ನಡೆಸಿದರೆ ಇರಾನ್-ಹೌತಿಗಳಿಂದ ಪ್ರತೀಕಾರ
Updated on: 

ಟೆಹ್ರಾನ್: ಅಮೆರಿಕ ಸೇನೆ ಇರಾನ್ ಮೇಲೆ ಸೇನಾ ದಾಳಿ ನಡೆಸಿದರೆ, ಅತ್ತ ಇರಾನ್ ಬೆಂಬಲಿತ ಯೆಮೆನ್`ನ ಹೌತಿ ಬಂಡುಕೋರರು ಪ್ರತೀಕಾರ ತೀರಿಸಿಕೊಳ್ಳಬಹುದು ಎನ್ನಲಾಗಿದೆ.

ಈ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆ ಮೂಲಗಳು ಮಾಹಿತಿ ನೀಡಿದ್ದು, 'ಅಮೆರಿಕ ಮತ್ತು ಇಸ್ರೇಲ್ ಮತ್ತೊಂದು ಸುತ್ತಿನ ದಾಳಿ ನಡೆಸಿದರೆ, ಇರಾನ್ ಹಾಗೂ ಯೆಮನ್‌ನ ಹೌತಿ ಬಂಡುಕೋರರು ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಆತಂಕ ಅಮೆರಿಕದ ಗುಪ್ತಚರ ವಲಯದಲ್ಲಿ ಹೆಚ್ಚಾಗಿದೆ' ಎಂದು ವರದಿ ತಿಳಿಸಿದೆ.

ಗುಪ್ತಚರ ಮೌಲ್ಯಮಾಪನಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಅಮೆರಿಕದ ಹೊಸ ದಾಳಿಯ ಸಾಧ್ಯತೆಯನ್ನು ಇರಾನ್ ಮತ್ತು ಹೌತಿಗಳು ಗಂಭೀರವಾಗಿ ಪರಿಗಣಿಸಿವೆ.

ಇರಾನ್ ಮೇಲೆ ದಾಳಿ ನಡೆದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ಸಿಬ್ಬಂದಿ ಮತ್ತು ನೆಲೆಗಳನ್ನು ಇರಾನ್ ಹಾಗೂ ಹೌತಿಗಳು ತ್ವರಿತವಾಗಿ ಗುರಿಯಾಗಿಸಿಕೊಳ್ಳಬಹುದು. ಪ್ರತೀಕಾರದ ಕ್ರಮಗಳು ಮಧ್ಯಪ್ರಾಚ್ಯದ ಗಡಿಗಳನ್ನು ಮೀರಿ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

Iran-Houthis May Retaliate If US Strikes
‘96 ಗಂಟೆಯೊಳಗೆ ದಾಳಿ’: Donald Trump ಆದೇಶಕ್ಕೆ ಕಾಯುತ್ತಿರುವ ಅಮೆರಿಕ ಸೇನೆ, ಇರಾನ್ ಮೇಲೆ ಮತ್ತೆ ಯುದ್ಧದ ಕಾರ್ಮೋಡ?

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜೇ ಕ್ಲೇಟನ್ ಅವರು ಅಕ್ಟೋಬರ್ 23ರಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಕಳುಹಿಸಿದ ಜ್ಞಾಪನ ಪತ್ರದಲ್ಲಿಯೂ ಇರಾನ್‌ನಿಂದ ಅಮೆರಿಕದ ಸಿಬ್ಬಂದಿಯನ್ನು ಗುರಿಯಾಗಿಸುವ ಪ್ರಯತ್ನಗಳು ಹೆಚ್ಚಾಗಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.

ಇರಾನ್‌ನ ಈ ಪ್ರಯತ್ನಗಳು ಮಧ್ಯಪ್ರಾಚ್ಯ ಮಾತ್ರವಲ್ಲದೆ ಇತರ ಕೆಲವು ದೇಶಗಳಲ್ಲಿಯೂ ಮುಂದುವರಿದ ಹಂತ ತಲುಪಿವೆ ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.

ಆದರೆ, ಸದ್ಯಕ್ಕೆ ಇರಾನ್ ಅಥವಾ ಹೌತಿಗಳು ಅಮೆರಿಕದ ಸಿಬ್ಬಂದಿ ಅಥವಾ ಇಸ್ರೇಲ್ ಮೇಲೆ ಮುಂಚಿತವಾಗಿ ದಾಳಿ ನಡೆಸುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಅಂದಾಜಿಸಿದ್ದಾರೆ.

ಅಮೆರಿಕ ಅಥವಾ ಇಸ್ರೇಲ್ ಮೊದಲು ಇರಾನ್ ಮೇಲೆ ದಾಳಿ ನಡೆಸಿದರೆ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com