ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್ ಹೊರಗೆ ಭಾರತೀಯ ಮೂಲದ ಮಹಿಳೆಗೆ ಗುಂಡಿಕ್ಕಿ ಹತ್ಯೆ, ಆರೋಪಿ ಆತ್ಮಹತ್ಯೆ!

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ಪನೇರಾದ ಹೊರಗೆ ಭಾರತೀಯ ಮೂಲದ 38 ವರ್ಷದ ಮಹಿಳೆ ಶಾಲಿನಿ ಠಾಕೂರ್ ಎಂಬಾಕೆಯನ್ನು ಯುವಕನೋರ್ವ ರೋಹಿತ್ ಕೊಲೆ ಮಾಡಿ ನಂತರ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Rohit-Shalini
ರೋಹಿತ್-ಶಾಲಿನಿ ಠಾಕೂರ್
Updated on

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ಪನೇರಾದ ಹೊರಗೆ ಭಾರತೀಯ ಮೂಲದ 38 ವರ್ಷದ ಮಹಿಳೆ ಶಾಲಿನಿ ಠಾಕೂರ್ ಎಂಬಾಕೆಯನ್ನು ಯುವಕನೋರ್ವ ರೋಹಿತ್ ಕೊಲೆ ಮಾಡಿ ನಂತರ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಕ್ರಮೆಂಟೋ ಕೌಂಟಿ ತನಿಖಾಧಿಕಾರಿ ಶಾಲಿನಿಯನ್ನು ಬಲಿಪಶು ಎಂದು ಗುರುತಿಸಿದ್ದಾರೆ. ವರದಿಗಳ ಪ್ರಕಾರ, ಅವರು ಹೋವೆ ಅವೆನ್ಯೂ ಮತ್ತು ನಾರ್ತ್‌ರಾಪ್ ಅವೆನ್ಯೂ ಬಳಿಯ ಶಾಪಿಂಗ್ ಪ್ಲಾಜಾದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ 22 ವರ್ಷದ ರೋಹಿತ್ ಎಂಬಾತ ಆಕೆಯ ಬಳಿಕ ಹೋಗಿದ್ದಾನೆ. ರೋಹಿತ್ ನನ್ನು ನೋಡಿ ಶಾಲಿನಿ ಓಡಿ ಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಆಕೆಯನ್ನು ಹಿಂಬಾಲಿಸಿದ ರೋಹಿತ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

Rohit-Shalini
ಲಂಡನ್ ನಲ್ಲಿ ವಿರಾಟ್ ಕೊಹ್ಲಿ, 'ಮಹಾ' ಡಿಸಿಎಂ ಏಕನಾಥ್ ಶಿಂಧೆ ದಿಢೀರ್ ಭೇಟಿ! ಕಾರಣವೇನು ಗೊತ್ತಾ?

ರೋಹಿತ್ ಅಕ್ರಮ ವಲಸಿಗನಾಗಿದ್ದು, ಈ ಹಿಂದೆ ಅರಿಜೋನಾದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಲಿನಿ ಹತ್ಯೆ ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಘಟನಾ ಸ್ಥಳದಲ್ಲಿದ್ದ ಕೆಲವರಿಂದ ಆರೋಪಿ ಬಳಸಿದ ವಾಹನದ ಕುರಿತ ಮಾಹಿತಿ ಪಡೆದರು. ಇದಾದ ಕೆಲವೇ ನಿಮಿಷಗಳ ನಂತರ, ಪೂರ್ವ ದಿಕ್ಕಿನತ್ತ ಕಾರಿನಲ್ಲಿ ಆರೋಪಿ ಹೋಗುತ್ತಿರುವುದು ಪತ್ತೆ ಹಚ್ಚಿದ ಪೊಲೀಸರು ಆರೋಪಿಗೆ ಕಾರು ನಿಲ್ಲಿಸುವಂತೆ ಸೂಚಿಸಿದರು. ಪೊಲೀಸರನ್ನು ಕಂಡ ಆರೋಪಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com