ಇನ್ಮುಂದೆ AI ಅಲ್ಲ SI; ಇಂಟರ್‌ನೆಟ್‌ಗಿಂತಲೂ ದೊಡ್ಡ ಕ್ರಾಂತಿ ಎನ್ನುತ್ತಾ, ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಿದ ಟ್ರಂಪ್

ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅಳವಡಿಸುವ ಅದ್ಬುತ ಕಲೆಯಾಗಿರುವ ಕೃತಕ ಬುದ್ಧಿಮತ್ತೆಯ ಹೆಸರನ್ನು ಅಧಿಕೃತವಾಗಿ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಲು ವಿಶೇಷ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Trump Officially Replaces AI With Super Intelligence Across US Government
ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಿದ ಟ್ರಂಪ್Online Desk
Updated on: 

ವಾಷಿಂಗ್ಟನ್ ಡಿ. ಸಿ. (ಅಮೆರಿಕ): ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅಳವಡಿಸುವ ಅದ್ಬುತ ಕಲೆಯಾಗಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅರ್ಥಾತ್ ಕೃತಕ ಬುದ್ಧಿಮತ್ತೆಯ ಹೆಸರನ್ನು ಅಧಿಕೃತವಾಗಿ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಲು ವಿಶೇಷ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ವಿಶ್ವದ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳಾದ ಇಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್, ಸುಂದರ್ ಪಿಚೈ ಮತ್ತು ಜೆನ್ಸನ್ ಹುವಾಂಗ್ ಅವರೊಂದಿಗೆ ವೈಟ್ ಹೌಸ್‌ನಲ್ಲಿ ನಡೆಸಿದ ಜಂಟಿ ಶೃಂಗಸಭೆಯ ನಂತರ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹೆಸರು ಬದಲಾವಣೆಗೆ ಟ್ರಂಪ್ ನೀಡಿದ ಕಾರಣವೇನು?

ಟ್ರಂಪ್ ಪ್ರಕಾರ, "ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವಾಗ ಅದರಲ್ಲಿರುವ ಆರ್ಟಿಫಿಶಿಯಲ್'(ಕೃತಕ/ನಕಲಿ) ಎಂಬ ಪದವು ತಪ್ಪು ಕಲ್ಪನೆ ಮೂಡಿಸುತ್ತದೆ. ಇದು ಕೃತಕವಲ್ಲ, ಇದು ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯುನ್ನತ ಬುದ್ಧಿಮತ್ತೆಯಾಗಿದೆ. ಹೀಗಾಗಿ ಇದಕ್ಕೆ ಸೂಪರ್ ಇಂಟೆಲಿಜೆನ್ಸ್ (SI) ಅತ್ಯಂತ ಸೂಕ್ತ ಹಾಗೂ ಸರಳವಾದ ಹೆಸರಾಗಿದೆ" ಎಂದು ಸಮರ್ಥಿಸಿಕೊಂಡಿದ್ದು, ಇಂದಿನ ಆಧುನಿಕ ತಂತ್ರಜ್ಞಾನವು ಕೇವಲ ಮಾನವ ಬುದ್ಧಿಮತ್ತೆಯನ್ನು ಅನುಕರಿಸುವುದಷ್ಟೇ ಅಲ್ಲದೆ, ಅದನ್ನೂ ಮೀರಿ ಬೆಳೆದಿದೆ. ಆದ್ದರಿಂದ ಸರ್ಕಾರದ ದಾಖಲೆಗಳಲ್ಲಿ ಹೊಸ ಯುಗಕ್ಕೆ ತಕ್ಕ ಹೆಸರಿರಬೇಕು ಎಂದು ತಿಳಿಸಿದ್ದಾರೆ.

ಹೊಸ ಆದೇಶದ ನಿಯಮಗಳೇನು?

ಅಮೆರಿಕ ಸರ್ಕಾರದ ಎಲ್ಲಾ ಇಲಾಖೆಗಳು, ಏಜೆನ್ಸಿಗಳು ತಮ್ಮ ಅಧಿಕೃತ ಪತ್ರವ್ಯವಹಾರ, ವೆಬ್‌ಸೈಟ್‌ಗಳು, ವರದಿಗಳು ಮತ್ತು ನೀತಿ ದಾಖಲೆಗಳಲ್ಲಿ ಇನ್ಮುಂದೆ AI ಪದದ ಬದಲಿಗೆ Super Intelligence ಅಥವಾ SI ಎಂಬ ಪದವನ್ನೇ ಬಳಸಬೇಕು ಎಂದು ಆದೇಶಿಸಲಾಗಿದೆ. ಆದರೆ, ಇದು ಹಳೆಯ ಒಪ್ಪಂದಗಳು ಅಥವಾ ಹಿಂದಿನ ದಾಖಲೆಗಳಿಗೆ ಅನ್ವಯಿಸುವುದಿಲ್ಲ. ಬದಲಾಗಿ, ಇನ್ಮುಂದೆ ಹೊಸದಾಗಿ ಹೊರಬರುವ ಯಾವುದೇ ಸರ್ಕಾರಿ ಪ್ರಕಟಣೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಹೆಸರನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Trump Officially Replaces AI With Super Intelligence Across US Government
ಭಾರತದ ಎಸ್ಸಾರ್ ಸಮೂಹದಿಂದ "ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಉಕ್ಕು ಘಟಕ ನಿರ್ಮಾಣ": ಟ್ರಂಪ್ ಘೋಷಣೆ

ಏತನ್ಮಧ್ಯೆ, ವಿಜ್ಞಾನಿಗಳು ಮತ್ತು ಕಂಪ್ಯೂಟರ್ ಸಂಶೋಧಕರ ಪ್ರಕಾರ, ತಾಂತ್ರಿಕ ಜಗತ್ತಿನಲ್ಲಿ ಸೂಪರ್ ಇಂಟೆಲಿಜೆನ್ಸ್ ಎನ್ನುವುದು ಮಾನವನ ಒಟ್ಟಾರೆ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ಮೀರಿಸುವ ಅತ್ಯುನ್ನತ ಹಂತದ ತಂತ್ರಜ್ಞಾನಕ್ಕೆ ಬಳಸುವ ಪದವಾಗಿದೆ. ಇಂದಿನ ತಂತ್ರಜ್ಞಾನ ಇನ್ನು ಆ ಮಟ್ಟಕ್ಕೆ ತಲುಪಿಲ್ಲ. ಹಾಗಾಗಿ ಟ್ರಂಪ್ ಅವರ ಈ ಬ್ರ್ಯಾಂಡಿಂಗ್ ಬದಲಾವಣೆ ಕೇವಲ ರಾಜಕೀಯ ಪ್ರಚಾರ ಮತ್ತು ತಂತ್ರಜ್ಞಾನದ ಮೇಲಿನ ನಿಯಂತ್ರಣ ಸಡಿಲಗೊಳಿಸುವ ತಂತ್ರ ಇರಬಹುದು ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com