ಹೌತಿ ದಾಳಿಗೆ ಬ್ರೇಕ್ ಹಾಕಲು ಸೌದಿ ಮಾಸ್ಟರ್ ಪ್ಲ್ಯಾನ್! ಕದನ ವಿರಾಮಕ್ಕೆ ಇರಾನ್ ಮೂಲಕ 8,400 ಕೋಟಿ ರೂ. ಆಫರ್?

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ಬೆನ್ನಲ್ಲೇ, ಹೌತಿ ಬಂಡುಕೋರರು ತಮ್ಮ ದೇಶದ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸೌದಿ ಅರೇಬಿಯಾ 1 ಶತಕೋಟಿ ಡಾಲರ್ ಆರ್ಥಿಕ ಪ್ಯಾಕೇಜ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:
Saudi Arabia Offers $1 Billion Deal via Iran to Halt Houthi Attacks: Report
ಹೌತಿ ದಾಳಿಗೆ ಬ್ರೇಕ್ ಹಾಕಲು ಸೌದಿ ಮಾಸ್ಟರ್ ಪ್ಲ್ಯಾನ್!Online Desk
Updated on: 

ಹೌತಿ-ಸೌದಿ ಕದನಕ್ಕೆ ಬಿಗ್ ಟ್ವಿಸ್ಟ್: ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿಯ ಪ್ರಮುಖ ನಗರಗಳು ಮತ್ತು ಆರ್ಥಿಕ ಮೂಲಸೌಕರ್ಯಗಳ ಮೇಲೆ ಹೌತಿಗಳು ಭೀಕರ ದಾಳಿ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ, ಹೌತಿ ಬಂಡುಕೋರರು ತಮ್ಮ ದೇಶದ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಮತ್ತು ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಸೌದಿ ಅರೇಬಿಯಾವು ಇರಾನ್ ಮಧ್ಯಸ್ಥಿಕೆಯಡಿ 1 ಶತಕೋಟಿ ಡಾಲರ್ (ಸುಮಾರು ₹8,400 ಕೋಟಿಗೂ ಹೆಚ್ಚು) ಆರ್ಥಿಕ ಪ್ಯಾಕೇಜ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:

ಇರಾನ್‌ನಲ್ಲಿ ರಹಸ್ಯ ಸಭೆ

ಸೌದಿ ಅರೇಬಿಯಾದ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಅವರು ಇರಾನ್ ರಾಜಧಾನಿ ಟೆಹ್ರಾನ್‌ಗೆ ಅನಿರೀಕ್ಷಿತ ಭೇಟಿ ನೀಡಿ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಸೌದಿ ಸಚಿವರು ತಾವು ಬಂದಿಳಿದ ಸಿ-130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನದಲ್ಲೇ ಈ 1 ಶತಕೋಟಿ ಡಾಲರ್ ಹಣವನ್ನು ಭೌತಿಕವಾಗಿ ಹೊತ್ತು ತಂದಿದ್ದರು ಎಂದು ರಾಜತಾಂತ್ರಿಕ ಮೂಲವೊಂದು ಕ್ಲೈಮ್ ಮಾಡಿದೆ. ಇನ್ನು, ಈ ಮಾತುಕತೆಯಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಅಧಿಕಾರಿಗಳು ಸೇರಿದಂತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಮತ್ತು ಟರ್ಕಿಯ ಗುಪ್ತಚರ ಮುಖ್ಯಸ್ಥ ಇಬ್ರಾಹಿಂ ಕಲಿನ್ ಕೂಡ ಭಾಗವಹಿಸಿದ್ದರು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಹಾಗಾದ್ರೆ, ಸೌದಿ ಅರೇಬಿಯಾ ಹಣ ನೀಡಲು ಮುಂದಾಗಿದ್ದೇಕೆ?

ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳು, ವಿಮಾನ ನಿಲ್ದಾಣಗಳು ಮತ್ತು ಸೇನಾ ನೆಲೆಗಳ ಮೇಲೆ ನಿರಂತರವಾಗಿ ನಡೆಸುತ್ತಿರುವ ಡ್ರೋನ್ ಮತ್ತು ಮಿಸೈಲ್ ದಾಳಿಗಳಿಂದ ಸೌದಿ ಆರ್ಥಿಕತೆಗೆ ಭಾರಿ ನಷ್ಟವಾಗುತ್ತಿದ್ದು, ಇದನ್ನು ತಡೆಯುವುದು ರಿಯಾದ್‌ನ ಮುಖ್ಯ ಉದ್ದೇಶವಾಗಿದೆ. ಅದರಲ್ಲೂ, ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ, ಹೌತಿ ನಿಯಂತ್ರಣದಲ್ಲಿರುವ ಯೆಮನ್ ಪ್ರಾಂತ್ಯಗಳಲ್ಲಿ ನಾಗರಿಕ ಮೂಲಸೌಕರ್ಯಗಳ ಮರುನಿರ್ಮಾಣ ಮತ್ತು ಅಲ್ಲಿನ ಸರ್ಕಾರಿ ನೌಕರರ ವೇತನ ಪಾವತಿಗಾಗಿ ಸೌದಿ ಹಣಕಾಸಿನ ನೆರವು ನೀಡಬೇಕಿತ್ತು. ಆದರೆ, ಸೌದಿ ಈ ಒಪ್ಪಂದದಿಂದ ಹಿಂದೆ ಸರಿದಿದೆ ಎಂದು ಆರೋಪಿಸಿ ಹೌತಿಗಳು ಇತ್ತೀಚೆಗೆ ದಾಳಿ ತೀವ್ರಗೊಳಿಸಿದ್ದರು.

Saudi Arabia Offers $1 Billion Deal via Iran to Halt Houthi Attacks: Report
ಸೌದಿ ಅರೇಬಿಯಾದ ಸಚಿವಾಲಯ, ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಹೌತಿ ಬಂಡುಕೋರರು, Video

ಮುಂದುವರೆದು, ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ಗೆ ರಕ್ಷಣಾ ಸಚಿವರು ಭೇಟಿ ನೀಡಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಭೇಟಿಯು ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಕತಾರ್ ಹಾಗೂ ಪಾಕಿಸ್ತಾನದ ಮಧ್ಯಸ್ಥಿಕೆಯ ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ನೀಡಲು ಕೈಗೊಂಡ ಕ್ರಮವಾಗಿದೆ ಎಂದು ತಿಳಿಸಿದೆಯಾದರೂ, 1 ಶತಕೋಟಿ ಡಾಲರ್ ಹಣದ ಆಫರ್ ಅಥವಾ ವರ್ಗಾವಣೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಇದರ ನಡುವೆಯೇ, ಸೌದಿ ಅಧಿಕಾರಿಗಳು, ಹೌತಿಗಳ ಮಿಲಿಟರಿ ಬ್ಲ್ಯಾಕ್‌ಮೇಲ್‌ಗಳಿಗೆ ಸೌದಿ ಮಣಿಯುವುದಿಲ್ಲ. ಹೌತಿಗಳು ಯೆಮನ್‌ನ ಕಾನೂನುಬದ್ಧ ಸರ್ಕಾರದಿಂದ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ಮರಳಿ ನೀಡುವವರೆಗೂ ಹಣ ವರ್ಗಾವಣೆ ಸಾಧ್ಯವಿಲ್ಲ ಎಂಬ ಷರತ್ತನ್ನೂ ಸೌದಿ ವಿಧಿಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com