ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಬಳಿಕ ಸುರಂಗವು ಅವಶೇಷಗಳಿಂದ ಮುಚ್ಚಿಹೋಗಿತ್ತು. ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ವೇಳೆ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
The two men, identified as Sanjay Shah and Kabir Maharjan, were pulled out during an ongoing search and rescue operation at the hydropower project.
ಕಾರ್ಮಿಕರ ರಕ್ಷಣೆ ಮಾಡುತ್ತಿರುವುದು.
Updated on

ಕಠ್ಮಂಡು: ಭೀಕರ ಮಹಾ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಒಂದು ಅದ್ಭುತ ಪವಾಡ ನಡೆದಿದೆ. ಪ್ರವಾಹದ ಸಂಭವಿಸಿ ಒಂಬತ್ತು ದಿನಗಳು ಕಳೆದಿದ್ದರೂ, ತ್ರಿಶೂಲಿ-3A ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ

ಈ ಬೆಳವಣಿಗೆಯಿಂದ ಸುರಂಗದೊಳಗೆ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆ ಬಗ್ಗೆ ರಕ್ಷಣಾ ಸಿಬ್ಬಂದಿಯಲ್ಲಿ ಭರವಸೆ ಮೂಡಿದೆ.

ರಕ್ಷಿಸಲಾದ ಇಬ್ಬರನ್ನು ಮೆಕ್ಯಾನಿಕಲ್ ಫೋರ್‌ಮನ್ ಮತ್ತು ಮೆಕ್ಯಾನಿಕಲ್ ಸೂಪರ್‌ವೈಸರ್ ಎಂದು ಗುರುತಿಸಲಾಗಿದೆ.

ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಬಳಿಕ ಸುರಂಗವು ಅವಶೇಷಗಳಿಂದ ಮುಚ್ಚಿಹೋಗಿತ್ತು. ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ವೇಳೆ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಧನ ಸಚಿವ ಬಿರಾಜ್ ಭಕ್ತ ಶ್ರೇಷ್ಠ ಅವರು ತ್ರಿಶೂಲಿ-3ಎ ಸುರಂಗದಿಂದ ಓರ್ವ ಕಾರ್ಮಿಕನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ಕಾರ್ಮಿಕನನ್ನೂ ರಕ್ಷಿಸಲಾಯಿತು ಎಂದು ತಿಳಿದುಬಂದಿದೆ.

“ಇನ್ನೊಬ್ಬ ವ್ಯಕ್ತಿಯನ್ನೂ ರಕ್ಷಿಸಲಾಗಿದೆ ಎಂಬ ಸುದ್ದಿ ಇದೀಗ ನಮಗೆ ಬಂದಿದೆ” ಎಂದು ಗೃಹ ಸಚಿವ ಸುಡಾನ್ ಗುರುಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

The two men, identified as Sanjay Shah and Kabir Maharjan, were pulled out during an ongoing search and rescue operation at the hydropower project.
ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಮೊದಲ ಕಾರ್ಮಿಕನನ್ನು ಮಣ್ಣಿನಿಂದ ಆವೃತವಾಗಿರುವ ಸ್ಥಿತಿಯಲ್ಲಿ ರಕ್ಷಣಾ ಸಿಬ್ಬಂದಿಯೊಬ್ಬರು ಹೆಗಲ ಮೇಲೆ ಹೊತ್ತು ಹೊರಗೆ ಕರೆತರುತ್ತಿರುವ ದೃಶ್ಯಗಳನ್ನು ಸ್ಥಳೀಯ ದೂರದರ್ಶನ ವಾಹಿನಿಗಳು ಪ್ರಸಾರ ಮಾಡಿವೆ.

ತ್ರಿಶೂಲಿ ನದಿಯ ತೀರದಲ್ಲಿರುವ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯಿಂದ ಕನಿಷ್ಠ 557 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಈ ಪೈಕಿ ಸುಮಾರು 115 ಮಂದಿ ಮುಖ್ಯ ಸುರಂಗದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ನೇಪಾಳದ ಸ್ವತಂತ್ರ ವಿದ್ಯುತ್ ಉತ್ಪಾದಕರ ಸಂಘ ತಿಳಿಸಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿರುವ ಅಧಿಕಾರಿಗಳು, ಸುರಂಗದೊಳಗೆ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.

ಆಗಸ್ಟ್ 26ರಂದು ಸಂಭವಿಸಿದ ಪ್ರವಾಹವು ಹಿಮನದಿ ಕುಸಿತದಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರವಾಹದಿಂದ ನೇಪಾಳದ ಹಲವು ಪಟ್ಟಣಗಳು ಮತ್ತು ಕಣಿವೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಭಾರೀ ಪ್ರಮಾಣದ ನಾಶ-ನಷ್ಟ ಸಂಭವಿಸಿದೆ.

ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಪ್ರವಾಹದಲ್ಲಿ ಕನಿಷ್ಠ 1,259 ಮಂದಿ ಮೃತಪಟ್ಟಿದ್ದು, 5,000ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಇನ್ನು ನೇಪಾಳದ 12 ಜಲವಿದ್ಯುತ್ ಯೋಜನೆಗಳಿಂದ ಸುಮಾರು 900 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಅವರಲ್ಲಿ ಸುಮಾರು 500 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com