ಇಂದೇ ನಿಮ್ಮ ಕೊನೆಯ ದಿನ! ಮುಂಜಾನೆ 6 ಗಂಟೆಗೆ ಬಂದ ಇಮೇಲ್ ಶಾಕ್: ಒರಾಕಲ್‌ನಲ್ಲಿ ಸಾವಿರಾರು ಉದ್ಯೋಗಿಗಳ ದಿಢೀರ್ ವಜಾ, ಭಾರತದಲ್ಲೂ ಆತಂಕ!

ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ ಸಂಸ್ಥೆಯು ತನ್ನ ವ್ಯಾಪಕ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ಇಂದು ಮುಂಜಾನೆ 6 ಗಂಟೆಗೆ ತನ್ನ ಸಾವಿರಾರು ಉದ್ಯೋಗಿಗಳಿಗೆ ಇಮೇಲ್ ಕಳುಹಿಸುವ ಮೂಲಕ ಭಾರಿ ಉದ್ಯೋಗ ಕಡಿತದ ಹೊಸ ಪ್ರಕ್ರಿಯೆಯನ್ನು ಆರಂಭಿಸಿದೆ. ಆ ಕುರಿತ ವರದಿ ಇಲ್ಲಿದೆ:
Oracle Layoffs: Tech Giant Sacks Thousands via 6 AM Email, Revokes System Access Ahead of Notice
ಒರಾಕಲ್ ಕಂಪನಿಯಿಂದ ಮಹಾ ಲೇಆಫ್!AI Image
Updated on

ನವದೆಹಲಿ: ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ (Oracle) ಸಂಸ್ಥೆಯು ತನ್ನ ವ್ಯಾಪಕ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ಇಂದು ಮುಂಜಾನೆ 6 ಗಂಟೆಗೆ ತನ್ನ ಸಾವಿರಾರು ಉದ್ಯೋಗಿಗಳಿಗೆ ಇಮೇಲ್ ಕಳುಹಿಸುವ ಮೂಲಕ ಭಾರಿ ಉದ್ಯೋಗ ಕಡಿತದ ಹೊಸ ಪ್ರಕ್ರಿಯೆಯನ್ನು ಆರಂಭಿಸಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವೆಚ್ಚ ನಿಯಂತ್ರಣಕ್ಕಾಗಿ ಕಂಪನಿಯು ಈ ಕಠಿಣ ನಿರ್ಧಾರ ಕೈಗೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಕಂಪನಿಯು ಬಳಸಿದ ವಿಧಾನವು ಜಾಗತಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಇಂದೇ ಕೊನೆಯ ದಿನ ಎಂಬ ಮುಂಜಾನೆ 6 ಗಂಟೆಯ ಇಮೇಲ್ ಆಘಾತ

ವರದಿಗಳ ಪ್ರಕಾರ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳ ಒರಾಕಲ್ ಉದ್ಯೋಗಿಗಳಿಗೆ ಬೆಳಗಿನ ಜಾವ 6 ಗಂಟೆಗೆ (ಸ್ಥಳೀಯ ಸಮಯ) ಕಂಪನಿಯ ನಾಯಕತ್ವದಿಂದ ಇಮೇಲ್ ಸಂದೇಶ ಬಂದಿದೆ. ಆ ಇಮೇಲ್‌ನಲ್ಲಿ, "ಕಂಪನಿಯ ಪ್ರಸ್ತುತ ಅಗತ್ಯಗಳನ್ನು ಪರಿಗಣಿಸಿ ವ್ಯಾಪಕ ಸಾಂಸ್ಥಿಕ ಬದಲಾವಣೆಗಾಗಿ ನಿಮ್ಮ ಹುದ್ದೆಯನ್ನು ರದ್ದುಗೊಳಿಸಲಾಗುತ್ತಿದೆ. ಇಂದೇ ನಿಮ್ಮ ಕೊನೆಯ ಕೆಲಸದ ದಿನವಾಗಿರುತ್ತದೆ" ಎಂದು ಅತ್ಯಂತ ದಿಢೀರನೆ ತಿಳಿಸಲಾಗಿದೆ.

ಇಮೇಲ್ ಬರುವ ಮುನ್ನವೇ ಸಿಸ್ಟಂ ಆಕ್ಸೆಸ್ ಕಟ್

ವಿಷಾದದ ಸಂಗತಿಯೆಂದರೆ, ಉದ್ಯೋಗಿಗಳಿಗೆ ಈ ಇಮೇಲ್ ತಲುಪುವ ಮುನ್ನವೇ ಅವರ ಆಫೀಸ್ ಸಿಸ್ಟಂ ಲಾಗಿನ್ ಲಿಂಕ್‌ಗಳನ್ನು ಡೀಆಕ್ಟಿವೇಟ್ ಮಾಡಲಾಗಿತ್ತು. ಅದರಂತೆ, ಬೆಳಗಿನ ಜಾವ 4 ಗಂಟೆಗೆ ಲಾಗಿನ್ ಸಿಸ್ಟಂಗಳು ಸ್ಥಗಿತಗೊಂಡವು.5 ರಿಂದ 5:30 ರ ಅವಧಿಯಲ್ಲಿ ಆಫೀಸ್ ಸಂವಹನ ಮಾಧ್ಯಮವಾದ 'Slack' ನಿಂದ ಉದ್ಯೋಗಿಗಳನ್ನು ಹೊರಹಾಕಲಾಯಿತು. ಕೊನೆಗೆ 6 ಗಂಟೆಗೆ ಉದ್ಯೋಗ ಕಡಿತದ ಇಮೇಲ್ ಕಳುಹಿಸಲಾಯಿತು. ಇದರಿಂದಾಗಿ ಉದ್ಯೋಗಿಗಳಿಗೆ ಕನಿಷ್ಠ ತಮ್ಮ ಸಹೋದ್ಯೋಗಿಗಳಿಗೆ ಬೀಳ್ಕೊಡುಗೆ ಸಂದೇಶ ಕಳುಹಿಸಲೂ ಸಮಯ ಸಿಗಲಿಲ್ಲ.

