ಢಾಕಾ–ಲಂಡನ್ ವಿಮಾನದಲ್ಲಿ ಟಿ ಶರ್ಟ್ ಹರಿದುಕೊಂಡು ಪರಸ್ಪರ ಹೊಡೆದಾಡಿಕೊಂಡ ಪ್ರಯಾಣಿಕರು; Video Viral

ಈ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಲ್ಲಿ, ಅದರಲ್ಲೂ ಮಕ್ಕಳು ಮತ್ತು ವೃದ್ಧರಲ್ಲಿ ಆತಂಕ ಉಂಟಾಯಿತು. ಸೆಪ್ಟೆಂಬರ್ 16, 2026ರಂದು ತಾನು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದಾಗಿ ತಿಳಿಸಿರುವ ಉದ್ದಿನ್ ಅಲಿಮ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ
Dhaka-London Flight Turns Into Fight Club
ವಿಮಾನದೊಳಗೆ ಹೊಡೆದಾಟ
Updated on

ಬಿಮಾನ ಬಾಂಗ್ಲಾದೇಶ ಏರ್‌ಲೈನ್ಸ್‌ನ ವಿಮಾನದೊಳಗೆ ಇಬ್ಬರು ಪ್ರಯಾಣಿಕರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನವು ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಪ್ರಯಾಣಿಕರ ನಡುವಿನ ವಾಗ್ವಾದ ಬಳಿಕ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಿರುಗಿತು.

ಈ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಲ್ಲಿ, ಅದರಲ್ಲೂ ಮಕ್ಕಳು ಮತ್ತು ವೃದ್ಧರಲ್ಲಿ ಆತಂಕ ಉಂಟಾಯಿತು. ಸೆಪ್ಟೆಂಬರ್ 16, 2026ರಂದು ತಾನು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದಾಗಿ ತಿಳಿಸಿರುವ ಉದ್ದಿನ್ ಅಲಿಮ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

Dhaka-London Flight Turns Into Fight Club
ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ!

ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡ ಅಲಿಮ್, “ನಾನು ಸೆಪ್ಟೆಂಬರ್ 16ರಂದು ಬಿಮಾನ ಬಾಂಗ್ಲಾದೇಶ ಏರ್‌ಲೈನ್ಸ್‌ನ ವಿಮಾನದಲ್ಲೇ ಇದ್ದೆ. ವಿಮಾನ ಹಾರಾಟದಲ್ಲಿದ್ದಾಗ ಅತ್ಯಂತ ಆತಂಕಕಾರಿ ಘಟನೆಯೊಂದಕ್ಕೆ ನಾನು ಸಾಕ್ಷಿಯಾದೆ. ಪ್ರಯಾಣಿಕರ ನಡುವೆ ಹೊಡೆದಾಟ ಆರಂಭವಾಗಿ, ವಿಮಾನದೊಳಗೆ ಭಯದ ವಾತಾವರಣ ನಿರ್ಮಾಣವಾಯಿತು ಎಂದು ಬರೆದಿದ್ದಾರೆ.

ವಿಮಾನದಲ್ಲಿ ಮಕ್ಕಳು ಮತ್ತು ವೃದ್ಧರು ಇದ್ದಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಯಾಗಿಸಿತು. ಈ ಘಟನೆಯೊಂದಿಗೆ ಅವರಿಗೆ ಯಾವುದೇ ಸಂಬಂಧವಿರಲಿಲ್ಲ. ಆದರೂ ಅವರು ಈ ವರ್ತನೆಯನ್ನು ಕಣ್ಣಾರೆ ನೋಡಬೇಕಾಯಿತು ಹಾಗೂ ಇದರಿಂದ ಉಂಟಾದ ಭಯ ಮತ್ತು ಒತ್ತಡವನ್ನು ಎದುರಿಸಬೇಕಾಯಿತು. ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿರುವಾಗ, ಅಪಾಯಕಾರಿ ಪರಿಸ್ಥಿತಿಯಿಂದ ಸುಮ್ಮನೆ ದೂರ ಸರಿಯಲು ಸಾಧ್ಯವಾಗದ ಸ್ಥಿತಿಯನ್ನು ಊಹಿಸಿ ನೋಡಿ ಎಂದು ಅಲಿಮ್ ಹೇಳಿದ್ದಾರೆ.

ವಿಮಾನ ಹತ್ತುವಾಗ ಪ್ರತಿಯೊಬ್ಬರೂ ಸುರಕ್ಷಿತವಾಗಿರುವ ಭಾವನೆಯನ್ನು ನಿರೀಕ್ಷಿಸುತ್ತಾರೆ. ಆದರೆ, ಏಕಾಏಕಿ ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನೋಡುವುದು ಅತ್ಯಂತ ಭಯಾನಕ ಅನುಭವ ಎಂದು ಅವರು ಹೇಳಿದ್ದಾರೆ. ತಾನು ಅಲ್ಲಿಯೇ ಇದ್ದು, ನಡೆದ ಘಟನೆಯನ್ನು ಸ್ವತಃ ಕಣ್ಣಾರೆ ನೋಡಿದ್ದೇನೆ ಎಂದು ಅಲಿಮ್ ತಿಳಿಸಿದ್ದಾರೆ.

ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಮೊದಲು ವಾಗ್ವಾದ ನಡೆಸಿ, ಬಳಿಕ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಹೊಡೆದಾಟದ ವೇಳೆ ಒಂದು ಹಂತದಲ್ಲಿ ಪ್ರಯಾಣಿಕರೊಬ್ಬರ ಟಿ-ಶರ್ಟ್ ಹರಿದುಹೋಗಿದೆ.

ನಂತರ ಕ್ಯಾಬಿನ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ, ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ.

ಈ ಕುರಿತು ಬಿಮಾನ ಬಾಂಗ್ಲಾದೇಶ ಏರ್‌ಲೈನ್ಸ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಜನರಲ್ ಮ್ಯಾನೇಜರ್ ಮಹಬುಬುದ್ದೀನ್ ಅಹ್ಮದ್ , ‘ಢಾಕಾ ಟ್ರಿಬ್ಯೂನ್’ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com