ಮುಂದುವರೆದು, ಲಿಂಕ್ಡ್‌ಇನ್ ಮತ್ತು ರೆಡ್ಡಿಟ್‌ನಂತಹ ಜಾಲತಾಣಗಳಲ್ಲಿ ಉದ್ಯೋಗಿಗಳು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಕಂಪನಿಯಲ್ಲಿ ಸತತವಾಗಿ ಉತ್ತಮ ರೇಟಿಂಗ್ಸ್ ಮತ್ತು ಪ್ರದರ್ಶನ ನೀಡಿದ್ದ ಹಿರಿಯ ಉದ್ಯೋಗಿಗಳನ್ನು ಹಾಗೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದವರನ್ನೂ ಸಹ ಈ ಬಾರಿ ಕೆಲಸದಿಂದ ತೆಗೆದುಹಾಕಲಾಗಿದೆ. ತಕ್ಷಣವೇ ಲ್ಯಾಪ್‌ಟಾಪ್ ಮತ್ತು ಇಮೇಲ್ ಆಕ್ಸೆಸ್ ಕಳೆದುಕೊಂಡಿದ್ದರಿಂದ, ಮುಂದಿನ ಪರಿಹಾರ ಧನ ಮತ್ತು ದಾಖಲೆಗಳ ಪ್ರಕ್ರಿಯೆಗಾಗಿ ಉದ್ಯೋಗಿಗಳು ತಮ್ಮ ವೈಯಕ್ತಿಕ ಇಮೇಲ್ ಐಡಿಗಳನ್ನು ನೀಡುವಂತೆ ಸೂಚಿಸಲಾಗಿದೆ.

Oracle Layoffs: Tech Giant Sacks Thousands via 6 AM Email, Revokes System Access Ahead of Notice
Oracle ಬೆನ್ನಲ್ಲೇ 3ನೇ ಅತಿ ದೊಡ್ಡ layoffs ಗೆ Amazon ಸಿದ್ಧತೆ: 14000 ಉದ್ಯೋಗಗಳಿಗೆ ಕತ್ತರಿ; 3 ವರ್ಷದಲ್ಲಿ 57 ಸಾವಿರ ನೌಕರಿ ಕಡಿತ!

ಭಾರತೀಯ ಉದ್ಯೋಗಿಗಳಲ್ಲಿ ಆತಂಕ:

ಈ ಹೊಸ ಉದ್ಯೋಗ ಕಡಿತವು ಸದ್ಯ ಅಮೆರಿಕದಲ್ಲಿ ಆರಂಭವಾಗಿದ್ದು, ಜಾಗತಿಕವಾಗಿ ಸುಮಾರು 7,000 ದಿಂದ 10,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಭಾರತದಲ್ಲಿರುವ ಒರಾಕಲ್ ಡೆವಲಪ್‌ಮೆಂಟ್ ಸೆಂಟರ್ ಉದ್ಯೋಗಿಗಳಲ್ಲಿಯೂ ತೀವ್ರ ಆತಂಕ ಮೂಡಿದೆ.

ಹಾಗಾದ್ರೆ, ಈ ಉದ್ಯೋಗ ಕಡಿತಕ್ಕೆ ಕಾರಣವೇನು?

ಒರಾಕಲ್ ಈಗಾಗಲೇ ಮೇ 31 ಕ್ಕೆ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ 13 ರಷ್ಟು ಅಂದರೆ ಸುಮಾರು 21,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಪ್ರಸ್ತುತ ಕಂಪನಿಯಲ್ಲಿ 1.41 ಲಕ್ಷ ಉದ್ಯೋಗಿಗಳಿದ್ದಾರೆ. ಇನ್ನು, ಅದಕ್ಕೆ ಪ್ರಮುಖ ಕಾರಣ ಪ್ರಸ್ತುತ ಒರಾಕಲ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವುದೇ ಆಗಿದೆ. ಹೌದು, ಒರಾಕಲ್ ಕಂಪನಿಯು ಡೇಟಾ ಸೆಂಟರ್‌ಗಳು ಮತ್ತು ಎಐ ತಂತ್ರಜ್ಞಾನಕ್ಕಾಗಿ ಈ ಮೊದಲ ತ್ರೈಮಾಸಿಕದಲ್ಲಿ ಬರೋಬ್ಬರಿ $28.5 ಬಿಲಿಯನ್ ಹೂಡಿಕೆ ಮಾಡಿದ್ದು, ಒಟ್ಟಾರೆ ಈ ವರ್ಷ $90 ಬಿಲಿಯನ್‌ನಿಂದ $95 ಬಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ. ಈ ಭಾರಿ ಹೂಡಿಕೆಯಿಂದ ಉಂಟಾಗಿರುವ ವೆಚ್ಚವನ್ನು ಸರಿದೂಗಿಸಲು ಉದ್ಯೋಗ ಕಡಿತದ ಹಾದಿ ಹಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com